ಬಳ್ಳಾರಿ: ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ಆವರಣದಲ್ಲಿ30 ದಿನಗಳ ಬ್ಯೂಟಿ ಪಾರ್ಲರ್ ತರಬೇತಿ ಮತ್ತು 10 ದಿನಗಳ ಕುರಿ ಸಾಕಾಣಿಕೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಈ ತರಬೇತಿ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಪ್ರಮೋದ ಯೋಜನಾ ಅಧಿಕಾರಿಗಳು
ಜಿಲ್ಲಾ ಪಂಚಾಯತ ಬಳ್ಳಾರಿ, ಇವರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಹಿಳೆಯರು ಸೌಂದರ್ಯಕ್ಕೆ ಹೆಚ್ಚು ಒತ್ತು ಕೊಡುವರಿಂದ ಬ್ಯೂಟಿ ಪಾರ್ಲರ್ ಸ್ವ-ಉದ್ಯೋಗ ಮಾಡಿಕೊಂಡು ಸೃಜನಾತ್ಮಕವಾಗಿ ಹೊಸ ತರಹದ ಮೇಕಪ್ ಕೌಶಲ್ಯವನ್ನು ಬೆಳಸಿಕೊಂಡು ಸಮಾಜದಲ್ಲಿ ಉತ್ತಮ ಜೀವನ ನಡೆಸಲು ಈ ಬ್ಯೂಟಿ ಪಾರ್ಲರ್ ತರಬೇತಿ ನಿಮಗೆ ಸಹಕಾರಿಯಾಗಲಿ, ಕುರಿ ಸಾಕಾಣಿಕೆ ವ್ಯವಸಾಯದ ಜೊತೆಗೆ ಪೂರಕವಾಗಿದ್ದು, ಕುರಿಗಳಿಗೆ ತುಂಬಾ ಬೇಡಿಕೆ ಇದ್ದು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹಾರೈಸಿದರು.
ಅಜೀತ್ ನಾಯ್ಕ ಉಪ ನಿರ್ದೇಶಕರು ಜಿಲ್ಲಾ ಕೈಗಾರಿಕಾ ಕೇಂದ್ರ ಬಳ್ಳಾರಿ. ಇವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಹಿಳೆಯರು ಮನೆಯಲ್ಲಿ ಕುಳಿತು ಬ್ಯೂಟಿ ಪಾರ್ಲರ ಮಾಡುವುದರಿಂದ ಕೌಟುಂಬಿಕ ಜೀವನದಲ್ಲಿ ಆರ್ಥಿಕವಾಗಿ ಸಬಲರಾಗಬಹುದು ಎಂದು ತಿಳಿಸಿದರು. ರಾಜೇಸಾಬ್ ಎಚ್ ಎರಿಮನಿ ನಿರ್ದೇಶಕರು, ಕಾರ್ಯಕ್ರಮವನ್ನು ಉದ್ದೇಶಿಸಿ ನಮ್ಮ ತರಬೇತಿ ಸಂಸ್ಥೆಯಲ್ಲಿ ಕೌಶಲ್ಯದ ಜೊತೆಗೆ ಆತ್ಮವಿಶ್ವಾಸ, ವ್ಯಕ್ತಿತ್ವ ವಿಕಸನದ ಮಾಹಿತಿ ನೀಡಲಾಗಿದ್ದು, ಅದನ್ನು ತಮ್ಮ ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಮಾಹಿತಿ ನೀಡಿದರು.
ರಘುವರ್ಮಾ ಓಐಒ ಜಿಲ್ಲಾ ಪಂಚಾಯತ ಬಳ್ಳಾರಿ, ಜಡೇಪ್ಪ ತರಬೇತಿ ಕಾರ್ಯಕ್ರಮ ಸಂಯೋಜಕರು, ಶ್ರೀಮತಿ ಸಿದ್ದಲಿಂಗಮ್ಮ, ಸಂತೋಷ ಕುಮಾರ್, ಕಿರಣ ಕುಮಾರ ಹಾಗೂ 60 ಜನ ಶಿಭಿರಾರ್ಥಿಗಳು ಭಾಗವಹಿಸಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ