ಬಳ್ಳಾರಿ:ಶಾಖೋತ್ಪನ್ನ ವಿದ್ಯುತ್ ಕೇಂದ್ರ- ಜು.20 ರಂದು 55ನೇ ಸಂಸ್ಥಾಪನಾ ದಿನಾಚರಣೆ

Upayuktha
0


ಬಳ್ಳಾರಿ: 
ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಹಾಗೂ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರ, ಕುಡತಿನಿ ಇವರ ವತಿಯಿಂದ ಜು.20 ರಂದು ಸಂಜೆ 04 ಗಂಟೆಗೆ ನಗರದ ಕೆ.ಎಸ್.ಆರ್.ಟಿ.ಸಿ ಹೊಸ ಬಸ್ ನಿಲ್ದಾಣದ ಹತ್ತಿರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ 55ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಪ್ರಭಾರ ಕಾರ್ಯನಿರ್ವಾಹಕ ನಿರ್ದೇಶಕ ರಾಜು ಬಿ.ಟಿ ಅಧ್ಯಕ್ಷತೆ ವಹಿಸುವರು. 


ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರದ ನಿವೃತ್ತ ಪ್ರಭಾರ ಕಾರ್ಯ ನಿರ್ವಾಹಕ ನಿರ್ದೇಶಕ ಸೂರ್ಯನಾರಾಯಣ.ಎಸ್., ನಿವೃತ್ತ ಮೆರಿಟ್ ಗ್ರೇಡ್ ಡಿ.ಸಿ.ಪಿ.ಓ ಶೇಖ್ ಮೆಹಬೂಬ್ ಎಸ್.ಓ ಖಾಸಿಮ್, ಪ್ರಭಾರ ಮುಖ್ಯ ಅಭಿಯಂತರರು (ಇಂ.ನಿ.) ಮೋಹನ್ ರಾಜು.ಜಿ., ಪ್ರಭಾರ ಮುಖ್ಯ ಅಭಿಯಂತರರ (ಕಾಮಗಾರಿ) ಅಶೋಕ್ ಕುಮಾರ್.ಹೆಚ್., ಉ.ಪ್ರ.ಪ್ರ(ಹಣಕಾಸು) ಶಿವಲಾಲ್ ಜಿ. ನಾಯಕ್, ಉ.ಪ್ರ.ಪ್ರ (ಮಾ.ಸಂ.ಅ) ವೈ.ಬಿ.ಹಾಲಬಾವಿ ಸೇರಿದಂತೆ ಕುಡತಿನಿಯ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಸಂಸ್ಥಾಪನಾ ದಿನಾಚರಣೆ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಇತರರು ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top