ಬೀದಿ ನಾಯಿಗಳು (ಸ್ಟ್ರೀಟ್ ಡಾಗ್ಸ್) ನಗರ ಮತ್ತು ಗ್ರಾಮೀಣ ಪ್ರದೇಶಗಳ ಸಾಮಾನ್ಯ ದೃಶ್ಯವಾಗಿದೆ. ಇವು ಮಾನವರ ಸಮೀಪದ ಪರಿಸರದಲ್ಲಿ ಬದುಕುತ್ತಿರುವುದರಿಂದ, ಆರೋಗ್ಯ, ಸುರಕ್ಷತೆ, ಮತ್ತು ಪರಿಸರದ ದೃಷ್ಠಿಯಿಂದ ನಾನಾ ಪರಿಣಾಮಗಳನ್ನು ಉಂಟುಮಾಡುತ್ತವೆ. ಬೀದಿ ನಾಯಿಗಳ ಹೆಚ್ಚುತ್ತಿರುವ ಸಂಖ್ಯೆಯು ಜನರಲ್ಲಿ ಆತಂಕವನ್ನು ಮೂಡಿಸುತ್ತಿದೆ. ಈ ಸಮಸ್ಯೆಯು ನಿವಾಸಿಗಳು ಮತ್ತು ಅಧಿಕಾರಿಗಳಲ್ಲಿ ಆತಂಕವನ್ನು ಹುಟ್ಟುಹಾಕಿದೆ, ಸಮಸ್ಯೆಯನ್ನು ಪರಿಹರಿಸಲು ಪರಿಣಾಮಕಾರಿ ಕ್ರಮಗಳ ಅಗತ್ಯವನ್ನು ಎತ್ತಿ ತೋರಿಸುತ್ತದೆ. ಕಾಸರಗೋಡಿನಲ್ಲಿ ಕಳೆದ ಹಲವಾರು ವರ್ಷಗಳಿಂದ ಬೀದಿ ನಾಯಿಗಳ ಸಂಖ್ಯೆಯು ಗಣನೀಯವಾಗಿ ಏರಿಕೆಯಾಗಿದೆ. ಈ ಏರಿಕೆಗೆ ಅಸಮರ್ಪಕ ಪ್ರಾಣಿಗಳ ಜನನ ನಿಯಂತ್ರಣ ಕ್ರಮಗಳು ಮತ್ತು ಮಾಲೀಕರು ಸಾಕುಪ್ರಾಣಿಗಳನ್ನು ತ್ಯಜಿಸುವುದು ಸೇರಿದಂತೆ ವಿವಿಧ ಅಂಶಗಳೇ ಕಾರಣವಾಗಿವೆ.
ಹೆಚ್ಚುತ್ತಿರುವ ಬೀದಿ ನಾಯಿಗಳ ಸಂಖ್ಯೆಯು ನಾಯಿ ಕಡಿತ ಮತ್ತು ದಾಳಿಯ ಹಲವಾರು ಘಟನೆಗಳಿಗೆ ಕಾರಣವಾಗಿದೆ, ಇದು ನಿವಾಸಿಗಳಲ್ಲಿ ಆತಂಕ ಮತ್ತು ಭಯ ಉಂಟುಮಾಡುತ್ತದೆ. ಹೆಚ್ಚಿನ ಸಂಖ್ಯೆಯ ಬೀದಿ ನಾಯಿಗಳ ಉಪಸ್ಥಿತಿಯು ಹಲವಾರು ಆರೋಗ್ಯ ಮತ್ತು ಸುರಕ್ಷತೆಯ ಅಪಾಯಗಳನ್ನು ಉಂಟುಮಾಡುತ್ತವೆ. ನಾಯಿ ಕಡಿತದ ಮೂಲಕ ಹರಡುವ ಮಾರಣಾಂತಿಕ ಕಾಯಿಲೆಯಾದ ರೇಬೀಸ್ ಒಂದು ಪ್ರಮುಖ ಆತಂಕವಾಗಿದೆ. ಆಂಟೀರೇಬಿಸ್ ವ್ಯಾಕ್ಸಿನೇಶನ್ ಕ್ಯಾಂಪ್‌ಗಳನ್ನು ನಿಯತಕಾಲಿಕವಾಗಿ ನಡೆಸಲಾಗಿದ್ದರೂ, ಹೆಚ್ಚಿನ ಸಂಖ್ಯೆಯ ಬೀದಿನಾಯಿಗಳ ಕಾರಣದಿಂದಾಗಿ ವ್ಯಾಪ್ತಿಯು ಸಾಕಷ್ಟಿಲ್ಲ. ನಾಯಿಗಳು ಆಗಾಗ್ಗೆ ಕಸದ ರಾಶಿಗಳಿಂದ ಕಸವನ್ನು ಎಳೆದು ಹಾಕುವ ಕಾರಣದಿಂದ ಪರಿಸರದ ಮಲಿನೀಕರಣಕ್ಕೆ ಮತ್ತು ರೋಗಗಳ ಸಂಭಾವ್ಯ ಹರಡುವಿಕೆಗೆ ಮೂಲ ಕಾರಣವಾಗುತ್ತದೆ.
ಬೀದಿ ನಾಯಿಗಳಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು:
- ಬೀದಿ ನಾಯಿಗಳಿಂದ ಹಲವಾರು ರೋಗಗಳು ಹಸ್ತಾಂತರಕರಾಗಬಹುದು. ಕ್ಯಾನೈನ್ ಡಿಸ್ಟೆಂಪರ್ (ವೈರಸ್ ರೋಗ), ಹೃದಯ ಹುಳುರೋಗ ರೇಬೀಸ್ ಮತ್ತು ಪರೋಪಜಿ (ಕುಷ್ಠ) ರೋಗ ಸಾಮಾನ್ಯವಾಗಿ ಕಾಣುತ್ತದೆ.
- ತ್ಯಾಜ್ಯ ಆಹಾರ ತಿಂದ ಪರಿಣಾಮವಾಗಿ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಬೀದಿ ನಾಯಿಗಳು ಜನರಿಗೆ ಮತ್ತು ಪಶುಗಳಿಗೆ ಹಾನಿ ಮಾಡುವ ಸಾಧ್ಯತೆ ಇದೆ.
- ರಾತ್ರಿ ವೇಳೆಯಲ್ಲಿ ಶಬ್ದಮಾಲಿನ್ಯವನ್ನು ಉಂಟುಮಾಡುವ ಮೂಲಕ ಮಲಗುವವರ ಅಶಾಂತಿಗೆ ಕಾರಣವಾಗಬಹುದು. ಬೀದಿ ನಾಯಿಗಳು ತ್ಯಾಜ್ಯ ಮತ್ತು ಆಹಾರವನ್ನು ಹುಡುಕುವ ಸಂದರ್ಭದಲ್ಲಿ ಪರಿಸರದ ಸ್ವಚ್ಛತೆಯನ್ನು ಹಾನಿಗೊಳಿಸಬಹುದು.
ನಿಯಂತ್ರಣಾ ಕ್ರಮಗಳು
- ಸ್ಟೆರಿಲೈಸೇಶನ್ ಮತ್ತು ವಾಕ್ಸಿನೇಶನ್: ನಾಯಿಗಳನ್ನು ಸ್ಟೆರಿಲೈಸ್ ಮಾಡಲು ಮತ್ತು ರೇಬೀಸ್ ಸೇರಿದಂತೆ ಪ್ರಮುಖ ರೋಗಗಳಿಗೆ ವಿರುದ್ದ ಲಸಿಕೆಗಳನ್ನು ನೀಡಲು ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ಪ್ರಚಾರ ಮಾಡಬೇಕು.
- ಬೀದಿ ನಾಯಿಗಳಿಗೆ ಅಶ್ರಯ ಮತ್ತು ಆಹಾರ ಒದಗಿಸಲು ಸ್ಥಳೀಯ ಆಡಳಿತ ಮತ್ತು ಪಶುಸಂಗೋಪನಾ ಸಂಸ್ಥೆಗಳು ಸಹಾಯ ಮಾಡಬಹುದು.
- ಜನರಲ್ಲಿ ಜಾಗೃತಿ ಮೂಡಿಸುವುದು:- ಜನರಿಗೆ ಬೀದಿ ನಾಯಿಗಳ ಬಗ್ಗೆ ಮತ್ತು ಅವುಗಳಿಂದ ಎದುರಿಸಬಹುದಾದ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಬೇಕು.
- ಜಾಗತಿಕ ಮತ್ತು ಸ್ಥಳೀಯ ಮಟ್ಟದಲ್ಲಿ ಯಶಸ್ವಿಯಾದ ಉದಾಹರಣೆಗಳನ್ನು ಅನುಸರಿಸಿ, ಕಾರ್ಯತಂತ್ರಗಳನ್ನು ರೂಪಿಸಬಹುದು.
ಬೀದಿ ನಾಯಿಗಳ ಸಮಸ್ಯೆಯು ದಿನೇ ದಿನೇ ಹೆಚ್ಚಾಗಲು ಕಾರಣವೇನೆಂದರೆ ನಮಗೆ ಒಂದೇ ನಾಯಿ ಸಾಕೆಂದು ನಾವು ನಾಯಿ ಹಾಕಿದ ಮರಿಗಳನ್ನು ಕಸದ ತೊಟ್ಟಿ, ಮತ್ತು ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಬಿಡುವ ಕಾರಣದಿಂದ ನಾಯಿಗಳು ಸಾರ್ವಜನಿಕ ಸ್ಥಳಗಳಲ್ಲಿ ಬೆಳೆದುಅ ವುಗಳ ಉಪಟಳ ಜಾಸ್ತಿಯಾಗುತ್ತದೆ. ಬೀದಿ ನಾಯಿಗಳ ಸಮಸ್ಯೆ ಸಮಗ್ರ ಮತ್ತು ಸಮುದಾಯದ ಸಹಕಾರದ ಅಗತ್ಯವಿರುವ ಸಮಸ್ಯೆಯಾಗಿದ್ದು, ಸರಿಯಾದ ಕ್ರಮಗಳನ್ನು ಕೈಗೊಳ್ಳುವುದರ ಮೂಲಕ ಪರಿಸರ ಸಂರಕ್ಷಣೆಯೊಂದಿಗೆ ನಾಗರಿಕರ ಮತ್ತು ನಾಯಿಗಳ ಆರೋಗ್ಯವನ್ನು ಸುಧಾರಿಸಬಹುದು. ಸರ್ವರ ಸಹಕಾರ ಮತ್ತು ಜಾಗೃತಿಯಿಂದ ಈ ಸಮಸ್ಯೆಯನ್ನು ಯಶಸ್ವಿಯಾಗಿ ಪರಿಹರಿಸಬಹುದಾಗಿದೆ. ಸ್ಥಳೀಯ ಆಡಳಿತ ಸಂಸ್ಥೆಗಳು ಈ ಬೀದಿ ನಾಯಿಗಳ ಸಮಸ್ಯೆಗೆ ಸರಿಯಾದ ಕ್ರಮ ತೆಗೆದುಕೊಳ್ಳಬೇಕು ಆದರೆ ಅವರು ಕಂಡರೂ ಕಾಣದಂತಿರುತ್ತಾರೆ. ಇದು ಸರಿಯಲ್ಲ, ಬೀದಿ ನಾಯಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ತುಂಬಿರುವ ಕಾರಣ ಈ ಸಮಸ್ಯೆಗೆ ನಮ್ಮ ಸರಕಾರವು ಆದಷ್ಟು ಬೇಗ ಒಂದು ಉತ್ತಮ ಪರಿಹಾರ ನೀಡಬೇಕಾದುದು ಅತೀ ಅಗತ್ಯ.
-ಕಾರ್ತಿಕ್ ಕುಮಾರ್ ಕೆ. ಏತಡ್ಕ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ