ಕಲ್ಬುರ್ಗಿ: ವೈದ್ಯ ದಿನಾಚರಣೆ ಮತ್ತು ಪತ್ರಿಕಾ ದಿನವಾದ ಜುಲೈ 1 ರಂದು ಯುನೈಟೆಡ್ ಆಸ್ಪತ್ರೆಯಲ್ಲಿ ಏರ್ಪಡಿಸಿದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಸಂದರ್ಭದಲ್ಲಿ ಕಲ್ಬುರ್ಗಿ ಆಕಾಶವಾಣಿಯ ನಿವೃತ್ತ ಹಿರಿಯ ಕಾರ್ಯಕ್ರಮ ನಿರ್ಮಾಣ ಅಧಿಕಾರಿಗಳು ಹಾಗೂ ದೂರದರ್ಶನ ಕೇಂದ್ರದ ಕಾರ್ಯಕ್ರಮ ನಿರೂಪಕರಾದ ಡಾ. ಸದಾನಂದ ಪೆರ್ಲ ಅವರನ್ನು ಕಲ್ಬುರ್ಗಿ ಯುನೈಟೆಡ್ ಆಸ್ಪತ್ರೆಯ ನಿರ್ದೇಶಕರಾದ ಡಾ. ವಿಕ್ರಂ ಸಿದ್ಧ ರೆಡ್ಡಿ ಸನ್ಮಾನಿ ಗೌರವಿಸಿದರು.
ಯುನೈಟೆಡ್ ಆಸ್ಪತ್ರೆಯಲ್ಲಿ ಜುಲೈ 1 ರಂದು ಮಾಧ್ಯಮದವರಿಗಾಗಿ ಏರ್ಪಡಿಸಿದ ಉಚಿತ ಆರೋಗ್ಯ ತಪಾಸಣಾ ಶಿಬಿರ ಸಂದರ್ಭದಲ್ಲಿ ಮಾಧ್ಯಮ ರಂಗದಲ್ಲಿ ಅನುಪಮಾ ಸೇವೆ ನೀಡಿದ ಮತ್ತು ಜನಪಯೋಗಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲು ನೆರವಾದ ಡಾ. ಸದಾನಂದ ಪೆರ್ಲ ಅವರು ಈ ಭಾಗಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ ಎಂದು ನಿರ್ದೇಶಕರಾದ ಡಾ. ವಿಕ್ರಂ ಸಿದ್ದಾ ರೆಡ್ಡಿ ಶ್ಲಾಘನೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ದೇವಯ್ಯ ಗುತ್ತೇದಾರ್ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ