ಧಾರವಾಡ ಕವಿವಿಯಲ್ಲಿ ಡಾ. ಭಾಸ್ಕರ ಹೆಗಡೆ ಅವರಿಗೆ ಸನ್ಮಾನ

Upayuktha
0


ಧಾರವಾಡ: 
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಇತ್ತೀಚಿಗೆ ನಡೆದ 40ನೇ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಉಜಿರೆಯ ಶ್ರೀ. ಧ. ಮ. ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಭಾಸ್ಕರ್ ಹೆಗಡೆ ಅವರನ್ನು ಸನ್ಮಾನಿಸಲಾಯಿತು.


ವಿಭಾಗವು ತನ್ನ 40ನೇ ವರ್ಷದ ಪ್ರಯುಕ್ತ ವಿಭಾಗದ ಸಾಧಕ 40 ವಿದ್ಯಾರ್ಥಿಗಳನ್ನು ಗುರುತಿಸುವ ಹಾಗೂ ಗೌರವಿಸುವ ಕಾರ್ಯಕ್ರಮ ಹಮ್ಮಿಕೊಂಡಿತ್ತು. ವಿವಿಧ ರಂಗದಲ್ಲಿ ಅನುಪಮ ಹಾಗೂ ಅನನ್ಯ ಸೇವಾನಿರತವನ್ನು 40 ವಿದ್ಯಾರ್ಥಿಗಳನ್ನು ಇದರಡಿ ಆಯ್ಕೆ ಮಾಡಲಾಗಿತ್ತು.


ರಾಷ್ಟ್ರ ಮಟ್ಟದ ಎರಡು ದಿನದ ವಿಚಾರ ಸಂಕಿರಣ, ಮಾಧ್ಯಮ ಸ್ಪರ್ಧೆ ಕೂಡಾ ಇದೇ ಶುಭಾವಸರದಲ್ಲಿ ನಡೆಯಿತು. ಜು. 8 ಹಾಗೂ 4 ರಂದು ಕಾರ್ಯಕ್ರಮ ಏರ್ಪಡಾಗಿತ್ತು.


ವಿಭಾಗದ ಬಹುಸಂಖ್ಯೆಯ ಹಿಂದಿನ ವಿದ್ಯಾರ್ಥಿಗಳು, ಪತ್ರಕರ್ತರು, ವಿವಿಧ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿಭಾಗದ ಹಳೇ ವಿದ್ಯಾರ್ಥಿಗಳ ಸಮಾವೇಶ ಕೂಡಾ ನಡೆಯಿತು.


40 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಈ ವಿಭಾಗದಿಂದ ಸಾವಿರಾರು ವಿದ್ಯಾರ್ಥಿಗಳು ಅಧ್ಯಯನ ಪೂರೈಸಿ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top