ಬಳ್ಳಾರಿ: ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಬಳ್ಳಾರಿ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ ಮಂಡಳಿ ಬಳ್ಳಾರಿ ಇವರ ಜಂಟಿ ಸಹಯೋಗದೊಂದಿಗೆ ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಅರಿವು ಮತ್ತು ತಪಾಸಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಇನಾಯತ್ ಭಾಗ್ ಬಾನ್ ನಿಗಮದ ನಿಯಂತ್ರಣಾಧಿಕಾರಿಗಳು ಅಧ್ಯಕ್ಷತೆಯನ್ನು ವಹಿಸಿ, ಕ್ಯಾನ್ಸರ್ ಎಂದಾಕ್ಷಣಕ್ಕೆ ಬಯಬೇಡ ಆದರೆ ಅರಿವು ಮತ್ತು ಮುಂಜಾಗ್ರತಾ ತಪಾಸಣೆಯನ್ನು ಮಾಡಿಸಿಕೊಂಡಲ್ಲಿ ತಡೆಗಟ್ಟಬಹುದು. ಈ ಉದ್ದೇಶ FPAI ಬಳ್ಳಾರಿ ಅವರು ನಮ್ಮ ಮಹಿಳಾ ಸಿಬ್ಬಂದಿಗಳಿಗೆ ಗರ್ಭ ಕಂಠದ ಪೂರ್ವಭಾವಿ ಪತ್ತೆ ಮಾಡುವುದಕ್ಕೆ ಮುಂದೆ ಬಂದಿರುವುದು ಶ್ಲಾಘನೀಯ ಎಂದು ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾದ ವಿಠಲ್ ಅಧ್ಯಕ್ಷರು FPAI ಬಳ್ಳಾರಿ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ, ಮಹಿಳೆಯರಿಗೆ ಗರ್ಭ ಕಂಠದ ಕ್ಯಾನ್ಸರಿನ ತಿಳುವಳಿಕೆ ಹಾಗೂ ತಪಾಸಣೆಯ ಅನಿವಾರ್ಯತೆ ಬಗ್ಗೆ ಹಾಗೂ HPV ಲಸಿಕೆ ಬಗ್ಗೆ ತಿಳಿಸಿದರು.
ತದನಂತರ ಶ್ರೀಮತಿ ಎಸ್ ವಿಜಯಲಕ್ಷ್ಮೀ ಶಾಖಾ ವ್ಯವಸ್ಥಾಪಕರು FPAI ಬಳ್ಳಾರಿ ಇವರು ಸಂಪನ್ಮೂಲ ವ್ಯಕ್ತಿ ಆಗಿ HPV ವೈರಸ್ ಮತ್ತು ಗರ್ಭಕಂಠದ ಕ್ಯಾನ್ಸರ್ ಹಾಗೂ HPV ಲಸಿಕೆಯ ಪ್ರಮಾಣದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೆರೆದಂಥ ಮಹಿಳಾ ಸಿಬ್ಬಂದಿಗೆ ತಿಳಿಸಿದರು.
ಕಾರ್ಯಕ್ರಮದ ನಂತರ ಸ್ಮಾರ್ಟ್ ಸ್ಕೋಪ್ ಮೂಲಕ ಗರ್ಭ ಕಂಠದ ಕ್ಯಾನ್ಸರ್ ನ ತಪಾಸಣೆ ಮಾಡಲಾಯಿತು. ಬಂಡೆ ಗೌಡ್ರು ಜೂನಿಯರ್ ಅಸ್ಸಿಟೆಂಟ್ KKRTC ಈ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕೆ ಅವರಿಗೆ FPAI ಬಳ್ಳಾರಿ ಧನ್ಯವಾದಗಳನ್ನು ತಿಳಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ