ಗಮಕ ಕಲೆಗೆ ಶ್ರೇಷ್ಠ ಸ್ಥಾನವಿದೆ: ಜ್ಯೇಷ್ಠ ಗಮಕಿ ಯಜ್ಞೇಶ ರಾವ್

Upayuktha
0


ಮಂಗಳೂರು: "ಗಮಕ ಕಲೆಯು ನಮ್ಮ ಭಾರತೀಯ ಕಲೆಗಳಲ್ಲಿ ಶ್ರೇಷ್ಠ ಸ್ಥಾನ ಪಡೆದಿದೆ. ಹಲವು ರಂಗ ಪ್ರಾಕಾರಗಳಲ್ಲಿ ಗಮಕವು ಸಾಹಿತ್ಯ, ಸಂಗೀತ, ಶ್ರುತಿ, ರಾಗಗಳ ಮಿಲನದಿಂದ ಉತ್ತಮ ಆರಾಧನಾ ಕಲೆ ಎಂದು ಪ್ರಸಿದ್ಧಿ ಪಡೆದಿದೆ. ಅನೇಕ ಕವಿಗಳ ರಚನೆಯನ್ನು ಹಾಡಿದಾಗ ಆತ್ಮಾನುಭೂತಿ ಮೂಡುತ್ತದೆ" ಎಂದು ಶ್ರೇಷ್ಠ ಗಮಕಿ, ಹಾಗೂ ವಿದ್ಯಾದಾಯಿನಿಯ ನಿವೃತ್ತ ಮುಖ್ಯೋಪಾಧ್ಯಾಯರೂ ಆದ ಯಜ್ಞೇಶ್ ರಾವ್, ಹೊಸಬೆಟ್ಟು ನುಡಿದರು.


ಅವರು ಕೋಡಿಕಲ್ ನ ವಿಪ್ರ ವೇದಿಕೆ (ರಿ) ನ ದ್ವೈಮಾಸಿಕ ಸಭಾ ಕಾರ್ಯಕ್ರಮದಲ್ಲಿ ನುಡಿದರು.


ಕಾರ್ಯದರ್ಶಿ ದುರ್ಗಾದಾಸ್ ಕಟೀಲ್ ರವರು ಪ್ರಸ್ತಾವಿಸಿದರು. ಶ್ರೀಮತಿ ವಿದ್ಯಾ ರಾವ್ ರವರು ಸ್ವಾಗತಿಸಿದರು. ಕೋಶಾಧಿಕಾರಿ ಕಿಶೋರ ಕೃಷ್ಣ ನಿರ್ವಹಿಸಿದರು.


ಮಾಜಿ ಅಧ್ಯಕ್ಷ ಅನೂಪ್ ರಾವ್ ಬಾಗ್ಲೋಡಿಯವರು ಕಲಾವಿದರನ್ನು ಗೌರವಿಸಿದರು. ಬಳಿಕ ಯಜ್ಞೇಶ್ ರಾವ್ ರವರ ವಾಚನ, ವರ್ಕಾಡಿ ರವಿ ಅಲೆವೂರಾಯರಿಂದ 'ಅಕ್ಷಯ ಪಾತ್ರೆ' ಎಂಬ ಭಾಗದ ಪ್ರವಚನ ಜರಗಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top