ಕಲ್ಬುರ್ಗಿಯ ಸುಪ್ರಭಾ ಆಚಾರ್ಯ ಸಿಎ ಪದವಿ ತೇರ್ಗಡೆ

Upayuktha
0


ಕಲ್ಬುರ್ಗಿ: ಈ ಬಾರಿಯ ವೃತ್ತಿಪರ ಲೆಕ್ಕಪರಿಶೋಧಕರ (ಚಾರ್ಟೆರ್ಡ್ ಅಕೌಂಟೆಂಟ್- ಸಿ ಎ) ಪರೀಕ್ಷೆಯಲ್ಲಿ ಕಲಬುರ್ಗಿಯ ಶ್ರೀನಿವಾಸ್ ಆಚಾರ್ಯ ಮತ್ತು ಲತಾ ಆಚಾರ್ಯ ಅವರ ಸುಪುತ್ರಿ ಸುಪ್ರಭಾ ಆಚಾರ್ಯ  ತೇರ್ಗಡೆ ಹೊಂದಿ ಕಲ್ಬುರ್ಗಿಗೆ ಕೀರ್ತಿ ತಂದಿದ್ದಾರೆ.


ಕಲಬುರ್ಗಿಯ ಶ್ರೀರಾಮ ಮಂದಿರ ಮತ್ತು ಮೋಹನ್ ಲಾಡ್ಜ್ ನ  ಶ್ರೀನಿವಾಸ ಆಚಾರ್ಯ ಅವರ ಪುತ್ರಿ ಸುಪ್ರಭಾ ಅವರು ಸೈಂಟ್ ಮೇರಿ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಮುಗಿಸಿ ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಕಾಮರ್ಸ್ ಅಧ್ಯಯನ ಮಾಡಿ ನಂತರ ಪುಣೆಯಲ್ಲಿ ಐಪಿಪಿ ಕೋರ್ಸ್ ಮುಗಿಸಿ ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯನ್ನು ತೇರ್ಗಡೆ ಹೊಂದಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. 


ಸಿಎ ಸುಪ್ರಭಾ ಆಚಾರ್ಯ ಅವರ ಯಶಸ್ಸಿಗೆ ಆಕಾಶವಾಣಿಯ ನಿವೃತ್ತ ಹಿರಿಯ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ, ಉಡುಪಿಯ ರಮಣ ಆಚಾರ್ಯ, ಮಾಧವ ಆಚಾರ್ಯ ಕಲ್ಬುರ್ಗಿ ಜಿಲ್ಲಾ ಹೋಟೆಲ್ ಅಸೋಸಿಯೇಷನ್ ಕಾರ್ಯದರ್ಶಿ ನರಸಿಂಹ ಮೆಂಡನ್, ಶ್ರೀಮತಿ ಸವಿತಾ ಸತೀಶ್ ಗುತ್ತೇದಾರ್, ಬ್ರಹ್ಮಶ್ರೀ ನಾರಾಯಣ ಗುರು ಟ್ರಸ್ಟ್ ನ ಅಧ್ಯಕ್ಷರಾದ ವೆಂಕಟೇಶ ಕಡೇಚೂರ್, ದಯಾನಂದ ಪೂಜಾರಿ ಮೈಕಾನ, ಪ್ರಮೀಳಾ ಪೆರ್ಲ,ಆಶಾ ಮೋಹನ್ ಬೆಂಗಳೂರು,ಪದ್ಮನಾಭ ಭಟ್, ರಾಮ ಮಂದಿರದ ಮ್ಯಾನೇಜರ್ ನಿರಂಜನರಾವ್, ಗುರು ಆಚಾರ್ಯ, ರಾಮಕೃಷ್ಣ ಕೆದಿಲಾಯ, ಎಂ.ಎನ್.ಎಸ್ ಶಾಸ್ತ್ರಿ ಮತ್ತಿತರರು ಶುಭ ಕೋರಿದ್ದಾರೆ.


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Advt Slider:
To Top