ಸುರತ್ಕಲ್: ಹಿಂದು ವಿದ್ಯಾದಾಯಿನೀ ಸಂಘದ ಆಡಳಿತಕ್ಕೊಳಪಟ್ಟ ಅನುದಾನಿತ ವಿದ್ಯಾದಾಯಿನೀ ಪ್ರೌಢ ಶಾಲೆಯುಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಿಸಲಾಯಿತು. ಶಾಲಾ ಹಳೆವಿದ್ಯಾರ್ಥಿ, ಬಿ.ಎ.ಎಸ್.ಎಫ್ ಇಂಡಿಯಾ ಲಿಮಿಟೆಡ್‌ನ ನಿವೃತ್ತ ಡಿ.ಜಿ.ಎಂ. ರಾಜಶೇಖರ ಭಟ್ ಕಾಕುಂಜೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಸೈನಿಕರನ್ನು ಗೌರವಿಸುವುದರಿಂದ ವಿದ್ಯಾರ್ಥಿಗಳಲ್ಲಿ ರಾಷ್ಟ್ರ ರಕ್ಷಣೆಯ ಭಾವನೆ ಬೆಳೆಯಲು ಸಾಧ್ಯ ಹಾಗೂ ದೇಶವನ್ನು ಕಟ್ಟುವಲ್ಲಿ ಮುಂದಿನ ಯುವ ಜನಾಂಗ ಸಾಧ್ಯವಾದಷ್ಟು ಮುಂದೆ ಬಂದು ದೇಶ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಭಾರತೀಯ ನೌಕಾಪಡೆ ಜಲಾಂತರ್ಗಾಮಿಯ ಮಾಜಿ ಮುಖ್ಯ ಮೆಕ್ಯಾನಿಷಿಯನ್ ಆದ ಎಸ್ ರಂಗನಾಥ್ ಇವರು ಶಾಲಾ ವತಿಯಿಂದ ನೀಡಲಾದ ಸೈನಿಕ ಗೌರವಾರ್ಪಣೆಯನ್ನು ಸ್ವೀಕರಿಸಿ, ದೇಶ ರಕ್ಷಣೆಯು ಒಂದು ಉದ್ಯೋಗ ಅಲ್ಲ ಇದು ಒಂದು ಸೇವೆ ಎಂದು ಹೇಳಿ ತಮ್ಮ ಸೇವಾ ಅನುಭವಗಳನ್ನು ಮತ್ತು ನೌಕಾಪಡೆ ಜಲಾಂತರ್ಗಾಮಿಯ ಯುದ್ದದ ಸಂದರ್ಭದಲ್ಲಿನ ಪರಿಸ್ಥಿತಿಯನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ವಿದ್ಯಾದಾಯಿನೀ ಹಳೆವಿದ್ಯಾರ್ಥಿ ಸಂಘ (ರಿ), ಸುರತ್ಕಲ್ ಇದರ ನೂತನ ಅಧ್ಯಕ್ಷ ವಿನಯ ಆಚಾರ್ಯ ಇವರು ತಾವು ಕಲಿತ ವಿದ್ಯೆಯನ್ನು ತಮ್ಮ ಜೀವನದಲ್ಲಿ ಯಾವ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಥೆಯ ಮೂಲಕ ತಿಳಿಸಿದರು.
ವೇದಿಕೆಯಲ್ಲಿ ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಸುಜಯ ಉಪಸ್ಥಿತರಿದ್ದರು ಹಾಗೂ ಸಂಘದ ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ಶಾಲಾ ಸಂಚಾಲಕ ಸುಧಾಕರ ರಾವ್ ಪೇಜಾವರ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಶಾಲಾ ಮುಖ್ಯೋಪಾಧ್ಯಾಯರಾದ ಬಾಲಚಂದ್ರ ಕೆ., ಧನ್ಯವಾಧ ಸಮರ್ಪಣೆಯನ್ನು, ದಿವಸ್ಪತಿ ಕಾರ್ಯಯಕ್ರಮ ನಿರೂಪಿಸಿದರು. ಎಲ್ಲಾ ಶಿಕ್ಷಕ ಹಾಗೂ ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ದೇಶ ಸೇವೆ ಮಾಡಿ ದೇಶಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ ವೀರ ಯೋಧರನ್ನು ಸ್ಮರಿಸುವ ದೇಶಭಕ್ತಿ ಗೀತೆಯನ್ನು ಶಾಲಾ ವಿದ್ಯಾರ್ಥಿ ಕುಮಾರಿ ನೀಹಾರಿಕ ಹಾಡಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ