ಉಡುಪಿಯಿಂದ ಮರಳು ನಾಡಿನ ರಾಜಧಾನಿಯ ಕಡೆಗೆ

Upayuktha
0

ವಿದೇಶ ಪ್ರವಾಸ ಕಥನ: ಭಾಗ 1:



ಮೊದಲಿನಿಂದಲೂ ವಿದೇಶ ಸುತ್ತಿ ನೇೂಡಿ ಬರಬೇಕು ಅನ್ನುವ ಕನಸನ್ನು ಕಂಡವ ನಾನಲ್ಲ. ಅಂತೂ ಮನಸ್ಸಿನಲ್ಲೂ ಎಣಿಸದ ಅವಕಾಶವೊಂದು ಕೂಡಿ ಬಂತು. ಸರಿ ಮಾತೃ ಭೂಮಿಯಿಂದ ಹೊರದೇಶಕ್ಕೆ ಹೇೂಗಬೇಕಾದ ಅನಿವಾರ್ಯತೆ. ಸಂಸಾರ ಸಮೇತ ಹೊರಟೆ ಬಿಟ್ಟೆ ಯುಎಇ ರಾಜಧಾನಿ ಅಬುಧಾಬಿಯ ಕಡೆಗೆ.


ನನ್ನ ಮೊದಲ ವಿದೇಶಿ ಪ್ರವಾಸಕ್ಕೆ ಸಾಕ್ಷಿಯಾದ ದೇಶವೆಂದರೆ ಬಹು ಹಿಂದಿನಿಂದಲೂ ನಾನು ಹೇಳಿ ಕೇಳಿದ ದೇಶವೆಂದರೆ ಗಲ್ಫ್ ಪ್ರಾಂತ್ಯದ ಪ್ರಮುಖ ನಗರ ಅಬುಧಾಬಿ ಅರ್ಥಾತ್ ಯುಎಇ ರಾಜಧಾನಿ. ಇದೊಂದು ಮರಳು ನೆಲದ ಶ್ರೀಮಂತ ರಾಷ್ಟ್ರಆಂತ ಕೇಳಿದ್ದೆ ಮಾತ್ರವಲ್ಲ ನಾನ್ನೊಬ್ಬ ವಿದೇಶಾಂಗ ನೀತಿಪಾಠ ಮಾಡುವ ಪ್ರಾಧ್ಯಾಪಕನಾಗಿ "ಒಪೆಕ್" ರಾಷ್ಟ್ರಗಳ ಜೊತೆ ಭಾರತದ ಸಂಬಂಧಗಳನ್ನು ಓದಿದ ಅನುಭವವೂ ಇತ್ತು. ಆದರೆ ಈಗ ಇದನ್ನು ಕಣ್ಣಾರೆ ಕಾಣುವ ಭಾಗ್ಯ ನನಗೆ ಒದಗಿ ಬಂದಿದೆ ಅನ್ನುವುದು ತುಂಬಾ ಕುಶಿ ನೀಡಿದೆ. ಗಲ್ಫ್ ರಾಷ್ಟ್ರ ಗಳ ಪ್ರಮುಖ ನಗರಗಳಲ್ಲಿ 

ದುಬೈ ಅಬುಧಾಬಿ ಳಲ್ಲಿ ಕನಾ೯ಟಕದ ಲಕ್ಷಾಂತರ ಮಂದಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ ಅನ್ನುವ  ಬಗ್ಗೆಯೂ ನನಗೆ ಮೊದಲೇ ಅರಿವಿತ್ತು.

ಅಬುಧಾಬಿ ಅಂದ ತಕ್ಷಣವೇ ನನಗೆ ಮೊದಲೇ ನೆನಪಿಗೆ ಬಂದ ವ್ಯಕ್ತಿ ಅಂದರೆ ನಮ್ಮ ಪರೀಕದ ಜನ್ನಿಮನೆ ವಸಂತ ಅಣ್ಣನವರ  ಅಣ್ಣ ಸವೇೂತ್ತಮ ಶೆಟ್ಟಿಯವರು.ನಾನು ಅಬುಧಾಬಿಗೆ ಹೇೂಗುತ್ತೇನೆ ಅನ್ನುವ ಸುದ್ದಿ ತಿಳಿದ ನನ್ನ ಆತ್ಮೀಯ ಸ್ನೇಹಿತರಾದ ಪರೀಕ ಜನ್ನಿ ಮನೆ ವಸಂತ ಶೆಟ್ಟಿಯವರು ತಮ್ಮ ಅಣ್ಣನವರಿಗೆ ವಿಷಯ ಮೊದಲೇ ತಿಳಿಸಿ ಬಿಟ್ಟಿದ್ದರು.


ಸಂದರ್ಭಗಳು ಹೇಗೆ ಕಾಕತಾಳೀಯವಾಗಿ ಕೂಡಿ ಬರುತ್ತದೆ ಅನ್ನುವುದಕ್ಕೆ ಸಾಕ್ಷಿಯಾದ ಪ್ರಸಂಗ ನೇೂಡಿ. ಅಬುಧಾಬಿಗೆ ಬರುವ ವಿಮಾನಕ್ಕಾಗಿ ಮಂಗಳೂರು ವಿಮಾನ ನಿಲ್ದಾಣವನ್ನು ಪ್ರವೇಶ ಮಾಡುವಾಗಲೇ ನನ್ನ ಗಮನ ಸೆಳೆದ ವ್ಯಕ್ತಿ ಅಂದರೆ ಅಬುಧಾಬಿಯ ಹೀರೋ ಸರ್ವೋತ್ತಮಣ್ಣ. ಅದು ಕೂಡಾ ನಾನು ಅವರನ್ನು ಮೊದಲ ಬಾರಿಗೆ ನೇೂಡಿದ್ದು. ಇವರನ್ನು ಎಲ್ಲಿಯೋ ನೇೂಡಿದ ಅನುಭವಕ್ಕೆ ಬಂತು. ಅದು ಹೇಗೆ ಕೇಳಿದರೆ ಅವರ ಹೆಸರು ಕೇಳಿದ್ದೇನೆ. ಅದೇ ರೀತಿಯಲ್ಲಿ ಮುಖವನ್ನು ಪತ್ರಿಕೆಯಲ್ಲಿ ನೇೂಡಿದ್ದೇನೆ. ಬಹು ಹಿಂದೆ ಉದಯವಾಣಿಯ ಗಲ್ಫ್ ಸುದ್ದಿಗಳಲ್ಲಿ ಪ್ರಮುಖವಾಗಿ ಬಿಂಬಿತವಾದ ಅಬುಧಾಬಿಯ ಸಾಧಕ ವ್ಯಕ್ತಿ ಅಂದರೆ ಅದು ಸರ್ವೋತ್ತಮ ಶೆಟ್ಟಿಯವರು. ಹಾಗಾಗಿ ತಕ್ಷಣವೇ ಅವರನ್ನು ಗುರುತಿಸಿ ಬಿಟ್ಟೆ. ಸರ್, ನೀವು ಸರ್ವೋತ್ತಮ ಶೆಟ್ಟಿಯವರು ಅಲ್ವಾ ಕೇಳಿದೆ. ಹೌದು, ನೀವು? ಅಂತ ಅವರು ಕೇಳಿದರು. ನಾನು ಸುರೇಂದ್ರನಾಥ ಶೆಟ್ಟಿ, ಓಹೇೂ.. ನನ್ನ ತಮ್ಮ ವಸಂತ ಮೊದಲೇ ಸುದ್ದಿ ಮುಟ್ಟಿಸಿದ್ದಾನೆ ಅನ್ನುವ ಮಾತಿನೊಂದಿಗೆ ಸುಮಾರು ಒಂದು ಗಂಟೆಗಳ ಕಾಲ ವಿಮಾನ ನಿಲ್ದಾಣದ ವಿಶ್ರಾಂತಿ ಕೊಠಡಿಯಲ್ಲಿ ಉಭಯ ಕುಶಲೇೂಪರಿಯ ಮಾತುಕತೆ ಮುಂದುವರಿದೇ ಬಿಟ್ಟಿತು.


ಅಬುಧಾಬಿಯಲ್ಲಿ ಕನ್ನಡದ ಸಾಂಸ್ಕೃತಿಕ ರಾಯಭಾರಿ ಎಂದೇ ಖ್ಯಾತರಾದ ಸವೇೂ೯ತ್ತಮಣ್ಣ ಪರೀಕದಿಂದ ಮುಂಬೈ ಮುಂಬೈಯಿಂದ ಅಬುಧಾಬಿಗೆ ತಮ್ಮ ಬದುಕಿನಲ್ಲಿ ಸಾಗಿ ಬಂದ ಸಾಧನೆಗಳ ಹೆಜ್ಜೆಗಳನ್ನೆ ತಮ್ಮ ಕವಿವಾಣಿಯ ಮೂಲಕ ನನ್ನ ಮುಂದೆ ತೆರೆದೇ ಬಿಟ್ಟರು. ಅವರ ಸಾಧನೆಯ ಪೂರ್ಣ ಚಿತ್ರಣವನ್ನು ಮುಂದಿನ ನನ್ನ ವಿಶೇಷ ಲೇಖನದಲ್ಲಿ ಬರೆಯಲಿದ್ದೇನೆ.


ಅಂತೂ ರಾತ್ರಿ ಸುಮಾರು 12.30 ಸಮಯಕ್ಕೆ  ನಾನು ಮಳೆ ನಾಡಿನಿಂದ ಸೆಖೆಯ ಮರಳು ಭೂಮಿಯ ಶೀಮಂತ ದೇಶದಲ್ಲಿ ಇಳಿದು ಬಿಟ್ಟೆ. ಈಗ ಅಲ್ಲಿ ಸೆಕೆ ಕಾಲವಾದ ಕಾರಣ ಸುಮಾರು 35 ರಿಂದ 42 ಡಿಗ್ರಿ ಸೆಂಟಿಗ್ರೇಡ್ ಬಿಸಿತಾಪಮಾನ. ಆದರೆ ಅಲ್ಲಿನ ಪ್ರತಿಯೊಂದು ಸ್ಥಳದಲ್ಲಿ ಪ್ರವಾಸಿಗರ ಅನುಕೂಲಕ್ಕೆ ಎ.ಸಿಗಳ ಅಳವಡಿಕೆ  ಸೇವೆಯೇ ನಮ್ಮನ್ನು ತಣ್ಣಗೆ ಮಾಡಿತ್ತು.


ಏರ್ ಪೇೂರ್ಟ್ ಹೊರಗೆ ಬಂದ ಕೂಡಲೇ ಅತೀ ದೊಡ್ಡ ಟ್ಯಾಕ್ಸಿಗಳು ನಮಗಾಗಿಕಾಯುತ್ತಿರುತ್ತದೆ. ಅಲ್ಲಿ ಯಾವುದೆ ಚೌಕಾಸಿ ಇಲ್ಲ. ಎಲ್ಲವೂ ಕಂಪ್ಯೂಟರೇ ನಿಯಂತ್ರಣ ಮಾಡುವ ತರದಲ್ಲಿನ ವ್ಯವಹಾರ. ಕಾರು ಹೊರಟೇ ಬಿಟ್ಟಿತು. ವಿಶಾಲವಾದ ರಸ್ತೆಗಳಲ್ಲಿ ಅತೀ ವೇಗದಲ್ಲಿ ಚಲಿಸುವ ಕಾರುಗಳೇ ಜಾಸ್ತಿ. ಆ ರಸ್ತೆಯಲ್ಲಿ ಯಾವುದೇ ಲಾರಿಯಾಗಲಿ ಬಸ್ಸುಗಳು ಹಿಂದಿನಿಂದ ಮುಂದಿನಿಂದ ಓಡಿದ್ದು ನನಗೆ ಕಾಣಲೇ ಇಲ್ಲ. ರಸ್ತೆ ಬದಿಯಲ್ಲಿ ಎಲ್ಲಿಯೂ ಕೆಟ್ಟು ನಿಂತ ವಾಹನಗಳು ಕಂಡಿಲ್ಲ. ಹೆದ್ದಾರಿಗಳಲ್ಲಿ ಜನರು ಬಸ್ಸುಗಳಿಗೆ ಕಾಯುವ ಪರಿಸ್ಥಿತಿ ಅಲ್ಲಿ ನೇೂಡಿಲ್ಲ. ಹಾಗಂತ ಸರ್ವಿಸ್‌ ರಸ್ತೆಯಲ್ಲಿ ಅತ್ಯಂತ ವ್ಯವಸ್ಥಿತವಾದ ರಸ್ತೆ ಸುರಕ್ಷತಾ ವಿಧಾನ ವ್ಯವಸ್ಥೆ ಅಳವಡಿಸಲಾಗಿತ್ತು. ಈ ಕುರಿತಾಗಿಯೇ ಇನ್ನೊಂದು ಲೇಖನ ಬರೆಯಬಹುದು ಅಷ್ಟೊಂದು ಉಪಯುಕ್ತ ಮಾಹಿತಿಗಳು ಇದೆ.


ಅಂತೂ ನಮ್ಮ ಟ್ಯಾಕ್ಸಿ ಸರಿಯಾದ ಸಮಯಕ್ಕೆ ಯಾವುದೇ ಮಾತುಕತೆ ಇಲ್ಲದೆ ನಾವು ಇಳಿಯಬೇಕಾದ electro streetಗೆ ತಂದು ಇಳಿಸಿ ಬಿಟ್ಟ. ನಮಸ್ತೇ ಅನ್ನುವುದರ ಮೂಲಕ ತೆರಳಿ ಬಿಟ್ಟ ಟ್ಯಾಕ್ಸಿ ಡ್ರೈವರ್.


ಇದೊಂದಿಷ್ಟು ನನ್ನ ಮೊದಲ ಬಾರಿಗೆ ವಿದೇಶಿ ಪ್ರವಾಸಕ್ಕಾಗಿ ರಾಜಧಾನಿ ಅಬುಧಾಬಿಗೆ ಬಂದು ಇಳಿದ ಸವಿ ಅನುಭವದ ಮಾತು.


-ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top