ಮಂಗಳೂರು: "ಯಕ್ಷಗಾನದಂತಹ ಕಲೆಗಳು ನಮ್ಮಲ್ಲಿನ ಲವಲವಿಕೆಯನ್ನು ಉಜ್ವಲಗೊಳಿಸಿ, ಬದುಕಿಗೆ ಅರ್ಥ ತುಂಬುತ್ತವೆ. ಮಂಕುತಿಮ್ಮನ ಕಗ್ಗದಲ್ಲಿ ಉಲ್ಲೇಖಿಸಿರುವಂತೆ ಸಂಗೀತ ನೃತ್ಯಾದಿ ಪ್ರಕಾರಗಳು ಮಾನವನ ಬದುಕಿನ ಸಂಗಾತಿಗಳು ಶಾಸಕರಾಗಿ, ನ್ಯಾಯವಾದಿಗಳಾಗಿ ಮೆರೆದ ಐತಾಳರು ಆಂಗ್ಲ ಭಾಷಾ ಯಕ್ಷಗಾನದ ಪ್ರಮುಖ ರೂವಾರಿ. 43 ವರ್ಷಗಳ ಈ ಇಂಗ್ಲಿಷ್ ಯಾನ ಅಭೂತಪೂರ್ವವಾದುದು. ಅವರ ನಂತರವೂ ಅವರ ಮಕ್ಕಳು ಅದನ್ನು ಮುಂದುವರಿಸಿಕೊಂಡು ಯಕ್ಷಕ್ರಾಂತಿಯನ್ನುಂಟು ಮಾಡಿದ್ದಾರೆ. ಪಿ.ವಿ. ಐತಾಳ್ ಆಂಗ್ಲ ಭಾಷಾ ತಂಡ ಸುವರ್ಣ, ಶತಮಾನ ಉತ್ಸವಗಳನ್ನು ಕಾಣಲಿ" ಎಂದು ಎನ್‌ಐಟಿಕೆ ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಪ್ರೊ. ಎ. ಚಿತ್ರರಂಜನ್ ಹೆಗ್ಡೆ ಹೇಳಿದರು.
ಅವರು ಮಂಗಳೂರಿನ ಪುರಭವನದಲ್ಲಿ ಜರಗಿದ ಯಕ್ಷನಂದನ ಪಿ. ವಿ. ಐತಾಳರ ಆಂಗ್ಲ ಭಾಷಾ ತಂಡದ 43 ನೇ ವರ್ಷಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಖ್ಯಾತ ಕಲಾವಿದ ಕುಂಬ್ಳೆ ಶ್ರೀಧರ ರಾವ್ ರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ರಾಜಮಣಿ ಎ, ಶ್ರೀಧರ ಐತಾಳ್ ಮುಖ್ಯ ಅತಿಥಿಗಳಾಗಿದ್ದರು.
ಯಕ್ಷ ನಂದನದ ಸಂಚಾಲಕ ಸಂತೋಷ್ ಐತಾಳರು ಪ್ರಸ್ತಾವನೆಗೈದು ಯಕ್ಷ ನಂದನದ ಬೆಳವಣಿಗೆಗಳ ಬಗ್ಗೆ ತಿಳಿಸಿದರು. ಡಾ. ಸತ್ಯಮೂರ್ತಿ ಐತಾಳರು ಸ್ವಾಗತ ಮಾಡಿದರು. ಬಳಿಕ ಸುರೇಶ್ ಕುಮಾರ್ ರವರು ಐತಾಳರಿಗೆ ನುಡಿನಮನ ಅರ್ಪಿಸಿದರು. ಅತಿಥಿಗಳೆಲ್ಲರೂ ಐತಾಳರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈದರು.
ಕು| ಅನಘಾ ಐತಾಳ್, ಕು|ವೈಷ್ಣವಿ ಐತಾಳ್, ಪ್ರತೀಕ್ಷಾ ಬಿ ವಿ ಅವರನ್ನು ವೆಂಕಟರತ್ನ ಚ್ಯಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾನಿಧಿ ಸಹಕಾರವೂ ನಡೆಯಿತು.
ಯಕ್ಷ ನಂದನದ ಹಿರಿಯ ಬಣ್ಣದ ವೇಷಧಾರಿ ಪಿ.ನಾಗೇಶ ಕಾರಂತರು ಧನ್ಯವಾದವಿತ್ತರು. ಬಳಿಕ ನ್ಯಾಯವಾದಿಗಳಾದ ಪಿ. ಸಂತೋಷ್ ಐತಾಳರು ಬರೆದ ಸೀತಾಪಹಾರ- ಜಟಾಯು ಮೋಕ್ಷ ಎಂಬ ಆಂಗ್ಲ ಭಾಷೆಯ ಯಕ್ಷಗಾನ ಬಯಲಾಟ ಜರಗಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ