"ಭಾರತದಲ್ಲಿ 90ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿರುವ ಮತ್ತು ಕೆ12 ಸ್ಕೂಲ್ ಚೈನ್‌ಗಳಲ್ಲಿ ಪ್ರಮುಖ ಶಿಕ್ಷಣ ಸಂಸ್ಥೆಯಾಗಿರುವ ಆರ್ಕಿಡ್ಸ್ ದಿ ಇಂಟರ್ ನ್ಯಾಷನಲ್, 2024ರ ಕೇಂದ್ರ ಬಜೆಟ್‌ನಲ್ಲಿ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ವಿಚಾರವಾಗಿ ಹೆಚ್ಚು ಗಮನ ಹರಿಸಿರುವುದನ್ನು ಮುಕ್ತವಾಗಿ ಸ್ವಾಗತಿಸುತ್ತದೆ. ಬಜೆಟ್ ನಲ್ಲಿ ಶಿಕ್ಷಣ, ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿಗಾಗಿ ರೂ.1.48 ಲಕ್ಷ ಕೋಟಿ ಹಂಚಿಕೆ ಮಾಡುವ ಮೂಲಕ ಕೇಂದ್ರ ಸರ್ಕಾರವು ಯುವ ಜನತೆಯನ್ನು ಬೆಳೆಸುವ ಮತ್ತು ಅವರನ್ನು ಭವಿಷ್ಯಕ್ಕೆ ಸಿದ್ಧಗೊಳಿಸುವ ವಿಚಾರದಲ್ಲಿ ಬದ್ಧತೆ ಪ್ರದರ್ಶಿಸಿದೆ.
ಶಿಕ್ಷಣ ಕ್ರಮವನ್ನು ಆಧುನಿಕರಿಸುವ ನಿಟ್ಟಿನಲ್ಲಿ ಬಜೆಟ್ ನಲ್ಲಿ ಕೈಗೊಂಡಿರುವ ಕೆಲವು ಕ್ರಮಗಳು ಮುಂದಿನ ಪೀಳಿಗೆಗೆ ಹೊಸ ಕಲಿಕಾ ಕ್ರಮವನ್ನು ಒದಗಿಸಬೇಕು ಎಂಬ ನಮ್ಮ ದೂರದೃಷ್ಟಿಗೆ ಸೂಕ್ತವಾಗಿ ಹೊಂದಿಕೆಯಾಗುತ್ತದೆ. ಉದ್ಯಕ್ಕೆ ಬೇಕಾದ ಕೋರ್ಸುಗಳನ್ನು ಪರಿಚಯಿಸಿ 1000 ಐಟಿಐಗಳನ್ನು ಮೇಲ್ದರ್ಜೆಗೆ ಏರಿಸುವ ಆಲೋಚನೆ ನಿಜಕ್ಕೂ ಆಶಾದಾಯಕವಾಗಿದೆ. ಕೇವಲ 45.9%ರಷ್ಟು ಭಾರತೀಯ ಯುವ ಜನತೆ ಮಾತ್ರ ಉದ್ಯೋಗದಾತರು ಬಯಸುವ ಕೌಶಲ್ಯಗಳನ್ನು ಹೊಂದಿದ್ದಾರೆ ಎಂದು ಇಂಡಿಯಾ ಸ್ಕಿಲ್ಸ್ ರಿಪೋರ್ಟ್ 2023 ತಿಳಿಸಿತ್ತು. ಹಾಗಾಗಿ ಈ ಯೋಜನೆಯು ಯುವಜನತೆಗಳ ಕೌಶಲ್ಯಗಳನ್ನು ಗಣನೀಯವಾಗಿ ಹೆಚ್ಚು ಮಾಡುವ ಭರವಸೆ ಇದೆ.
ಐದು ವರ್ಷಗಳಲ್ಲಿ 1 ಕೋಟಿ ಯುವಕರಿಗೆ ಸಮಗ್ರ ಇಂಟರ್ನ್‌ಶಿಪ್ ಕಾರ್ಯಕ್ರಮ ಒದಗಿಸುವ ಯೋಜನೆಯ ಕುರಿತು ನಾವು ಕುತೂಹಲಿಗರಾಗಿದ್ದೇವೆ. ಈ ಕ್ರಮವು ಯುವಜನತೆಗೆ ಪ್ರಾಯೋಗಿಕ ಕಲಿಕಾ ಅನುಭವಗಳನ್ನು ಒದಗಿಸಬೇಕು ಎಂಬ ನಮ್ಮ ಯೋಚನೆಯ ಜೊತೆ ಹೊಂದಾಣಿಕೆಯಾಗುತ್ತದೆ. ವರ್ಲ್ಡ್ ಎಕನಾಮಿಕ್ ಫೋರಮ್‌ನ ಫ್ಯೂಚರ್ ಆಫ್ ಜಾಬ್ಸ್ ರಿಪೋರ್ಟ್ 2023ರಲ್ಲಿ ಮುಂದಿನ ಐದು ವರ್ಷಗಳಲ್ಲಿ 44% ಕಾರ್ಮಿಕರು ಕೌಶಲ್ಯಗಳ ವಿಚಾರದಲ್ಲಿ ಹಿಂದೆ ಬೀಳಲಿದ್ದಾರೆ ಎಂದು ತಿಳಿಸಲಾಗಿತ್ತು. ಆದ್ದರಿಂದ ಉದ್ಯೋಗ ಕ್ಷೇತ್ರದಲ್ಲಿ ಉಂಟಾಗುತ್ತಿರುವ ಅತಿ ವೇಗದ ಬದಲಾವಣೆಗಳಿಗೆ ನಮ್ಮ ಯುವಜನತೆಯನ್ನು ಸಿದ್ಧಗೊಳಿಸುವಲ್ಲಿ ಈ ಇಂಟರ್ನ್ ಶಿಪ್ ಕಾರ್ಯಕ್ರಮವು ಮಹತ್ವದ ಪಾತ್ರ ವಹಿಸಲಿದೆ.
ಉನ್ನತ ಶಿಕ್ಷಣ ಸಾಲಗಳಿಗೆ ಇ-ವೋಚರ್ ಗಳನ್ನು ಪರಿಚಯಿಸಿರುವುದು ಮತ್ತು ಮಾಡೆಲ್ ಸ್ಕಿಲ್ ಲೋನ್ ಸ್ಕೀಮ್ ಅನ್ನು ಪರಿಷ್ಕರಿಸಿರುವುದು ಗುಣಮಟ್ಟದ ಶಿಕ್ಷಣವನ್ನು ಸುಲಭವಾಗಿ ಎಲ್ಲರಿಗೂ ದೊರಕಿಸುವ ನಿಟ್ಟಿನಲ್ಲಿನ ಮಹತ್ವದ ಹೆಜ್ಜೆಯಾಗಿದೆ. 2025ರ ವೇಳೆಗೆ ಭಾರತದ ಎಜು-ಟೆಕ್ ಕ್ಷೇತ್ರವು $10.4 ಶತಕೋಟಿ ತಲುಪಲಿದೆ ಎಂದು ನಂಬಲಾಗಿದೆ. ಹಾಗಾಗಿ ಈ ಆರ್ಥಿಕ ಯೋಜನೆಗಳು ದೇಶದಲ್ಲಿ ತಂತ್ರಜ್ಞಾನ-ಸಂಯೋಜಿತ ಕಲಿಕಾ ಕ್ರಮಗಳನ್ನು ಅಳವಡಿಸುವ ಪ್ರಕ್ರಿಯೆಯನ್ನು ತೀವ್ರಗೊಳಿಸಬಹುದಾಗಿದೆ.
ವಿಶೇಷವಾಗಿ ಅನುಸಂಧಾನ ರಾಷ್ಟ್ರೀಯ ಸಂಶೋಧನಾ ನಿಧಿಯ ಸ್ಥಾಪನೆ ನಿಜಕ್ಕೂ ಒಂದು ಮಹತ್ವದ ಯೋಜನೆಯಾಗಿದೆ. ಯುನೆಸ್ಕೋ ಸೈನ್ಸ್ ರಿಪೋರ್ಟ್ 2021ರ ಪ್ರಕಾರ ಸಂಶೋಧನೆ ಮತ್ತು ಅಭಿವೃದ್ಧಿ ವಿಚಾರದಲ್ಲಿ ಭಾರತ ಮಾಡುತ್ತಿರುವ ದೇಶೀಯ ವೆಚ್ಚವು ದೇಶದ ಜಿಡಿಪಿಯ 0.7%ರಷ್ಟು ಮಾತ್ರ ಇದೆ. ಹಾಗಾಗಿ ಈ ನಿಧಿಯು ಭಾರತದ ಸಂಶೋಧನಾ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತರುವ ನಂಬಿಕೆ ಇದೆ. ಜೊತೆಗೆ ಶಿಕ್ಷಣದಲ್ಲಿ ನಾವೀನ್ಯತೆ ಮತ್ತು ತಾಂತ್ರಿಕ ಸುಧಾರಣೆ ಸಾಧ್ಯವಾಗಿಸುವ ವಿಚಾರದಲ್ಲಿ ಸೂಕ್ತ ಕೊಡುಗೆಯನ್ನು ನೀಡುವ ನಿರೀಕ್ಷೆ ಇದೆ.
ಶಿಕ್ಷಣ ತಜ್ಞರಾಗಿ ನಾವು ಯುವಜನತೆಯನ್ನು ಸುಸಂಘಟಿತ ವ್ಯಕ್ತಿಗಳನ್ನಾಗಿ ರೂಪಿಸಲು ಬದ್ಧರಾಗಿದ್ದೇವೆ. ಈ ಹಿನ್ನೆಲೆಯಲ್ಲಿ ಈ ಎಲ್ಲಾ ಯೋಜನೆಗಳು ಭಾರತದ ಶಿಕ್ಷಣ ಕ್ಷೇತ್ರವನ್ನು ಪರಿವರ್ತಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿವೆ ಎಂದು ನಾವು ಭಾವಿಸಿದ್ದೇವೆ. ನಿರಂತರವಾಗಿ ವೇಗವಾಗಿ ಬದಲಾಗುತ್ತಿರುವ ಈ ಜಗತ್ತಿಗೆ ಸೂಕ್ತ ರೀತಿಯಲ್ಲಿ ಹೊಂದಿಕೊಳ್ಳಲು ಮತ್ತು ಉದ್ಯೋಗದಲ್ಲಿ ಗೆಲ್ಲಲು ಅವರನ್ನು ಸಿದ್ಧಗೊಳಿಸುವ ನಮ್ಮ ಧ್ಯೇಯದ ಜೊತೆಗೆ ಕೇಂದ್ರ ಸರ್ಕಾರದ ಯೋಜನೆಗಳು ಸಂಪೂರ್ಣವಾಗಿ ಹೊಂದಾಣಿಕೆಯಾಗುತ್ತಿವೆ. ಕೌಶಲ್ಯಪೂರ್ಣ, ಹೊಸ ಆಲೋಚನೆ ಹೊಂದಿರುವ ಮತ್ತು ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಮಾಡಲು ಸಿದ್ಧರಾಗಿರುವ ಭಾರತವನ್ನು ತಯಾರುಗೊಳಿಸುವ ನಿಟ್ಟಿನಲ್ಲಿ ನಾವು ನಮ್ಮ ಪಾತ್ರವನ್ನು ನಿರ್ವಹಿಸಲು ಎದುರು ನೋಡುತ್ತಿದ್ದೇವೆ."
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ