ಕೆನರಾ ಕಾಲೇಜಿನಲ್ಲಿ ಪದವಿ ಪ್ರದಾನ ಸಮಾರಂಭ

Upayuktha
0


ಮಂಗಳೂರು: ಕೆನರಾ ಕಾಲೇಜಿನ 2022-23ನೇ ಸಾಲಿನ ಪದವಿ ಪ್ರದಾನ ಸಮಾರಂಭವನ್ನು ಡೊಂಗರಕೇರಿ ಸುಧೀಂದ್ರ ಸಭಾ ಭವನದಲ್ಲಿ ಏರ್ಪಡಿಸಲಾಗಿದ್ದು, ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಡಾ. ಎಚ್. ದೇವೇಂದ್ರಪ್ಪ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.


ಪದವಿ ಪ್ರದಾನ ಕೇವಲ ಸಂಭ್ರಮದ ಸಮಯವಲ್ಲ. ಪ್ರಬುದ್ಧ ಯುವಕರಾಗಿ ಹೊಸ ಜವಾಬ್ದಾರಿಗಳನ್ನು ಮೈಗೂಡಿಸಿಕೊಳ್ಳುವ ಕ್ಷಣವಾಗಿದೆ. ಶಿಕ್ಷಣದಲ್ಲಿನ ನಿಮ್ಮ ಪ್ರಯಾಣದಲ್ಲಿ ಅವಿರತ ಬೆಂಬಲ ನೀಡಿದ ಪೋಷಕರು ಹಾಗೂ ಶಿಕ್ಷಕರು ಮತ್ತು ಕಲಿಕೆಯ ವಾತಾವರಣವನ್ನು ಒದಗಿಸಿದ ಸಂಸ್ಥೆಯನ್ನು ಗುರುತಿಸುವ ದಿನವಿದು ಎಂದರು. ಅಲ್ಲದೆ ಪದವೀಧರರು ವಿವಿಧ ಕ್ಷೇತ್ರಗಳಲ್ಲಿ ವಿವಿಧ ರೀತಿಯಲ್ಲಿ ಸಮಾಜಕ್ಕೆ ಮರಳಿ ಕೊಡುಗೆ ನೀಡಬೇಕಾದ ಜವಾಬ್ದಾರಿಯನ್ನು ತಿಳಿಸಿದರು.


ಪ್ರಸ್ತುತ ಶಿಕ್ಷಣ ವ್ಯವಸ್ಥೆಯೊಳಗಿನ ಅಸಮಾನತೆಗಳನ್ನು, ಸಾಮಾಜಿಕ ಸಮಸ್ಯೆಗಳನ್ನು, ಅತಿಯಾದ ಫೋನ್ ಬಳಕೆ, ಸೈಬರ್ ಅಪರಾಧಗಳು ರಾಷ್ಟ್ರವನ್ನು ಕಾಡುತ್ತಿರುವ ಹಲವು ಸಮಸ್ಯೆಗಳನ್ನು ಗುರುತಿಸಿ ಇಂದಿನ ಪದವೀಧರರು ಸಕಾರಾತ್ಮಕ ಬದಲಾವಣೆಗೆ ಚಾಲನೆ ನೀಡಬೇಕು. ಸಾಮಾಜಿಕ ಅನಿಷ್ಟಗಳನ್ನು ತೊಡೆದು ಹಾಕಲು ಸಹಾಯ ಮಾಡಬೇಕು ಎಂದು ಹೇಳಿದರು.


ಕೆನರಾ ಆಡಳಿತ ಮಂಡಳಿಯ ಉಪಾಧ್ಯಕ್ಷ ಸುರೇಶ್ ಕಾಮತ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪದವೀಧರರು ಸಮರ್ಪಣೆ ಮತ್ತು ಒಳ್ಳೆಯತನದಿಂದ ಕಲಿತ ಸಂಸ್ಥೆ ಹಾಗೂ ಹೆತ್ತವರಿಗೆ ಕೀರ್ತಿ ತರಲು ಶ್ರಮಿಸಬೇಕು ಎಂದು ಹೇಳಿದರು. ಕೆನರಾ ಸಂಧ್ಯಾ ಕಾಲೇಜಿನ ಸಂಚಾಲಕರಾದ ಸಿಎ ಎಂ ವಾಮನ ಕಾಮತ್ ಗುರುಪೂರ್ಣಿಮೆಯ ಶುಭ ಸಂದರ್ಭದಲ್ಲಿ ಸ್ಪೂರ್ತಿದಾಯಕ ಸಂದೇಶ ನೀಡಿದರು.


ತಮ್ಮ ಜೀವನವನ್ನು ರೂಪಿಸಿದ ಪ್ರತಿಯೊಬ್ಬರ ಅಮೂಲ್ಯ ಕೊಡುಗೆಗಳನ್ನು ಯಾವಾಗಲೂ ಗೌರವಿಸಬೇಕು, ನೆನಪಿಸಿಕೊಳ್ಳಬೇಕು ಎಂದು ಹೇಳಿದರು. ಕೆನರಾ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಎಂ. ರಂಗನಾಥ ಭಟ್, ಆಡಳಿತ ಮಂಡಳಿಯ ಪದಾಧಿಕಾರಿ ವಿಕ್ರಂ ಪೈ, ಕಾಲೇಜು ಸಂಚಾಲಕರಾದ ಸಿಎ ಎಂ ಜಗನ್ನಾಥ ಕಾಮತ್, ವ್ಯವಸ್ಥಾಪಕ ಕೆ ಶಿವಾನಂದ ಶೆಣೈ, ಆಡಳಿತಾಧಿಕಾರಿ ಡಾ.ದೀಪ್ತಿ ನಾಯಕ್, ಸಂಜೆ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಅನಿಲ, ಶ್ರೀಮತಿ ಸಂಧ್ಯಾ ಬಿ, ಶ್ರೀಮತಿ ಜಯಭಾರತಿ ಕೆ.ಪಿ, ಶ್ರೀಮತಿ ಉಷಾ ನಾಯಕ್ ಉಪಸ್ಥಿತರಿದ್ದರು.


ಕಾಲೇಜು ಪ್ರಾಂಶುಪಾಲೆ ಡಾ.ಪ್ರೇಮಲತಾ ವಿ ಸ್ವಾಗತಿಸಿ, ಐಕ್ಯೂಎಸಿ ಸಂಯೋಜಕಿ ಶ್ರೀಮತಿ ಅನುಸೂಯ ಭಾಗವತ್ ವಂದಿಸಿದರು. ಶ್ರೀಮತಿ ರಿತಿಕಾ ದಾಸ್ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top