500 ವರ್ಷಗಳ ನಂತರ, ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮನ ಭವ್ಯ ಮಂದಿರವನ್ನು ನಿರ್ಮಿಸಿದ ಬಳಿಕ ದೇಶಾದ್ಯಂತ ರಾಮನದ್ದೇ ಗುಣಗಾನವಿರುವಾಗ ಕರ್ನಾಟಕದಲ್ಲಿ ಮಾತ್ರ 'ರಾಮನಗರ' ಜಿಲ್ಲೆಯನ್ನು 'ಬೆಂಗಳೂರು ದಕ್ಷಿಣ' ಎಂದು ಮರುನಾಮಕರಣ ಮಾಡಲು ಕಾಂಗ್ರೆಸ್ ಸರಕಾರ ನಿರ್ಣಯ ತೆಗೆದುಕೊಂಡಿದೆ. ಇದನ್ನು ನಾವು ತೀವ್ರ ಶಬ್ದಗಳಲ್ಲಿ ಖಂಡಿಸುತ್ತೇವೆ. ಶ್ರೀರಾಮನ ಭೂಮಿಯಂದೇ ಖ್ಯಾತಿ ಪಡೆದಿರುವ ಭಾರತದಲ್ಲಿ ಶ್ರೀರಾಮನ ಹೆಸರನ್ನು ಅಳಿಸಿ ಹಾಕಿದರೆ ಅದನ್ನು ಹಿಂದೂ ಸಮಾಜ ಎಂದಿಗೂ ಸಹಿಸುವುದಿಲ್ಲ ಎಂದು ಹಿಂದೂ ಜನಜಾಗೃತಿ ಸಮಿತಿ ಹೇಳಿದೆ.
ಈ ನಿರ್ಧಾರವು ಹಿಂದೂಗಳ ಗಾಯಕ್ಕೆ ಉಪ್ಪು ಸವರಿದಂತಿದೆ. ಕಾಂಗ್ರೆಸ್ ಈ ಹಿಂದೆ ಶ್ರೀರಾಮನನ್ನು ಕಾಲ್ಪನಿಕ ಎಂದಿತ್ತು, ನಂತರ ಶ್ರೀರಾಮಲಲ್ಲಾನ ಮೂರ್ತಿ ಪ್ರಾಣಪ್ರತಿಷ್ಠಾಪನೆಯ ಕಾರ್ಯಕ್ರಮಕ್ಕೆ ಹೋಗಲಿಲ್ಲ ಮತ್ತು ಈಗ ರಾಮನಗರದ ಹೆಸರು ಬದಲಾಯಿಸಿದೆ. ಇದರಿಂದ ಕಾಂಗ್ರೆಸ್ಸಿನ ‘ಶ್ರೀರಾಮ’ನ ಬಗ್ಗೆ ವಿರೋಧ ಸ್ಪಷ್ಟವಾಗಿದೆ ಎಂದು ಸಮಿತಿ ತಿಳಿಸಿದೆ.
ರಾಮನಗರದ ಹೆಸರನ್ನು ಬದಲಾಯಿಸಲು ನಿರ್ಧರಿಸಿದ ಕಾಂಗ್ರೆಸ್ ಪಕ್ಷವು ಮತಾಂಧ ಕ್ರೂರಿ ಔರಂಗಜೇಬನ ಹೆಸರಿರುವ ದೆಹಲಿಯ ಔರಂಗಜೇಬ ರಸ್ತೆ, ತುಘಲಕ್ ರಸ್ತೆ ಇತ್ಯಾದಿ ಆಕ್ರಮಣಕಾರಿಗಳ ಹೆಸರನ್ನು ಬದಲಾಯಿಸಲು ಪ್ರಯತ್ನಿಸಿದೆಯೇ ? ಕರ್ನಾಟಕದಲ್ಲಿರುವ ಮಹಾನಗರಗಳು ಮತ್ತು ನಗರಗಳ ಇಸ್ಲಾಮಿಕ್ ಹೆಸರುಗಳನ್ನು ಬದಲಾಯಿಸಲು ರಾಜ್ಯ ಸರಕಾರ ಧೈರ್ಯ ತೋರುವುದೇ?
ರಾಮನಗರ ಹೆಸರು ಬದಲಾವಣೆಗೆ ಹಿಂದೂಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ಹೆಸರು ಬದಲಾವಣೆಯ ನಿರ್ಧಾರ ಹಿಂಪಡೆಯದಿದ್ದರೆ ಹಿಂದೂ ಸಮಾಜ ಬೀದಿಗಿಳಿಯದೆ ಸುಮ್ಮನಿರುವುದಿಲ್ಲ ಎಂದು ಹಿಂದೂ ಜನಜಾಗೃತಿ ಸಮಿತಿ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ