ಬಳ್ಳಾರಿ: ಬಳ್ಳಾರಿಯ ಪ್ರತಿಷ್ಠಿತ ವೀರಶೈವ ವಿದ್ಯಾವರ್ಧಕ ಸಂಘದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದ (ಆರ್.ವೈ.ಎಂ.ಇ.ಸಿ) - ಉಪಪ್ರಾಂಶುಪಾಲರು ಹಾಗೂ ವಿದ್ಯುನ್ಮಾನ ಮತ್ತು ಸಂಪರ್ಕ ವಿಭಾಗದ ಪ್ರಾಧ್ಯಾಪಕರಾದ ಡಾ|| ಸವಿತಾ ಸೊನೊಳಿ (ಚಿತ್ರಿಕಿ) ಯವರಿಗೆ ಭಾರತೀಯ ಶಿಕ್ಷಣ ಸಂಸ್ಥೆ ಐ.ಎಸ್.ಟಿ.ಇ (Indian Society for Technical Education-ISTE)ವತಿಯಿಂದ 2023ನೇ ಸಾಲಿನ ರಾಷ್ಟ್ರೀಯ ಅತ್ಯುತ್ತಮ ಮಹಿಳಾ ಇಂಜಿನಿಯರಿಂಗ್ ಕಾಲೇಜ್ ಶಿಕ್ಷಕಿ (National Award for the Best Women Engineering College Teacher for the Year -2023) ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಈ ಪ್ರಶಸ್ತಿಯು ಪದಕ, ಪ್ರಮಾಣ ಪತ್ರ ಹಾಗೂ ನಗದು ಬಹುಮಾನವನ್ನು ಒಳಗೊಂಡಿದೆ.
ಇತ್ತೀಚೆಗೆ ಒರಿಸ್ಸಾದ ಭುವನೇಶ್ವರ್‌ದಲ್ಲಿರುವ ಕಳಿಂಗ ಇನ್‌ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ (KIIT) ವಿಶ್ವವಿದ್ಯಾಲಯದಲ್ಲಿ ಜರುಗಿದ ಭಾರತೀಯ ಶಿಕ್ಷಣ ಸಂಸ್ಥೆಯ 53ನೇಯ ರಾಷ್ಟ್ರೀಯ ಸಮ್ಮೇಳನದಲ್ಲಿ ಡಾ|| ಸವಿತಾ ಸೊನೊಳಿ ಯವರಿಗೆ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಡಾ|| ಸವಿತಾ ಸೊನೊಳಿಯವರ ಕಳೆದ 26 ವರ್ಷಗಳ ತಾಂತ್ರಿಕ ಶಿಕ್ಷಣದಲ್ಲಿನ ಸಾಧನೆ, ಸಂಶೋಧನೆ, ನೆಚ್ಚಿನ ಅಧ್ಯಾಪಕಿಯಾಗಿ ವಿದ್ಯಾರ್ಥಿಗಳಿಗೆ ತರಬೇತಿ, ಮಾರ್ಗದರ್ಶನ, 60 ಸಂಶೋಧನ ಪ್ರಬಂಧಗಳು, 2 ಪೇಟೆಂಟ್‌ಗಳ ಪ್ರಕಟಣೆ, 30 ಲಕ್ಷಕ್ಕೂ ಹೆಚ್ಚು ರೂಪಾಯಿಗಳ ಸಂಶೋಧನ ಅನುದಾನ ಗಳಿಕೆ, 5 ಸಂಶೋಧನ ವಿದ್ಯಾರ್ಥಿಗಳಿಗೆ ಇವರ ಮಾರ್ಗದರ್ಶನದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದಿಂದ ಡಾಕ್ಟರೇಟ್ ಪದವಿ, ತಾಂತ್ರಿಕ ಪುಸ್ತಕ ರಚನೆ, ಸಿಇಟಿ ವಿದ್ಯಾರ್ಥಿಗಳಿಗೆ ವೃತ್ತಿ ಸಮಾಲೋಚನೆ ತರಬೇತಿ, ವಿವಿಧ ಕಾಲೇಜುಗಳಲ್ಲಿ ವಿಶೇಷ ಉಪಾನ್ಯಾಸಗಳು, ಅಮೇರಿಕದ ವಿವಿಧ ವಿಶ್ವವಿದ್ಯಾಲಯಗಳಿಗೆ ಶೈಕ್ಷಣಿಕ ಅಧ್ಯಯನ ಪ್ರವಾಸ. ಈ ರೀತಿಯಾಗಿ, ಇವರ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ರಾಷ್ಟ್ರೀಯ ಮಟ್ಟದ ಈ ಪ್ರಶಸ್ತಿಯನ್ನು ಅವರಿಗೆ ಪ್ರದಾನ ಮಾಡಲಾಯಿತು.
ಕೆ.ಐ.ಐ.ಟಿ ಮತ್ತು ಕೆ.ಐ.ಎಸ್.ಎಸ್ ಡೀಮ್ಡ್ ಯೂನಿವರ್ಸಿಟಿ ಸಂಸ್ಥಾಪಕ ಅಚ್ಯುತ್ ಸಮಂತಾ ಉಪಕುಲಪತಿ ಪ್ರೊ. ದೀಪಕ್ ಕುಮಾರ್ ಬೆಹರಾ, ಪ್ರೊ. ಸರಂಜಿತ್ ಸಿಂಗ್, ಐ.ಎಸ್.ಟಿ.ಇ ಅಧ್ಯಕ್ಷ ಪ್ರೊ. ಪ್ರತಾಪ್ ಸಿಂಗ್ ಕಾಕಾ ಸಾಹೇಬ್ ದೇಸಾಯಿ, ಉಪಾಧ್ಯಕ್ಷ ಡಾ|| ಗುಜ್ಜಲ ವೆಂಕಟಸುಬ್ಬಯ್ಯ, ಆರ್. ಬಾಸ್ಕರ್, ಖಾಜಂಚಿ, ಪ್ರೊ. ಶರಣಪ್ಪ ಜಿ. ಮಲಶೆಟ್ಟಿ, ನಿರ್ವಾಹಕ ಕಾರ್ಯದರ್ಶಿ ಡಾ|| ಎಸ್.ಎಂ. ಅಲಿ ಅವರು ಡಾ|| ಸವಿತಾ ಸೊನೊಳಿಯವರಿಗೆ ಈ ಪ್ರಶಸ್ತಿಯನ್ನು ನೀಡಿ ಅಭಿನಂದಿಸಿದರು.
ಈ ಸಾಧನೆಯನ್ನು ಶ್ಲಾಘಿಸಿ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಜಾನಕುಂಟೆ ಬಸವರಾಜ್ ಅವರು ಡಾ|| ಸವಿತಾ ಸೊನೊಳಿಯವರು ರಾಷ್ಟ್ರಮಟ್ಟದ ಈ ಪ್ರಶಸ್ತಿಗಳಿಸಿ, ಈ ಭಾಗದಲ್ಲಿ ಅಪರೂಪದ ಸಾಧನೆಗೈದು ನಮ್ಮ ವೀ.ವಿ. ಸಂಘಕ್ಕೂ (ವೀರಶೈವ ವಿದ್ಯಾವರ್ಧಕ ಸಂಘ), ಮಹಾವಿದ್ಯಾಲಯಕ್ಕೂ ಹಾಗೂ ತಮ್ಮ ಕುಟುಂಬಕ್ಕೂ ಕೀರ್ತಿ ತಂದಿದ್ದಾರೆ. ಇದು ಕಾಲೇಜಿನ ಎಲ್ಲಾ ಸಿಬ್ಬಂದಿಗಳಿಗೆ ಮಾದರಿಯಾಗಿದ್ದು, ಇದೇ ರೀತಿ ಎಲ್ಲರೂ ಸಾಧನೆ ಮಾಡುವಂತಾಗಬೇಕು, ಅದಕ್ಕೆ ಅಗತ್ಯವಾದ ಎಲ್ಲಾ ಪ್ರೋತ್ಸಾಹ ನೀಡುವುದಾಗಿ ತಿಳಿಸಿದರು.
ವೀ.ವಿ. ಸಂಘದ ಅಧ್ಯಕ್ಷರಾದ ಅಲ್ಲಂ ಗುರುಬಸವರಾಜ, ಉಪಾಧ್ಯಕ್ಷ ಜಾನೇಕುಂಟೆ ಬಸವರಾಜ, ಕಾರ್ಯದರ್ಶಿ ಡಾ.ಅರವಿಂದ್ ಪಟೇಲ್, ಸಹ ಕಾರ್ಯದರ್ಶಿ ಯಾಳ್ಪಿ ಮೇಟಿ ಪಂಪನಗೌಡ, ಕೋಶಾಧಿಕಾರಿ ಬೈಲುವದ್ದಿಗೇರಿ ಯರ‍್ರಿಸ್ವಾಮಿ ಅವರು ಅಭಿನಂದಿಸಿ ಶುಭ ಹಾರೈಸಿದರು. ಇದೇ ರೀತಿ ಡಾ|| ಟಿ.ಹನುಮಂತ ರೆಡ್ಡಿ, ಪ್ರಾಂಶುಪಾಲರು ಹಾಗೂ ಎಲ್ಲಾ ವಿಭಾಗದ ಮುಖ್ಯಸ್ಥರುಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ