ನಿಟ್ಟೆ: "ತಾಯಿಯ ಮಡಿಲು ಮಮತೆಯ ಒಡಲು" ಕಾರ್ಯಾಗಾರ

Upayuktha
0


ನಿಟ್ಟೆ:
ನಿಟ್ಟೆ ಕೆಮ್ಮಣ್ಣಿನ ಕೂರಾಡಿ ಕಮಲಗುಡ್ಡೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರೋಟರಿ ಕ್ಲಬ್ ನಿಟ್ಟೆ ಮತ್ತು ಸಮುದಾಯ ಆರೋಗ್ಯ ಕೇಂದ್ರ, ನಿಟ್ಟೆ ಇವರ ಜಂಟಿ ಆಶ್ರಯದಲ್ಲಿ 'ತಾಯಿಯ ಮಡಿಲು ಮಮತೆಯ ಒಡಲು' -ತಾಯಿ ಮತ್ತು ಮಕ್ಕಳ ಆರೋಗ್ಯ ಮಾಹಿತಿ ಕಾರ್ಯಾಗಾರ ಮತ್ತು ಆರೋಗ್ಯ  (ಬಿ.ಪಿ. ಮತ್ತು ಶುಗರ್) ತಪಾಸಣೆ ಶಿಬಿರ ಇಂದು ನಡೆಯಿತು. 


ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋ. ಸತೀಶ್ ಕುಮಾರ್, ಅಧ್ಯಕ್ಷರು, ನಿಟ್ಟೆ ರೋಟರಿ ಕ್ಲಬ್ ವಹಿಸಿದ್ದರು.  ಮುಖ್ಯ ಅತಿಥಿಯಾಗಿ ನಿಟ್ಟೆ ಸಮುದಾಯ ಕೇಂದ್ರದ ವೈದ್ಯಾಧಿಕಾರಿ ಡಾ. ಶ್ರೀನಿವಾಸ್ ಪೈ ಸಭೆಯನ್ನು ಉದ್ದೇಶಿಸಿ ಸಾಂಕ್ರಾಮಿಕ ರೋಗಗಳ ನಿಯಂತ್ರಣದ ಮಹತ್ವದ ಬಗ್ಗೆ  ಮಾತನಾಡಿದರು.


ಸಂಪನ್ಮೂಲ ವ್ಯಕ್ತಿ ಅರುಣಾ ಅವರು ಮಕ್ಕಳಿಗೆ ಎದೆ ಹಾಲಿನ ಮಹತ್ತ್ವ ಮತ್ತು ತಾಯಿಯ ಆರೈಕೆಯ ಕುರಿತು ಅರಿವು ಮೂಡಿಸಿದರು. ಸುಮಾರು 75 ಮಂದಿ ಗ್ರಾಮಸ್ಥರು  ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿದ್ದರು. ಈ ಕಾರ್ಯಾಗಾರದ ನಿರ್ದೇಶಕರಾದ ರೋ. ಗೋಪಾಲ ಶೆಟ್ಟಿ, ಆರೋಗ್ಯ ತಪಾಸಣೆಯ ಮಹತ್ವ ಮತ್ತು ನಾವು ತಿನ್ನುವ ಆಹಾರ ಪದ್ಧತಿಯ ಬಗ್ಗೆ ಸಾರ್ವಜನಿಕರಿಗೆ ತಿಳಿ ಹೇಳಿದರು.  


ರೋಟರಿ ಕ್ಲಬ್ ನಿಟ್ಟೆ ಇದರ ಕಾರ್ಯದರ್ಶಿ ರೋ. ಡಾ. ರಘುನಂದನ್ ಕಾರ್ಯಕ್ರಮ ನಿರೂಪಿಸಿದರು. ರೋಟರಿ ಸಮುದಾಯ ದಳದ ಅಧ್ಯಕ್ಷ ಪ್ರದೀಪ್ ಸುವರ್ಣ, ಶಾಲಾ ಮುಖ್ಯೋಪಾಧ್ಯಾಯಿನಿ ಗ್ರೆಟ್ಟ ರೆಬೆಲ್ಲೋ ವೇದಿಕೆಯಲ್ಲಿ ಉಪಸ್ಥಿತಿದ್ದರು. ಆರ್. ಸಿ. ಸಿ ಯ ಹಿರಿಯ ಸದಸ್ಯ ಪ್ರಕಾಶ್ ಕೋಟ್ಯಾನ್ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  



Post a Comment

0 Comments
Post a Comment (0)
Advt Slider:
To Top