ಮಂಗಳೂರು:"ಶೌರ್ಯ ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ -2024"

Upayuktha
0

ಸೆಪ್ಟೆಂಬರ್  6 ರಿಂದ ಮಂಗಳೂರಿನಲ್ಲಿ ಅಂತರಾಷ್ಟ್ರೀಯ ಕರಾಟೆ

ಮಂಗಳೂರು: ಮಂಗಳೂರಿನಲ್ಲಿ ಅಂತರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾಟ ಸೆಪ್ಟೆಂಬರ್ 6 ರಿಂದ 8 ರವರೆಗೆ ಆಯೋಜಿಸಲಾಗಿದೆ.


ಈ ಕುರಿತು ಪೂರ್ವಭಾವಿ ಸಭೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಅಪರ ಜಿಲ್ಲಾಧಿಕಾರಿ ಡಾ. ಜಿ ಸಂತೋಷ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.


 ಕರಾಟೆ ಕ್ರೀಡಾಕೂಟದ ಸಂಘಟಕ ಡಾ. ರಾಹುಲ್  ಟಿ. ಜಿ ಸಭೆಯಲ್ಲಿ ಮಾತನಾಡಿ  “ಶೌರ್ಯ ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ -2024” ಪಂದ್ಯಾಟದಲ್ಲಿ ವಿವಿಧ ದೇಶಗಳ ಹಲವು ಖ್ಯಾತ ಕರಾಟೆ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಮಂಗಳೂರಿನ ಕೋರ್ಡಲ್ ಚರ್ಚ್ ಮೈದಾನದಲ್ಲಿ ಕ್ರೀಡಾಕೂಟ ನಡೆಯಲಿದೆ. ಸುಮಾರು 2000ಕ್ಕೂ ಅಧಿಕ ಮಂದಿ ವಿವಿಧ ದೇಶಗಳಿಂದ ಈ ಪಂದ್ಯಾಟಕ್ಕೆ ಆಗಮಿಸಲಿದ್ದಾರೆ ಎಂದು ಹೇಳಿದರು.


    ವಿಶ್ವ ಕರಾಟೆ ಒಕ್ಕೂಟದ ನಿಯಮಾವಳಿಗಳಂತೆ ಪಂದ್ಯಾಟ ನಡೆಯಲಿದೆ ಅಂತರಾಷ್ಟ್ರೀಯ ರೆಫ್ರಿಗಳು ಸ್ಪರ್ಧೆಯನ್ನು ನಿರ್ವಹಿಸುವರು ಎಂದು ಹೇಳಿದರು.


ಅಂತರಾಷ್ಟ್ರೀಯ ಕರಾಟೆ ಕ್ರೀಡಾಕೂಟದ ಹಿನ್ನೆಲೆಯಲ್ಲಿ  ವಸತಿ, ಸಂಚಾರ, ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ  ವಿವಿಧ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕಾಗಿದೆ ಎಂದು ಹೇಳಿದರು


ಅಪರ ಜಿಲ್ಲಾಧಿಕಾರಿ  ಡಾ. ಜಿ ಸಂತೋಷ್ ಕುಮಾರ್ ಮಾತನಾಡಿ ಈ ಕ್ರೀಡಾಕೂಟಕ್ಕೆ ಜಿಲ್ಲಾಡಳಿತ  ವತಿಯಿಂದ ಅಗತ್ಯ ನೆರವು ನೀಡಲಾಗುವುದು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಕ್ರೀಡಾಕೂಟ ಸಂಘಟಕರು ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಕರಾಟೆ ಕ್ರೀಡಾಕೂಟದ ಮಾಹಿತಿ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.


ಸಭೆಯಲ್ಲಿ ಯುವಜನ ಸೇನೆ ಮತ್ತು ಕ್ರೀಡಾ ಉಪ ನಿರ್ದೇಶಕ ಪ್ರವೀಣ್ ಡಿಸೋಜಾ, ಸಹಾಯಕ ಪೊಲೀಸ್ ಆಯುಕ್ತ ನಜ್ಮಾ ಫಾರೂಕಿ, ಕರಾಟೆ ಸಂಘಟನೆಗಳ ಪದಾಧಿಕಾರಿಗಳಾದ ಸುರೇಂದ್ರ, ಸೂರಜ್ ಶೆಟ್ಟಿ, ರಾಜ್‌ಗೋಪಾಲ್ ರೈ, ಮತ್ತಿತರರು ಇದ್ದರು.


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top