ಮಂಗಳೂರು: ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಮಂಗಳೂರು ಆತಿಥ್ಯದಲ್ಲಿ ಕರ್ನಾಟಕ ರಾಜ್ಯಮಟ್ಟದ ಒಂದು ದಿನದ ದೀಕ್ಷಾಪಿಎಸ್‌ಟಿ ತರಬೇತಿ ಕಾರ್ಯಾಗಾರ ನಗರದ ಮಲ್ಲಿಕಟ್ಟೆ ಲಯನ್ ಸೇವಾ ಭವನದಲ್ಲಿ ನಡೆಯಿತು.
ಯಶಸ್ವಿ ರಾಷ್ಟ್ರೀಯ ಅಧ್ಯಕ್ಷ ಚಿತ್ರ ಕುಮಾರ್ ಕಾರ್ಯಾಗಾರ ಉದ್ಘಾಟಿಸಿದರು. ಕರ್ನಾಟಕ ರಾಜ್ಯದ ಪ್ರಾದೇಶಿಕ ಘಟಕಗಳ ಪರಿಚಯ ಮತ್ತು ಸಾಧನೆ ವಿವರಿಸಿ, ತರಬೇತಿಗೆ ಆಗಮಿಸಿದ ಪ್ರಾದೇಶಿಕ ಘಟಕಗಳ ಅಧ್ಯಕ್ಷರು ಕಾರ್ಯದರ್ಶಿ ಖಜಾಂಚಿ ಘಟಕದ ಪದಾಧಿಕಾರಿಗಳ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ತಿಳಿ ಹೇಳಿದರು.
ಸಂಸ್ಥೆಯ ಆಡಳಿತ ವಿಭಾಗ ರಾಷ್ಟ್ರೀಯ ನಿರ್ದೇಶಕ ನವೀನ್ ಅಮೀನ್ ಅಧ್ಯಕ್ಷತೆ ವಹಿಸಿದ್ದರು. ಪೂರ್ವ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮುಖ್ಯ ತರಬೇತಿದಾರ ಡಾಕ್ಟರ್ ಕೇದಿಗೆ ಅರವಿಂದ್ ರಾವ್, sci ರಾಷ್ಟ್ರೀಯ ಕಾನೂನು ಸಲಹೆಗಾರ ನಾಗೇಶ್, ರಾಷ್ಟ್ರೀಯ ಉಪಾಧ್ಯಕ್ಷ ಡಿ ಕಿಶೋರ್ ಫರ್ನಾಂಡಿಸ್, ಬಿ ಹುಸೇನ್ ಹೈಕಾಡಿ, ಪುಷ್ಪಾ ಶೆಟ್ಟಿ, ಡಾ. ಶಿವಕುಮಾರ್, ರಾಷ್ಟ್ರೀಯ ನಿರ್ದೇಶಕ ಒರಿಯೆಂಟೇಶನ್ ಕೆಪಿಎ ರಹಮಾನ್, ಮಂಗಳೂರು ಘಟಕದ ನಿಕಟಪೂರ್ವ ಅಧ್ಯಕ್ಷ ಅಶೋಕ್ ಎಂ.ಕೆ, ಕಾರ್ಯದರ್ಶಿ ಸುನಂದ ಶಿವರಾಮ್ , ಪಿಎಸ್‌ಟಿ ತರಬೇತಿ ಕಾರ್ಯಕ್ರಮದ ಕಾರ್ಯಕ್ರಮ ನಿರ್ದೇಶಕ ವಿಕಾಸ್ ಶೆಟ್ಟಿ ಉಪ ಸ್ಥಿತರಿದ್ದರು. sci ಮಂಗಳೂರು ಘಟಕದ ಅಧ್ಯಕ್ಷ ದತ್ತಾತ್ರೇಯ ಬಾಳ ಸ್ವಾಗತಿಸಿ ಅನಿಲ್ ಪಿಂಟೋ ಹಾಗೂ ಹರೀಶ್ ಅತಿಥಿ ಪರಿಚಯ ಮಾಡಿದರು.
ಈ ಸಂದರ್ಭದಲ್ಲಿ ಹೊಸ ಘಟಕವಾದ sci ಪುತ್ತೂರು ಘಟಕ ಇದರ ಅಧ್ಯಕ್ಷೆ ಮಲ್ಲಿಕಾ ಜೆ ಆರ್ ರೈ ಅವರನ್ನು sci ರಾಷ್ಟ್ರೀಯ ಅಧ್ಯಕ್ಷ ಚಿತ್ರ ಕುಮಾರ್ ಶಾಲು ಹಾಕಿ ಗೌರವಿಸಿದರು. ಪದಾಧಿಕಾರಿಗಳು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ