ಆರೆಸ್ಸೆಸ್ ಚಟುವಟಿಕೆಗಳಲ್ಲಿ ಭಾಗಿಯಾಗಲು ಸರಕಾರಿ ನೌಕರರಿಗೆ ಇನ್ನಿಲ್ಲ ಆತಂಕ

Upayuktha
0

ಕಾಂಗ್ರೆಸ್ ಮಾಡಿದ ಪ್ರಮಾದವನ್ನು ಸರಿಪಡಿಸಿದ ಮೋದಿ ಸರಕಾರ


- ಎಂ.ಜಿ ಮಹೇಶ್


ರುವತ್ತಾರು ವರ್ಷಗಳ ಹಿಂದೆ ಅಂದಿನ ಕಾಂಗ್ರೆಸ್ ಸರಕಾರ ಮಾಡಿದ್ದ ಐತಿಹಾಸಿಕ ಪ್ರಮಾದವನ್ನು ಸರಿ ಮಾಡುವ ಕೆಲಸನ್ನು ಈಗಿನ ಪ್ರಧಾನಿ ನರೇಂದ್ರ ಮೋದಿಯವರ ಸರಕಾರ ಮಾಡಿದೆ.


1966ರಲ್ಲಿ ಆರೆಸ್ಸೆಸ್‌ ಬಗ್ಗೆ ಸರಕಾರಿ ನೌಕರರು ಪಾಲ್ಗೊಳ್ಳಬಾರದು ಎಂದು ಅವತ್ತಿನ ಸರಕಾರ ಸುತ್ತೋಲೆ ಹೊರಡಿಸಿತ್ತು.


ಜಗತ್ತಿನ ಅತ್ಯಂತ ದೊಡ್ಡ ಸ್ವಯಂಸೇವಾ ಸಂಸ್ಥೆ. ಭಾರತದ ಸಂಸ್ಕೃತಿಯನ್ನು, ಈ ದೇಶದ ಸನಾತನ ಧರ್ಮದ ಮೌಲ್ಯ ಪರಂಪರೆಗಳ ಮೇಲೆ ಪದೇ ಪದೇ ವಿದೇಶೀಯರ ದಾಳಿಗಳು ನಡೆದು ನಶಿಸಿ ಹೋಗುವ ಸನ್ನಿವೇಶದಲ್ಲಿ, ಅದನ್ನು ಪುನರುಜ್ಜೀವನಗೊಳಿಸಬೇಕೆಂದು ಅಂದಿನ ಕಾಂಗ್ರೆಸ್ ಸದಸ್ಯರೇ ಆಗಿದ್ದ ಹೆಡಗೇವಾರ್ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಪ್ರಾರಂಭ ಮಾಡಿದರು. ಆದರೆ ಕಾಂಗ್ರೆಸ್ ಮಾತ್ರ ಸಂಘವನ್ನು ಹುಟ್ಟಿದಾಗಿನಿಂದ ವಿರೋಧ ಮಾಡುತ್ತಿದೆ. ಮುಸ್ಲಿಂ ತುಷ್ಟೀಕರಣ ರಾಜನೀತಿಯನ್ನೇ ಮಾಡಿಕೊಂಡು ಬಂದ ಕಾಂಗ್ರೆಸ್ ಆರೆಸ್ಸೆಸ್ ಅನ್ನು ವಿರೋಧ ಮಾಡುತ್ತ ಬಂತು.


ದೇಶಕ್ಕೆ ಸಂಕಷ್ಟ ಎದುರಾದಾಗೆಲ್ಲ ಸಂಘವು ಮುಂಚೂಣಿಯಲ್ಲಿ ನಿಂತು ದೇಶ ಸೇವೆ ಮಾಡುತ್ತ ಬಂದಿದೆ. ಪ್ರವಾಹ, ಭೂಕಂಪದಂತಹ ನೈಸರ್ಗಿಕ ವಿಕೋಪದಗಳ ಸಂದರ್ಭದಲ್ಲಿ, ಯುದ್ಧಗಳ ಸಂದರ್ಭಗಳಲ್ಲಿ ಸಂಘವು ನಿಷ್ಕಲ್ಮಶವಾಗಿ ದೇಶ ಸೇವೆ ಮಾಡುತ್ತಲೇ ಬಂದಿದೆ. ಅದನ್ನು ಒಪ್ಪಿಕೊಳ್ಳುವ ಕಾಂಗ್ರೆಸ್, ರಾಜಕೀಯವಾಗಿ ತನಗೆ ಅಪಾಯ ಎದುರಾದೀತು ಎಂಬ ಭೀತಿಯಿಂದ ಸಂಘದ ಮೇಲೆ ಮೂರು ಬಾರಿ ನಿಷೇಧ ಹೇರಿದೆ. ಆದರೆ ದೇಶದ ನ್ಯಾಯಾಂಗ ಈ ನಿಷೇಧವನ್ನು ಮೂರು ಬಾರಿಯೂ ಅಸಾಂವಿಧಾನಿಕ ಕ್ರಮವೆಂದು ರದ್ದುಪಡಿಸಿದೆ. 


ಆದರೆ ರಾಜಕೀಯವಾಗಿ ತನಗೆ ಆಪತ್ತು ಬಂದೀತು ಎಂಬ ಭೀತಿಯಿಂದ ಕಾಂಗ್ರೆಸ್ ಗಾಂಧಿ ಹತ್ಯೆಯಾದ ಸಂದರ್ಭದಲ್ಲಿ ಆರೆಸ್ಸೆಸ್ ಅನ್ನು ನಿಷೇಧ ಮಾಡುತ್ತದೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಆರೆಸ್ಸೆಸ್ ಅನ್ನು ನಿಷೇಧ ಮಾಡುತ್ತದೆ. ರಾಮಜನ್ಮಭೂಮಿ ಹೋರಾಟದ ಸಂದರ್ಭದಲ್ಲಿ ಬಾಬ್ರಿ ಮಸೀದಿ ಧ್ವಂಸ ಆದಾಗ ಆ ನೆಪ ಒಡ್ಡಿ ಆರೆಸ್ಸೆಸ್‌ ಅನ್ನು ಕಾಂಗ್ರೆಸ್ ನಿಷೇಧ ಮಾಡುತ್ತದೆ.


ಅಷ್ಟು ಮಾತ್ರವಲ್ಲ, ಇಂದಿರಾಗಾಂಧಿ ಸಂಘದ ಸಹಾಯವನ್ನು ಅಪೇಕ್ಷಿಸಿಕೊಂಡು ಸಂಘದ ಮುಖಂಡರ ಹತ್ತಿರ ಬಂದಿದ್ದರು. ಭಾರತ-ಪಾಕ್ ಯುದ್ಧದ ನಂತರ ದೆಹಲಿಯಲ್ಲಿ ಒಂದು ಗಣರಾಜ್ಯೋತ್ಸವದ ಪರೇಡ್ ನಲ್ಲಿ ಆರೆಸ್ಸೆಸ್ ಅನ್ನು ಪಾಲ್ಗೊಳ್ಳಲು ಆಹ್ವಾನಿಸಿದ್ದರು. ಆದರೆ ಸರಕಾರಿ ನೌಕರರು ಆರೆಸ್ಸೆಸ್ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದನ್ನು ಕಾಂಗ್ರೆಸ್ ನಿಷೇಧ ಮಾಡಿತ್ತು. 


ಅದನ್ನು ಪ್ರಸ್ತುತ ಮೋದಿ ಸರಕಾರ ವಾಪಸ್ ತೆಗೆದುಕೊಂಡಿದೆ. ಸರಕಾರಿ ನೌಕರರು ಕೂಡ ಆರೆಸ್ಸೆಸ್ ಚಟುವಟಿಕೆಗಳಲ್ಲಿ ಭಾಗವಹಿಸಬಹುದು ಎಂದು ಸ್ಪಷ್ಟಪಡಿಸಿದೆ. ಪ್ರಧಾನಿ ಮೋದಿ ಅವರ ಸರಕಾರ ಕಾಂಗ್ರೆಸ್ ಮಾಡಿದ ಪ್ರಮಾದವನ್ನು ಬದಿಗೆ ಸರಿಸಿ ಒಳ್ಳೆ ಕೆಲಸ ಮಾಡಿದೆ. 

ದ್ವೇಷದ ರಾಜಕಾರಣ ಬಿಟ್ಟು ಸಾಮರಸ್ಯದ ರಾಜಕಾರಣಕ್ಕೆ ಹೊರಳಿ ಕೊಂಡಿರುವುದು ನಿಜಕ್ಕೂ ಶ್ಲಾಘನೀಯ.



(ಲೇಖಕರು ರಾಜ್ಯ ಬಿಜೆಪಿ ವಕ್ತಾರರು)


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top