ಧರ್ಮತ್ತಡ್ಕ: ಶ್ರೀ ದುರ್ಗಾಪರಮೇಶ್ವರಿ ಪ್ರೌಢ ಶಾಲೆಯಲ್ಲಿ ಸಮಾಜ ವಿಜ್ಞಾನ ಸಂಘದ ನೇತೃತ್ವದಲ್ಲಿ ಕಾರ್ಗಿಲ್ ವಿಜಯೋತ್ಸವ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಶಾಲಾ ಮುಖ್ಯೋಪಾಧ್ಯಾಯರಾದ ಇ.ಎಚ್ ಗೋವಿಂದ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.
"ನಾವಿಂದು ನಮ್ಮ ಮನೆ ಮನಗಳಲ್ಲಿ ದೇಶಪ್ರೇಮ ಬೆಳೆಸಬೇಕು. ಕೇವಲ ಯೋಧರಾಗಿ ಮಾತ್ರ ದೇಶ ಸೇವೆ ಮಾಡುವುದಲ್ಲ ದೇಶದ ಪ್ರತಿಯೊಂದು ಸಂಪತ್ತನ್ನು ಉಳಿಸಿಕೊಂಡು, ಪ್ರತಿಯೊಬ್ಬ ವಿದ್ಯಾರ್ಥಿಯೂ ಯೋಧನಾಗಿ ಸೇವೆ ಮಾಡುವುದು ಕೂಡಾ ನಮ್ಮ ಹೆಮ್ಮೆ" ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಲಾ ವ್ಯವಸ್ಥಾಪಕ ಎನ್ ಶಂಕರನಾರಾಯಣ ಭಟ್ ಅಭಿಪ್ರಾಯಪಟ್ಟರು.
ಸಮಾಜ ವಿಜ್ಞಾನ ಅಧ್ಯಾಪಿಕೆ ವಿಚೇತ ಬಿ ಕಾರ್ಗಿಲ್ ಹೋರಾಟದ ಅನಿವಾರ್ಯತೆ, ಹೋರಾಟದಲ್ಲಿ ಮಡಿದ ವೀರ ಸೈನಿಕರ ಬಲಿದಾನ, ಕೆಚ್ಚೆದೆಯ ಶೌರ್ಯದ ಬಗ್ಗೆ ತಿಳಿಸಿ ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮದ ಭಾವನೆ ಮೂಡಿಸಿದರು. ಶಶಿಕುಮಾರ್ ಪಿ, ಶ್ರೀಮತಿ ಸುನಿತಾ ಕೆ ಶುಭಾಶಂಸನೆಗೈದರು. ಕಾರ್ಯಕ್ರಮದಲ್ಲಿ ಹುತಾತ್ಮರಾದ ವೀರ ಯೋಧರನ್ನು ಸ್ಮರಿಸಲಾಯಿತು.
ರಾಜ್ ಕುಮಾರ್, ಪ್ರದೀಪ್, ದಿನೇಶ್ ಕೆ, ಕೇಶವಪ್ರಸಾದ ಎಡಕ್ಕಾನ ಸಹಕರಿಸಿದರು. ಶಿವಪ್ರಸಾದ್ ಸಿ ಕಾರ್ಯಕ್ರಮವನ್ನು ನೇತೃತ್ವ ವಹಿಸಿದರು. ಶಶಿಧರ್ ಕೆ ಸ್ವಾಗತಿಸಿ, ಪ್ರಶಾಂತ ಹೊಳ್ಳ ಎನ್ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ