ಏತಡ್ಕ ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆ

Upayuktha
0


ಏತಡ್ಕ: "ದೇವತಾರಾಧನೆಯು ಸಂಸ್ಕಾರದ ಭಾಗವಾಗಬೇಕು ಎನ್ನುವ ದೃಷ್ಟಿಯಿಂದ ಪೂರ್ವಿಕರು ದೇವಾಲಯಗಳನ್ನು ಪ್ರತಿಷ್ಠಾಪಿಸಿದರು ಎನ್ನುವ ಎಚ್ಚರಿಕೆ ಪ್ರತಿಯೊಬ್ಬ ಭಾರತೀಯನಿಗೂ ಬೇಕು. ಅದನ್ನು ಸದೃಢ ಸ್ಥಿತಿಯಲ್ಲಿರಿಸುವುದು ಆಗ ಕರ್ತವ್ಯವಾಗುತ್ತದೆ. ನಮ್ಮ ಭಾವನಾತ್ಮಕ ಆಂತರಿಕ ಚೈತನ್ಯ ವೃದ್ಧಿಯಾದಾಗ ದೇಶ ಬಾಳಿ ಬೆಳಗಿ ದೃಢವಾಗುತ್ತದೆ" ಎಂದು ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಹೇಳಿದರು.


ಅವರು ಏತಡ್ಕ ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವದ ಕುರಿತು ಪೂರ್ವಭಾವಿ ಸಭೆಯಲ್ಲಿ ದಿಕ್ಸೂಚಿ ಮಾತನ್ನಾಡಿದರು. ಅಷ್ಟಬಂಧ ಬ್ರಹ್ಮ ಕಲಶೋತ್ಸವದ ದಿನಾಂಕ ಘೋಷಣಾ ಫಲಕದ ಶಿವಾರ್ಪಣೆ ಹಾಗೂ ಮನವಿ ಪತ್ರವನ್ನು ಲೋಕಾರ್ಪಣೆ ಮಾಡಿದರು.


ವೇದಿಕೆಯಲ್ಲಿ ಉತ್ಸವ ಸಮಿತಿಯ ಗೌರವಾಧ್ಯಕ್ಷ ಡಾ. ವೈ. ಸುಬ್ರಾಯ ಭಟ್, ಗೌರವ ಉಪಾಧ್ಯಕ್ಷ ವೈ.ಶಂಕರ ಭಟ್, ಅಧ್ಯಕ್ಷರು ಮತ್ತು ಆಡಳಿತ ಮೊಕ್ತೇಸರರಾದ ವೈ. ಶಾಮ ಭಟ್, ಮೊಕ್ತೇಸರರಲ್ಲೊ ಬ್ಬರಾದ ವೈ.ವಿ‌.ಸುಬ್ರಹ್ಮಣ್ಯ ಉಪಸ್ಥಿತರಿದ್ದರು. ಪ್ರಾಸ್ತಾವಿಕವಾಗಿ ವೈ. ಶಾಮ ಭಟ್ಟರು ಮಾತನಾಡಿದ್ದರು.


ಸಭೆಯನ್ನುದ್ದೇಶಿಸಿ ಉಬರ್ ಸಂಸ್ಥೆಯ ಅಂತಾರಾಷ್ಟ್ರೀಯ ನಿರ್ದೇಶಕರಲ್ಲೊಬ್ಬರಾದ ಶ್ರೀಮತಿ ಮೇಘಾ ಏತಡ್ಕ ಶುಭಾಶಯ ನುಡಿಗಳನ್ನಾಡಿದರು.


ಆರಂಭದಲ್ಲಿ ಕು.ಜಾಹ್ನವಿ ಆನೆಪ್ಪಳ್ಳ ಹಾಗೂ ಕು.ರಮ್ಯ ಆನೆಪ್ಪಳ್ಳ ಪ್ರಾರ್ಥನೆಗೈದರು. ಚಂದ್ರಶೇಖರ ಕಾರ್ಯಕ್ರಮ ನಿರೂಪಿಸಿದರು. ಡಾ.ವೈ.ವಿ. ಕೃಷ್ಣಮೂರ್ತಿ ಧನ್ಯವಾದ ಸಮರ್ಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top