ಉಜಿರೆ: ಅಖಿಲ ಭಾರತೀಯ ಲೆಕ್ಕ ಪರಿಶೋಧನಾ ಸಂಸ್ಥೆ 2024 ಇದರ ವತಿಯಿಂದ ಮೇ ತಿಂಗಳಿನಲ್ಲಿ ನಡೆದ ಸಿ.ಎ ಅಂತಿಮ ಪರೀಕ್ಷೆಯಲ್ಲಿ ಕು. ಸುಕನ್ಯಾ ಕಾಮತ್ (ಎಸ್.ಡಿ.ಎಂ ಮಹಿಳಾ ಐಟಿಐ ಉಜಿರೆಯ ಪ್ರಾಂಶುಪಾಲ ವಿ. ಪ್ರಕಾಶ್ ಕಾಮತ್ ಮತ್ತು ರಾಧಿಕಾ ಕಾಮತ್ ಇವರ ಪ್ರಥಮ ಪುತ್ರಿ) ಇವರು ಉತ್ತಮ ಅಂಕದೊಂದಿಗೆ ಉತ್ತೀರ್ಣರಾಗಿರುತ್ತಾರೆ.
ಇವರು ಪುತ್ತೂರಿನ ಸಿ ಎ. ಕೆ.ದಾಮೋದರ ನಾಯಕ್ ಇವರ ದಾಮೋದರ ಆಂಡ್ ಕೊ ಇಲ್ಲಿ ಆರ್ಟಿಕಲ್ ಶಿಪ್ ತರಬೇತಿ ಪಡೆದಿದ್ದು ಪ್ರಸ್ತುತ ಅಲ್ಲೇ ಉದ್ಯೋಗದಲ್ಲಿದ್ದಾರೆ. ಬಹುಮುಖ ಪ್ರತಿಭೆ ಹೊಂದಿರುವ ಕು. ಸಿ ಎ. ಸುಕನ್ಯಾರವರು ಭರತನಾಟ್ಯ ವಿದ್ವತ್ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿದ್ದು ಸೀನಿಯರ್ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದ್ದಾರೆ. ಅನೇಕ ಪತ್ರಿಕೆಗಳಲ್ಲಿ ಕತೆ, ಕವನ ಬರೆಯುವ ಹವ್ಯಾಸ ಇರುವ ಇವರು ಅನೇಕ ಪ್ರಶಸ್ತಿಯನ್ನು ಪಡೆದಿದ್ದಾರೆ.
ಇವರು ವಾಣಿ ಆಂಗ್ಲ ಮಾಧ್ಯಮ ಶಾಲೆ ಹಳೆಕೋಟೆ, ಬೆಳ್ತಂಗಡಿ ಹಾಗೂ ಎಸ್.ಡಿ ಎಂ. ಪಿ.ಯು ಕಾಲೇಜಿನ ಹಳೆ ವಿದ್ಯಾರ್ಥಿನಿಯಾಗಿರುತ್ತಾರೆ.
ಇವರು ಎಸ್.ಎಸ್.ಎಲ್.ಸಿ ಯಲ್ಲಿ 617/625 ಏಳನೇ ಸ್ಥಾನ ರಾಜ್ಯದಲ್ಲಿ ತಾಲೂಕಿನಲ್ಲಿ ಮೂರನೇ ಸ್ಥಾನ ಹಾಗೂ ಪಿ.ಯು ಕಾಮರ್ಸ್ ವಿಷಯದಲ್ಲಿ 589/600 ರಾಜ್ಯದಲ್ಲಿ ಆರನೇ ಸ್ಥಾನ, ತಾಲೂಕಿನಲ್ಲಿ ಮೊದಲ ಸ್ಥಾನ ಹಾಗೂ ಎರಡೂ ಸಲ ಶಾಲೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ