ಬಿಜೆಪಿ ಸರಕಾರವಿದ್ದಾಗ ಸಂಡೂರು ಅಭಿವೃದ್ಧಿ: ಬಿ ವೈ ವಿಜಯೇಂದ್ರ

Upayuktha
0


ಸಂಡೂರು: 
ಬಳ್ಳಾರಿ ಜಿಲ್ಲೆಯಲ್ಲಿ ಬರುವ ಸಂಡೂರು ಹಿಂದುಳಿದ ತಾಲೂಕ ಆದರು ಅದರ ಸಂಪೂರ್ಣ ಅಭಿವೃದ್ಧಿ ಬಿಜೆಪಿ ಸರ್ಕಾರದಲ್ಲಿ ಇದ್ದಾಗ ಮಾತ್ರ ಸಾಧ್ಯವಾಗಿದೆ ಎಂದು, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದರು.


ವಂಡರ್ ವ್ಯಾಲಿ ರೆಸಾರ್ಟ್‌ನಲ್ಲಿ ನಡೆದ ಬಿಜೆಪಿ ವಿಶೇಷ ಕಾರ್ಯಾಚರಣೆ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ಧಿ ಶೂನ್ಯ. ಇದು ಲೂಟಿಕೋರ ಸರ್ಕಾರ. ಈ ಸರ್ಕಾರದ ಆಡಳಿತದಲ್ಲಿ ಯಾವುದೇ ತರಹ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಅಷ್ಟೇ ಅಲ್ಲದೆ ವಾಲ್ಮೀಕಿ ಅಭಿವೃದ್ಧಿ ನಿಗಮ ಹಣ ಇಲ್ಲಿನ ಲೋಕಸಭಾ ಚುನಾವಣೆಗೆ ಬಳಕೆಯಾಗುತ್ತೆ ಎಂದರೆ ನಾಚಿಕೆಗೇಡು ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು .


ಯಾವುದೇ ಕ್ಷಣದಲ್ಲಿ ಸಂಡೂರು ಉಪಚುನಾವಣೆ ನಡೆಯುವ ಅವಕಾಶವಿರುವುದರಿಂದ ಕಾರ್ಯಕರ್ತರು, ಮತ್ತು ನಾಯಕರು ಹುಮ್ಮಸ್ಸಿನಿಂದ ಕೆಲಸ ಮಾಡಿ ಬಿಜೆಪಿ ಬಾವುಟ ಸಂಡೂರಿನಲ್ಲಿ ಹಾರಿಸಿ ಇತಿಹಾಸ  ಬರೆಯಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು. ದಲಿತರ ಹಣಕ್ಕೂ ಕಾಂಗ್ರೆಸ್‌ನವರು ಕನ್ನ ಹಾಕುತ್ತಾರೆ ಎಂದರೆ ನಿಜಕ್ಕೂ ಸಿದ್ದರಾಮಯ್ಯಗೆ ನಾಚಿಕೆಯಾಗಬೇಕು, ಎಸ್ ಟಿ ಸಮುದಾಯದ ಮಕ್ಕಳ ಭವಿಷ್ಯಕ್ಕಾಗಿ ಮೀಸಲಿಟ್ಟ ಹಣವನ್ನು ಲೂಟಿ ಮಾಡುತ್ತಾರೆ ಎಂದರೆ ಈ ಸಾರಿ ಸಂಡೂರಿನ ಜನ ಕಾಂಗ್ರೆಸ್‌ನವರಿಗೆ ತಕ್ಕ ಗುಣ ಪಾಠ ಕಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ಬಳ್ಳಾರಿ ಜಿಲ್ಲೆಯಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಗೆದ್ದರೆ ಆಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಖಚಿತ ಎಂದು ಅವರು ಹೇಳಿದರು. ಸಂಡೂರು ವಿಧಾನಸಭಾ ಉಪಚುನಾವಣೆಯಲ್ಲಿ ಯಾರಿಗೆ ಟಿಕೆಟ್ ನೀಡಿದರು ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ಶ್ರಮಿಸಿ, ಸಂಡೂರಿನಲ್ಲಿ ಇತಿಹಾಸ ನಿರ್ಮಿಸುವ ಜವಾಬ್ದಾರಿ ನಮ್ಮ ಮತ್ತು ನಿಮ್ಮೆಲ್ಲರ ಮೇಲಿದೆ ಎಂದು ಅವರು ಹೇಳಿದರು.


ಈ ಸಂದರ್ಭದಲ್ಲಿ ಚಿತ್ರದುರ್ಗ ಸಂಸದರಾದ ಗೋವಿಂದ ಕಾರಜೋಳ, ವಿಧಾನ ಪರಿಷತ್ ಸದಸ್ಯ, ಎನ್ ರವಿ ಕುಮಾರ್, ನವೀನ್, ಬಳ್ಳಾರಿ ಮಾಜಿ ಸಂಸದ, ವೈ ದೇವೇಂದ್ರಪ್ಪ, ಸಣ್ಣಪಕ್ಕೀರಪ್ಪ, ಮಾಜಿ ಶಾಸಕರಾದ ಟಿ ಹೆಚ್ ಸುರೇಶ್ ಬಾಬು, ಜಿ ಸೋಮಶೇಖರ್ ರೆಡ್ಡಿ, ಕೆ ಎ, ರಾಮಲಿಂಗಪ್ಪ, ಡಾಕ್ಟರ್ ಮಹಿಪಾಲ್, ಕೆಎಸ್ ದಿವಾಕರ್, ವಿಜಯಲಕ್ಷ್ಮಿ, ಓಬಳೇಶ್, ಬಂಗಾರು ಹನುಮಂತ, ಓಬಳೇಶ್, ರಾಮಕೃಷ್ಣ ಹಲವಾರು ಮಂದಿ ಕಾರ್ಯಕರ್ತರು ಪಾಲ್ಗೊಂಡಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top