ಬೆಂಗ್ರೆ ವಾರ್ಡ್ ಶಾಲೆಯ ಎರಡು ನೂತನ ಕೊಠಡಿಗಳ ಉದ್ಘಾಟನೆ

Upayuktha
0


ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ ಬೆಂಗ್ರೆ ವಾರ್ಡಿನ ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಕಸಬಾ ಬೆಂಗ್ರೆ, ಇಲ್ಲಿ ವಿವೇಕ ಶಾಲಾ ಕೊಠಡಿ ನಿರ್ಮಾಣ ಯೋಜನೆಯಡಿ 27.80 ಲಕ್ಷ ವೆಚ್ಚದಲ್ಲಿ ಆವರಣ ಗೋಡೆ ಸಹಿತ ನಿರ್ಮಾಣವಾದ ಎರಡು ನೂತನ ಸುಸಜ್ಜಿತ ಕೊಠಡಿಗಳನ್ನು ಶಾಸಕ ವೇದವ್ಯಾಸ್ ಕಾಮತ್ ಅವರು ಉದ್ಘಾಟಿಸಿದರು. 


ನಂತರ ಮಾತನಾಡಿದ ಶಾಸಕರು, ನಾನೊಬ್ಬ ಸರ್ಕಾರಿ ಶಾಲೆಯ ಹಳೆ ವಿದ್ಯಾರ್ಥಿಯಾಗಿ ಈ ಶಾಲೆಗಳು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಅರಿವಿದೆ. ಬೆಂಗ್ರೆ ಸರ್ಕಾರಿ ಶಾಲೆಗೆ ತುರ್ತು ಅಗತ್ಯವಿರುವ ಮೂಲಭೂತ ಸೌಕರ್ಯದ ಬಗ್ಗೆ ಇಲ್ಲಿನ ಪ್ರಮುಖರು ನನ್ನ ಗಮನಕ್ಕೆ ತಂದ ಬಳಿಕ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಿಕ್ಷಣ ಸಚಿವರ ಸಹಾಯದಿಂದ ವಿವೇಕ ಯೋಜನೆಯಡಿ ಅನುದಾನವನ್ನು ತಂದು ನಮ್ಮ ಕ್ಷೇತ್ರದ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಇಂದಿನ ಉದ್ಘಾಟನಾ ಕಾರ್ಯಕ್ರಮ ಕೂಡಾ ಅದರ ಮುಂದುವರಿದ ಭಾಗವೇ ಆಗಿದೆ ಎಂದರು.


ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಉಪ ಮೇಯರ್ ಸುನೀತಾ, ಶಿಕ್ಷಣಾಧಿಕಾರಿಗಳು, ಪಾಲಿಕೆ ಸದಸ್ಯರುಗಳಾದ ಮನೋಹರ್ ಕದ್ರಿ, ಕಿಶೋರ್ ಕೊಟ್ಟಾರಿ, ಮುನೀಬ್, ಪ್ರಮುಖರಾದ ಸಲೀಂ ಬೆಂಗ್ರೆ, ರಿಯಾಜ್, ಜಬ್ಬಾರ್, ಹಸನ್, ಉಂಞಿ, ಮೀರಾ ಕರ್ಕೇರ, ಶಾಲಾಭಿವೃದ್ಧಿ ಸಮಿತಿ, ಶಾಲಾ ಸಿಬ್ಬಂದಿಗಳು ಹಾಗೂ ವಾರ್ಡಿನ ಕಾರ್ಯಕರ್ತರ ಸಹಿತ ಅನೇಕರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top