ಸಾಧಕರ ಬದುಕು ಎನ್‌ಎಸ್‌ಎಸ್ ಶಿಬಿರಾರ್ಥಿಗಳಿಗೆ ಆದರ್ಶವಾಗಲಿ

Upayuktha
0


ಬೇವೂರು (ಬಾಗಲಕೋಟೆ): ಗಾಂಧೀಜಿ, ಅಬ್ರಾಹಿಂ ಲಿಂಕನ್, ಅಲೆಕ್ಸಾಂಡರ್ ಮುಂತಾದ ಮಹನೀಯರ ಬದುಕಿನ ಸಾಹಸಗಾಥೆಗಳು ಯುವ ಸಮುದಾಯಕ್ಕೆ ಆದರ್ಶಪ್ರಾಯವಾಗಬೇಕು ಅನೇಕ ಪೆಟ್ಟುಗಳನ್ನು ಏರಿಳಿತಗಳನ್ನು ಕಂಡು ಜೀವನದಲ್ಲಿ ಸಾಧನೆ ತೋರಿದ ಸಾಧಕರ ಬದುಕು ಚಿರಸ್ಮರಣೆಯಾಗಿದೆ ಎಂದು ಪ್ರಾಧ್ಯಾಪಕ ಡಾ. ಎಸ್ ಎಸ್ ಹಂಗರಗಿ ಹೇಳಿದರು.


ಅವರು ಪಿ.ಎಸ್. ಎಸ್ ಕಾಲೇಜಿನ ವತಿಯಿಂದ ಸಮೀಪದ ಚಿಟಗಿನಕೊಪ್ಪ ಗ್ರಾಮದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಿಶೇಷ ವಾರ್ಷಿಕ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.


ಕೃಷ್ಣ ಬಲದಂಡೆ ಸೀತಿಮನಿಯ ಶ್ರೀ ವಶಿಷ್ಠ ಮಹಾಮನಿಗಳು ಶ್ರದ್ದಾನಂದ ಮಠ ಪೂಜ್ಯರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನುಡಿಗಳನ್ನಾಡಿ ವಿದ್ಯಾರ್ಥಿಗಳು ವಿಜ್ಞಾನದ ಜ್ಞಾನಕ್ಕಿಂತ ಸಂಸ್ಕಾರದ ಬದುಕಿಗೆ ಹೆಚ್ಚಿನ ಬೆಲೆ ಕೊಡಬೇಕೆಂದು ಹೇಳಿದರು.


ಆದರ್ಶ ವಿದ್ಯಾ ವರ್ಧಕ ಸಂಘದ ಸದಸ್ಯರಾದ  ಡಿ.ಜಿ ಶಿರೂರ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ  ಪ್ರಾಚಾರ್ಯ ಡಾ. ಜ.ಗು. ಬೈರಮಟ್ಟಿ, ಹಿರಿಯ ಉಪನ್ಯಾಸಕ ಬಿ.ಬಿ ಬೇವೂರ, ಉಪನ್ಯಾಸಕ ಎನ್. ಬಿ ಬೆನ್ನೂರ ಸೇರಿದಂತೆ ಕಾರ್ಯಕ್ರಮದಲ್ಲಿ ವೈ. ಎಚ್ ಬೆನಕನವಾರಿ ಎನ್. ಬಿ. ಪಾಟೀಲ್, ಜಿ.ಸಿ ಕಡೂರು, ಶ್ರೀಮತಿ ಎಸ್. ಎಂ ಚಲವಾದಿ ಹಾಗೂ ಎಸ್.ಡಿ.ಎಂ.ಸಿಯ ಸರ್ವ ಸದಸ್ಯರು ಪ್ರಭಾರಿ ಮುಖ್ಯ ಗುರುಗಳಾದ ಸುನಿಲ ಪಾಟೀಲ ಗ್ರಾಮದ ಗುರುಹಿರಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಉಪನ್ಯಾಸಕರಾದ ಎಸ್.ಎಸ್ ಆದಾಪುರ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು.


ಡಾ. ಸಂಗಮೇಶ.ಬಿ. ಹಂಚಿನಾಳ ಅತಿಥಿಗಳನ್ನ ಪರಿಚಯಿಸಿದರು. ಡಿ.ವಾಯ್. ಬುಡ್ಡಿಯವರ ಮಾಲಾರ್ಪಣೆ ಕಾರ್ಯಕ್ರಮ ನೆರವೇರಿಸಿದರು. ಡಾ. ಎ.ಎಂ. ಗೊರಚಿಕ್ಕನವರ ನಿರೂಪಿಸಿದರು. ಎನ್.ಎಸ್.ಎಸ್ ಯೋಜನಾಧಿಕಾರಿ ಜಿ.ಎಸ್ ಗೌಡರ ವಂದಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಪರಪ್ಪ ಸಂಗಪ್ಪ ಸಜ್ಜನ ಕಾಲೇಜಿನ 50 ಶಿಬಿರಾಥಿ೯ ಸ್ವಯಂಸೇವಕರು ಭಾಗಿಯಾಗಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top