ಬಳ್ಳಾರಿ : ಸೌಹಾರ್ದ ಸಹಕಾರಿ ಚಳುವಳಿ ದೇಶದ ವಿಶೇಷ ಸಹಕಾರಿ ಚಳುವಳಿಗೆ ನಾಂದಿ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಅಧ್ಯಕ್ಷ ನಂಜನಗೌಡ ಅಭಿಪ್ರಾಯಪಟ್ಟರು.
ನಗರದ ನಕ್ಷತ್ರ ಹೋಟೆಲ್‍ನಲ್ಲಿ ಬಳ್ಳಾರಿ ಜಿಲ್ಲೆಯ ಸೌಹಾರ್ದ ಸಹಕಾರಿ ಸಂಘಗಳ ಆಡಳಿತ ಮಂಡಳಿ ಸದಸ್ಯರು ಹಾಗೂ ಮುಖ್ಯ ಕಾರ್ಯನಿರ್ವಾಹಕರಿಗಾಗಿ ಆಯೋಜಿಸಿದ್ದ ಸಂಪರ್ಕ ಸಭೆಯ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು, ಸೌಹಾರ್ದ ಸಹಕಾರಿ ಕ್ಷೇತ್ರವು ರಚನೆಯಾಗಿದ್ದೆ ರಾಜಕೀಯ ಮತ್ತು ಸರ್ಕಾರದ ಹಸ್ತಕ್ಷೇಪವಿರಬಾರದು ಎಂದು ಅನೇಕ ಆಯೋಗಗಳು ಮತ್ತು ಸಮಿತಿಗಳ ನೀಡಿದ ವರದಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನೀಡಿ ಈ ಹಿಂದೆ ಅತಿಯಾದ ರಾಜಕೀಯ ಹಸ್ತಕ್ಷೇಪದಿಂದ ಹಾಗೂ ಇಲಾಖೆ ಅಧಿಕಾರಗಳಿಂದ ಮನ ಬಂದತ್ತೆ ಆಡಳಿತ ಮಂಡಳಿಯನ್ನು ವಿಸರ್ಜಿಸಿ ಇಲಾಖೆಯು ಆಡಳಿತಾಧಿಕಾರಿಗಳನ್ನು ನೇಮಕ ಮಾಡುತ್ತಿತ್ತು ಸ್ವಯತ್ತೆತೆ ಮತ್ತು ಸ್ವಯಂ ನಿಯಂತ್ರಣದ ಮೂಲಕ ಸಹಕಾರಿ ಸಂಸ್ಥೆಗಳನ್ನು ನಡೆಸಬೇಕೆಂಬ ಉದ್ದೇಶದಿಂದ ಕಳೆದ 25 ವರ್ಷಗಳ ಹಿಂದೆ ರೂಪ ತಾಳಿದ ವಿಶೇಷ ಕಾಯ್ದೆ ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿ ಕಾಯ್ದೆ-1997. ಮಾದರಿ ಸಹಕಾರಿ ಕಾಯ್ದೆಯು ದೇಶದ 10 ರಾಜ್ಯಗಳಲ್ಲಿ ಜಾರಿಗೆ ಬಂದಿದ್ದರೂ ಕರ್ನಾಟಕದಲ್ಲಿ ಬಹಳ ಯಶಸ್ವಿಯಾಗಿ ಸರ್ಕಾರದ ಯಾವುದೇ ಅನುದಾನಗಳನ್ನು ಹಾಗೂ ಸಹಾಯಧನವನ್ನು ಪಡೆದುಕೊಳ್ಳದೆ ಸದಸ್ಯರ ಶೇರು ಹಾಗೂ ಠೇವಣಿಗಳನ್ನು ಸಂಗ್ರಹಿಸಿ ಸ್ವಯತ್ತತೆ, ಸ್ವಯಂನಿಯಂತ್ರಣದ ಮೂಲಕ ಸರ್ಕಾರದ ಕನೂನು, ಕಾಯ್ದೆ ಮತ್ತು ನಿಯಮಗಳ ಮೂಲಕ 4200 ಕ್ಕೂ ಹೆಚ್ಚು ಸೌಹಾರ್ದ ಸಹಕಾರಿಗಳು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ.
ಸಂಯುಕ್ತ ಸಹಕಾರಿಯ ಹಿಂದಿನ 6 ಅಧ್ಯಕ್ಷರುಗಳು ಮತ್ತು ನಿರ್ದೇಶಕ ಮಂಡಳಿ ನಿಸ್ವಾರ್ಥದಿಂದ ಕಾರ್ಯನಿರ್ವಹಿಸಿ ದೇಶದ ಉತ್ತಮ ಸಹಾಕಾರ ಸಂಸ್ಥೆಗಳಲ್ಲಿ ಒಂದು ಎನ್ನುವ ಮಟ್ಟಿಗೆ ಕಳೆದ 25 ವರ್ಷಗಳಲ್ಲಿ ಮಾಡಿ ತೋರಿಸಿದ್ದಾರೆ. ಸಂಯುಕ್ತ ಸಹಕಾರಿಯು ಕಾನೂನು ಜ್ಞಾನ, ಸಿಬ್ಬಂದಿಗಳ ಕೌಶಲ್ಯ ಹೆಚ್ಚಿಸಲು, ಮಾರುಕಟ್ಟೆ ಕೌಶಲ್ಯ ಹಿಗೇ ಅನೇಕ ತರಬೇತಿ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತದೆ. ಅನೇಕ ಸಹಕಾರ ಸಂಸ್ಥೆಗಳು ಬ್ಯಾಂಕಿಂಗ್ ವ್ಯವಹಾರವನ್ನು ಮಾತ್ರ ಮಾಡುತ್ತಿದ್ದು ಬೆರಳೆಣಿಕೆ ಸಹಕಾರಿಗಳು ಮಾತ್ರ ವಿವಿಧೋದ್ದೇಶ ಸಹಕಾರಿಗಳಾಗಿ ಕಾರ್ಯನಿರ್ವಹಿಸುತ್ತಿವೆ. ಹಳೆಯ ಕಾಯ್ದೆಯಲ್ಲಿ ರಾಜಕೀಯ ಹಾಗೂ ಇಲಾಖಾಧಿಕಾರಿಗಳ ಅತಿಯಾದ ಹಸ್ತಕ್ಷೇಪದಿಂದ ಸೌಹಾರ್ದ ಸಹಕಾರಿಗಳು ರಾಜ್ಯದಲ್ಲಿ ಹೆಚ್ಚು ನೊಂದಣಿಯಾಗಿ ಕಾರ್ಯನಿರ್ವಹಿಸುತ್ತಿವೆ.
ಬಳ್ಳಾರಿ ಜಿಲ್ಲೆಯಲ್ಲಿ 89 ಸೌಹಾರ್ದ ಸಹಕಾರಿಗಳು ಕಾರ್ಯನಿರ್ವಹಿಸುತ್ತಿದ್ದು 45 ಸಹಕಾರಿಗಳು ಹೆಚ್ಚಿನ ಲಾಭವನ್ನು ಮಾಡಿವೆ, 50 ಕೋಟಿಗಿಂತ ಹೆಚ್ಚಿನ ದುಡಿಯುವ ಬಂಡವಾಳುವನ್ನು ಹೊಂದಿರುವ 03 ಸಹಕಾರಿಗಳು 5 ಕೋಟಿಗಿಂತ ಹೆಚ್ಚಿರುವ 15 ಸೌಹಾರ್ದ ಸಹಕಾರಿಗಳು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದರು.
ಸಹಕಾರ ಕ್ಷೇತ್ರದ ಮಹತ್ವವನ್ನು ಮನಗಂಡ ಕೇಂದ್ರ ಸರ್ಕಾರ ಪ್ರತ್ಯೇಕ ಸಹಕಾರ ಸಚಿವಾಲಯವನ್ನು ಮಾಡಿದೆ ಸಹಕಾರ ಕ್ಷೇತ್ರದಲ್ಲೇ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಸುಕೋ, ವಿಕಾಸ್, ಬ್ರಮರಾಂಭ, ಬಸವೇಶ್ವರ ಈಗೇ ಅನೇಕ ಸಂಸ್ಥೆಗಳು ಕಲ್ಯಾಣ ಕರ್ನಾಟಕದಲ್ಲಿ ಸಾರ್ವಜನಿಕರಿಗೆ ಸೇವೆನೀಡುತ್ತವೆ. ಸಭೆಯ ಅಧ್ಯಕ್ಷತೆಯನ್ನು ಹನುಮಂತಯ್ಯ ಶೆಟ್ಟಿ ಬಳ್ಳಾರಿ ಜಿಲ್ಲೆಯ ನಿದೇಶಕರು ವಹಿಸಿಕೊಂಡು ಸೌಹಾರ್ದ ಸಹಕಾರಿಗಳು ಅಭಧ್ರತೆಯಿರುವ ಹಾಗೂ ಹೆಚ್ಚಿನ ಮೊತ್ತದ ಠೇವಣಿಗಳನ್ನು ಮತ್ತು ಸಾಲಗಳನ್ನು ನೀಡುವ ಬದಲು ಸಣ್ಣ ಸಣ್ಣ ಸಾಲವನ್ನು ನೀಡುವ ಮೂಲಕ ಸಮಾಜದ ಜೊತೆ ಕೆಲಸವನ್ನು ಮಾಡಿ, ಸಹಕಾರ ಚಳುವಳಿಯು ಪ್ರತಿಯೊಬ್ಬರಿಗೂ ತಿಳಿಸುವ ಸಲುವಾಗಿ ಕಾಲೇಜುಗಳಲ್ಲಿ ಪಠ್ಯಕ್ರಮಗಳ ಜೊತೆಗೆ ವೃತ್ತಿ ಆಧಾರಿತ ತರಭೇತಿಗಳನ್ನು ಸರ್ಕಾರ ಹಾಗೂ ಸಹಾಕರ ಮಹಾ ಮಂಡಳಿಗಳು ಮಾಡುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಸಹಕಾರ ಸಂಸ್ಥೆಗಳತ್ತ ಮುಖಮಾಡುತ್ತಾರೆ ಎಂದು ತಿಳಿಸಿದರು.
ಪ್ರಸ್ಥಾವಿಕವಾಗಿ ಮಾತನಾಡಿದ ಸೂರ್ಯಕಾಂತ ರಾಕಲೆ ಪ್ರಾಂತೀಯ ಅಧಿಕಾರಿಗಳು ಆಗಸ್ಟ್ 23 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಂಯುಕ್ತ ಸಹಕಾರಿಯ ಸಾಮಾನ್ಯ ಸಭೆ ನಡೆಯುತ್ತಿದ್ದು ಪೂರ್ವಭಾವಿಯಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಂಪರ್ಕ ಸಭೆಗಳನ್ನು ಆಯೋಜನೆ ಮಾಡುತ್ತಿದ್ದು ಸಂಪರ್ಕ ಸಭೆಯಲ್ಲಿ ಕುದ್ದು ಅಧ್ಯಕ್ಷರೇ ಪಾಲ್ಗೊಂಡು ಸದಸ್ಯ ಸಹಕಾರಿಗಳ ಸಮಸ್ಯೆಗಳಿಗೆ ಉತ್ತರ ನೀಡುವ ಕೆಲಸವನ್ನು ಮಾಡುತ್ತಿದ್ದಾರೆ ಎಂದರು. ಅತಿಥಿಗಳಾಗಿ ಸತ್ಯನಾರಾಯಣ ರಾವ್ ಹಾಗೂ ಕಲ್ಗುಡಿ ಮಂಜುನಾಥ ಭಾಗವಹಿಸಿ ಸಹಕಾರ ಚಳುವಳಿಗೆ ಸಮಸ್ಯೆಯಾದರೇ ನಮ್ಮ ಮನೆಯ ಸಮಸ್ಯೆಯೆಂದು ತಿಳಿದು ಸಹಕಾರ ಚಳುವಳಿಯನ್ನು ಉಳಿಸಲು ನಮ್ಮೆಲ್ಲರ ಒಗ್ಗೂಡುವಿಕೆ ಅವಶ್ಯಕತೆ ಇದೆ ಎಂದು ಪ್ರತಿಪಾಧಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಜಿಲ್ಲಾ ಸೌಹಾರ್ದ ಅಭಿವೃದ್ಧಿ ಅಧಿಕಾರಿ ರವಿಕುಮಾರ್ ನಡೆಸಿದರು ಜಿಲ್ಲೆಯ 72 ಸೌಹಾರ್ದ ಸಹಕಾರಿಗಳ 100 ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ