ಉಜಿರೆ: ಹಿಂದೆ ನಡೆದ ಇತಿಹಾಸವನ್ನು ಸಮರ್ಪಕವಾಗಿ ಅಧ್ಯಯನ ಮಾಡುವುದರಿಂದ ನಾವು ಸ್ಪೂರ್ತಿ ಪಡೆದು ಅದರ ಮೂಲಕ ನಮ್ಮ ಹಲವಾರು ತಪ್ಪುಗಳನ್ನು ತಿದ್ದಿಕೊಳ್ಳಬಹುದು. ಅಲ್ಲದೆ ಅಚ್ಚರಿ ಎನಿಸುವಂತಹ ಹತ್ತು ಹಲವು ಸಂಗತಿಗಳು ನಮ್ಮ ಇತಿಹಾಸದ ಪುಟಗಳಲ್ಲಿ ಅಡಕವಾಗಿದೆ. ನಮ್ಮ ಗತವನ್ನು ಅರಿಯುವುದರಿಂದ ಯಶಸ್ವಿ ಜೀವನ ಸಾಧ್ಯವೆಂದು ಪ್ರಾಂಶುಪಾಲರಾದ ಡಾ.ಬಿ.ಎ. ಕುಮಾರ ಹೆಗ್ಡೆ ರವರು ಅಭಿಪ್ರಾಯ ಪಟ್ಟರು.
ಇತ್ತೀಚೆಗೆ ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಇತಿಹಾಸ ಸಂಘದ ಉದ್ಘಾಟನಾ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳು ತಯಾರಿಸಿದ ಭಿತ್ತಿ ಪತ್ರಿಕೆ ಅನ್ವೇಷಣೆಯ ಅನಾವರಣ ಕಾರ್ಯಕ್ರಮ ನೆರವೇರಿತು. ಇದರ ಉದ್ಘಾಟನೆಯನ್ನು ಕಾಲೇಜಿನ ಪ್ರಾಚಾಯ೯ರಾದ ಡಾ.ಬಿ.ಎ ಕುಮಾರ ಹೆಗ್ಡೆ ಅವರು ದೀಪ ಬೆಳಗುವುದರೊಂದಿಗೆ ನೆರವೇರಿಸಿ ಉದ್ಘಾಟನಾ ನುಡಿಗಳನ್ನಾಡಿದರು.
ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ಸನ್ಮತಿ ಕುಮಾರ್ ಅವರು ಮಾತನಾಡಿ, ವಿಭಾಗದ ವಾರ್ಷಿಕ ಕಾರ್ಯ ಚಟುವಟಿಕೆಗಳನ್ನು ಕುರಿತು ಬೆಳಕು ಚೆಲ್ಲಿದರು. ಅಂತಿಮ ಬಿ.ಎ. ವಿದ್ಯಾರ್ಥಿನಿ ಸುಪ್ರೀತಾ ಸ್ವಾಗತಿಸಿ ದ್ವಿತೀಯ ಬಿ.ಎ. ಯ ಗೌರವಿ ವಂದಿಸಿದರು. ತೃತೀಯ ಬಿ.ಎ.ಯ ಅಮಿತ ಪ್ರಜ್ಞಾ ಕಾರ್ಯಕ್ರಮವನ್ನು ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕಿ ಅಭಿಜ್ಞಾ ಉಪಾಧ್ಯಾಯ, ಇತಿಹಾಸ ಸಂಘದ ನೂತನ ಅಧ್ಯಕ್ಷರಾದ ದುರ್ಗಾಪ್ರಸನ್ನ ಹಾಗೂ ಮಾನಸ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ