ಬಜೆಟ್ ಪ್ರತಿಕ್ರಿಯೆ: ಶಿಕ್ಷಣ ಹಾಗೂ ಪೋಷಣೆಗೆ ಧನಾತ್ಮಕ ಮಾರ್ಗಸೂಚಿ

Upayuktha
0


‘2024-2025 ಆಯವ್ಯಯ ಪತ್ರವು (ಬಜೆಟ್) ಭಾರತದಲ್ಲಿ ಶಿಕ್ಷಣ ಹಾಗೂ ಪೋಷಣೆಗೆ ಧನಾತ್ಮಕ ಮಾರ್ಗಸೂಚಿ ತರುತ್ತಿದೆ”. ಅಕ್ಷಯಪಾತ್ರ’ದಲ್ಲಿ ಎರಡು ಅಂಶಗಳು ನಮ್ಮ ಗಮನಸೆಳೆದಿದೆ.

 

1. ರಾಷ್ಟ್ರೀಯ ಅನುಕೂಲತೆ ಹಾಗೂ ಅರ್ಹತಾ ವಿದ್ಯಾರ್ಥಿವೇತನ ಯೋಜನೆ (The National Means cum Merit Scholarship Scheme) ಗಣನೀಯವಾಗಿ ವರ್ಧನೆಯಾಗಿದ್ದು, 2024-25ರಲ್ಲಿ ₹377 ಕೋಟಿ ನಿಯೋಜನೆ ಮಾಡಲಾಗಿತ್ತು. ಈ ಹೆಚ್ಚಳಿಕೆಯು, ಅಕ್ಷಯ ಪಾತ್ರ ವಿದ್ಯಾರ್ಥಿವೇತನ ಯೋಜನೆಯೊಂದಿಗೆ ಸುಂದರವಾಗಿ ಹೊಂದಿಕೊಳ್ಳುತ್ತದೆ. ಈ ಯೋಜನೆಗಳು, ಆರ್ಥಿಕವಾಗಿ ದುರ್ಬಲವಾದ ವರ್ಗಗಳಿಂದ ಬಂದ ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಪೂರೈಸಲು ನೆರವಾಗುತ್ತದೆ. ಈ ಮೂಲಕ ಶಿಕ್ಷಣವನ್ನು ಅರ್ಧಕ್ಕೆ ಕೈ ಬಿಟ್ಟವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲಿದೆ. 


2. 2024-25ರಲ್ಲಿ ಪ್ರ.ಮ. ಪೋಷಣ್ PM POSHAN (ಈ ಮೊದಲು ಮಧ್ಯಾಹ್ನದ ಬಿಸಿಯೂಟ ಎಂದು ಕರೆಯಲ್ಪಡುತ್ತಿದ್ದುದು) ಯೋಜನೆಗೆ ₹12,467.39 ಕೋಟಿ ನಿಯೋಜಿಸಲಾಗಿದೆ. ಇದು 2023-24ರಲ್ಲಿ ಇದ್ದ ₹10,000 ಕೋಟಿಯ ಪರಿಷ್ಕೃತ ಅಂದಾಜಿನಿಂದ 24.67% ಹೆಚ್ಚಳಿಕೆಯನ್ನು ಸೂಚಿಸುತ್ತದೆ. ನಮ್ಮ ಮಕ್ಕಳ ಪೋಷಣೆಯಲ್ಲಿ ಈ ಮಹತ್ತರವಾದ ಹೂಡಿಕೆಯು ಸಮಾಧಾನಕರ ಅಂಶವಾಗಿದೆ. ಮಧ್ಯಾಹ್ನದ ಬಿಸಿಯೂಟ ಯೋಜನೆಯ ಪ್ರಮುಖ ಅನುಷ್ಠಾನಕಾರರಾಗಿ ಅಕ್ಷಯ ಪಾತ್ರದಲ್ಲಿ ನಾವು ಈ ಬದ್ಧತೆಯಿಂದ ಇನ್ನಷ್ಟು ಶಕ್ತಿ ಪಡೆದುಕೊಂಡಿದ್ದೇವೆ. 

 

ಸದರಿ ಧನಾತ್ಮಕ  ಹಂಚಿಕೆಗಳು, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆಎವೈ) ಐದು ವರ್ಷಗಳ ವಿಸ್ತರಣೆಯೊಂದಿಗೆ ಅನೇಕ (ಎಸ್‌ಡಿಜಿ) (Sustainability Development goals)  ಗುರಿಗಳನ್ನು ಸಾಧಿಸಲು  ಸಾಧ್ಯವಾಗುತ್ತದೆ.


ಹಸಿವನ್ನು ಎದುರಿಸುವ ಮತ್ತು ಶಿಕ್ಷಣವನ್ನು ಉತ್ತೇಜಿಸುವ ಮೂಲಕ, ನಾವು ಎಸ್‌ಡಿಜಿ 2 ,(ಶೂನ್ಯ ಹಸಿವು) ಎಸ್‌ಡಿಜಿ 4 (ಗುಣಮಟ್ಟದ ಶಿಕ್ಷಣ) ಮತ್ತು ಎಸ್‌ಡಿಜಿ 10 (ಕಡಿಮೆ ಅಸಮಾನತೆಗಳು) ಗಳತ್ತ ಗಮನಾರ್ಹ ಪ್ರಗತಿಯನ್ನು ಸಾಧಿಸುತ್ತಿದ್ದೇವೆ. ಅಕ್ಷಯ ಪಾತ್ರದಲ್ಲಿ, ನಾವು ಈ ಪ್ರಮುಖ ಕ್ಷೇತ್ರಗಳಲ್ಲಿ ಸರ್ಕಾರದೊಂದಿಗೆ ಸಹಕರಿಸಲು ಎಂದಿಗಿಂತ ಹೆಚ್ಚು ಪ್ರೇರಿತರಾಗಿದ್ದೇವೆ. ಈ ಬಜೆಟ್ ನಮಗೆ ಶೂನ್ಯ ಹಸಿವು SDG ಸಾಧಿಸಲು ಮತ್ತು ಎಲ್ಲರಿಗೂ ಗುಣಮಟ್ಟದ ಶಿಕ್ಷಣವನ್ನು ಖಚಿತಪಡಿಸಲು ಇನ್ನೊಂದು ಹೆಜ್ಜೆ ಮುನ್ನಡೆಸುತ್ತದೆ.


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top