ನಾಟಾ ಪರೀಕ್ಷೆ: ವಿವೇಕಾನಂದ ಪಿಯು ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

Upayuktha
0


 ಪುತ್ತೂರ: ಕೌನ್ಸಿಲ್‌ ಆಫ್‌ ಆರ್ಕಿಟೆಕ್ಚರ್, ನವದೆಹಲಿ ನಡೆಸಿದ ನ್ಯಾಷನಲ್‌ ಆಪ್ಟಿಟ್ಯೂಡ್‌ ಟೆಸ್ಟ್‌ ಇನ್ ಆರ್ಕಿಟೆಕ್ಚರ್(ಎನ್.ಎ.ಟಿ.ಎ - ನಾಟಾ) ಪರೀಕ್ಷೆಯಲ್ಲಿ  ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು  ಅತ್ಯುತ್ತಮ ಸಾಧನೆ ಮೆರೆದಿದ್ದಾರೆ.

 ಪುತ್ತೂರಿನ ಸುಧೀರ್‌ ಶೆಟ್ಟಿ ಹಾಗೂ ಶಮಿತಾ ಶೆಟ್ಟಿ ದಂಪತಿ ಪುತ್ರನಾದ ವಿಜ್ಞಾತ್‌ ಶೆಟ್ಟಿ ನಾಟಾ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ 30ನೇ ರಾಂಕ್‌ ಗಳಿಸಿರುತ್ತಾರೆ. ಅಖಿಲೇಶ್‌ ಎಂ.ಎಸ್‌ ರಾಜ್ಯಮಟ್ಟದಲ್ಲಿ 170ನೇ ರಾಂಕ್‌ ಗಳಿಸಿರುತ್ತಾರೆ. ಇವರು ಪುತ್ತೂರಿನ ಸತ್ಯಪ್ರಸಾದ್‌ ಎಂ ಹಾಗೂ ಉಮಾಶಂಕರಿ ಎಂ.ಎಸ್‌ ದಂಪತಿಗಳ ಪುತ್ರ.  

ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಅಭಿನಂದಿಸಿದ್ದಾರೆ. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


Post a Comment

0 Comments
Post a Comment (0)
Advt Slider:
To Top