ಶಾಸಕ ಡಾ. ಭರತ್ ಶೆಟ್ಟಿಯವರ ಮೇಲೆ ಪ್ರಕರಣ ದಾಖಲು: ವೇದವ್ಯಾಸ ಕಾಮತ್ ತೀವ್ರ ಖಂಡನೆ

Upayuktha
0



ಮಂಗಳೂರು: ರಾಹುಲ್ ಗಾಂಧಿ ವಿರುದ್ಧ ಹೇಳಿಕೆ ನೀಡಿದ ಆರೋಪದಡಿ ಶಾಸಕ ಡಾ.ಭರತ್ ಶೆಟ್ಟಿಯವರ ಮೇಲೆ ಕಾಂಗ್ರೆಸ್ ನಾಯಕರ ಆಣತಿಯಂತೆ ರಾಜಕೀಯ ಪ್ರೇರಿತ ಪ್ರಕರಣ ದಾಖಲಾಗಿದ್ದನ್ನು ಶಾಸಕ ವೇದವ್ಯಾಸ ಕಾಮತ್ ಅವರು ತೀವ್ರವಾಗಿ ಖಂಡಿಸಿದರು.


ವಿದೇಶದಲ್ಲಿದ್ದಾಗ ಭಾರತದ ವಿರುದ್ದ, ಸ್ವದೇಶದಲ್ಲಿದ್ದಾಗ ಹಿಂದೂಗಳ ವಿರುದ್ಧ ಹೇಳಿಕೆ ನೀಡುವ ರಾಹುಲ್ ಗಾಂಧಿಗೆ ಪ್ರತಿಭಟನೆ ಮೂಲಕ ಬಿಸಿ ಮುಟ್ಟಿಸದೇ ಹಾರ ಹಾಕಿ ಗೌರವಿಸಬೇಕಿತ್ತಾ? ಅಥವಾ ಬಹುಮಾನ ಘೋಷಿಸಬೇಕಿತ್ತಾ? ಕಾಂಗ್ರೆಸ್ಸಿಗರಿಗೆ ಅಂತಹ ದುರ್ಗತಿ ಬಂದಿರಬಹುದು. ನಮ್ಮದು ಎಂದಿಗೂ ರಾಷ್ಟ್ರ ಮೊದಲು ಎನ್ನುವ ಸಿದ್ಧಾಂತದ ಹಿನ್ನಲೆ ಹೊಂದಿರುವ ಪಕ್ಷ. ಹಿಂದುತ್ವ ಎನ್ನುವುದು ಈ ರಾಷ್ಟ್ರದ ಮೂಲ ತತ್ವ. ಅದಕ್ಕಾಗಿ ಒಂದಲ್ಲ, ನೂರು ಪ್ರಕರಣಗಳನ್ನು ಎದುರಿಸಲು ಸಿದ್ಧವೆಂದು ಸವಾಲೆಸೆದರು.


ಕಾಂಗ್ರೆಸ್ಸಿಗರು ಬಿಜೆಪಿ ನಾಯಕರ ಮೇಲೆ ಪ್ರಕರಣ ದಾಖಲಿಸುವ ಮೊದಲು "ಹಿಂದೂಗಳೆಂದು ಕರೆದುಕೊಳ್ಳುವವರು ಸದಾ ಹಿಂಸಾಚಾರ ಮತ್ತು ದ್ವೇಷವನ್ನು ಹರಡುವವರು, ಹಿಂದೂ ಪದದ ಅರ್ಥವೇ ಅಶ್ಲೀಲ, ಹಿಂದೂ ಭಯೋತ್ಪಾದನೆ, ರಾಮಾಯಣವೇ ಕಟ್ಟು ಕಥೆ" ಮುಂತಾದ ಹೇಳಿಕೆ ನೀಡಿರುವ ಕಾಂಗ್ರೆಸ್ಸಿನ ಮಹಾನಾಯಕರ ಮೇಲೆ ಕೇಸ್ ದಾಖಲಿಸುವ ಧೈರ್ಯ ತೋರಲಿ ಎಂದು ಹೇಳಿ ಕೂಡಲೇ ಶಾಸಕ ಭರತ್ ಶೆಟ್ಟಿಯವರ ಮೇಲೆ ದಾಖಲಾಗಿರುವ ಪ್ರಕರಣವನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top