ಮಂಗಳೂರು: ವಿದ್ಯಾ ಸಕ್ಷಮ 2024 ಯೋಜನೆಯಡಿಯಲ್ಲಿ ಪ್ರತಿಭಾನ್ವಿತ ದಿವ್ಯಾಂಗ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ನಿರ್ಧರಿಸಲಾಗಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಶೇಷ ಚೇತನ ವಿದ್ಯಾರ್ಥಿಗಳು ಸಕ್ಷಮದ ಕಾರ್ಯಕರ್ತರ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಜುಲೈ 22 ರ ಒಳಗೆ ಅರ್ಜಿಯನ್ನು ಭರ್ತಿ ಮಾಡಿ ತಲುಪಿಸಬೇಕು ಜುಲೈ 22 ಅರ್ಜಿ ಸ್ವೀಕಾರಕ್ಕೆ ಕೊನೆಯ ದಿನಾಂಕ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ವಿದ್ಯಾಸಕ್ಷಮ ವಿದ್ಯಾರ್ಥಿ ವೇತನ ಪ್ರಸ್ತುತ 10ನೇ ತರಗತಿ, ಪಿಯುಸಿ, ಯಾವುದೇ ಪದವಿ ಹಾಗೂ ವೃತ್ತಿಪರ ತರಗತಿಗಳಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯವಾಗುತ್ತದೆ.
ವಿದ್ಯಾಸಕ್ಷಮ ಅರ್ಜಿ ನಮೂನೆ ಹಾಗೂ ಲಗತ್ತಿಸಬೇಕಾದ ದಾಖಲೆ ಪತ್ರಗಳ ವಿವರಗಳು ಮತ್ತು ಹೆಚ್ಚಿನ ಮಾಹಿತಿಗಾಗಿ ಸಕ್ಷಮ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಕಾರ್ಯದರ್ಶಿ ಹರೀಶ್ ಪ್ರಭು (9900 531 679) ಅವರನ್ನು ಸಂಪರ್ಕಿಸಬಹುದು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ