ಬಳ್ಳಾರಿ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಾವಂಬಾವಿಯಲ್ಲಿ ಶ್ರೀ ಹುಲಿಕುಂಟೆರಾಯ ತೊಗಲುಗೊಂಬೆ ಕಲಾ ತಂಡ (ರಿ) ಬಳ್ಳಾರಿಯ “ಬಾ ಮರಳಿ...ಶಾಲೆಗೆ” ಎಂಬ ತೊಗಲುಗೊಂಬೆ ಯಾಟದ ಮೂಲಕ ಅತ್ಯತ್ತುಮವಾಗಿ ಪ್ರದರ್ಶನ ಮಾಡಿದರು.
ಶ್ರೀಮತಿ ಆರ್. ಉಮಾದೇವಿ ಉಪನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ಬಳ್ಳಾರಿ ಇವರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರವನ್ನು ಉದ್ಘಾಟನೆಯನ್ನು ಮಾಡಿ, ಈ ಸಂದರ್ಭದಲ್ಲಿ ಮಾತನಾಡುತ್ತ ಅನೇಕ ರಂಗಕಲೆಯ ಪ್ರಕಾರಗಳಲ್ಲಿ ತೊಗಲುಗೊಂಬೆ ಯಾಟವನ್ನು ಸಹ ಒಂದಾಗಿದೆ ಅಳಿವಿನ ಹಂಚಿನಲ್ಲಿರುವ ಈ ತೊಂಗಲುಗೊಂಬೆ ಯಾಟವನ್ನು ಉಳಿಸಲು ಕೆ. ಹೊನ್ನೂರಸ್ವಾಮಿ ರವರು ಉತ್ತಮ ಪ್ರಯತ್ನ ಮಾಡಿದ್ದಾರೆ.
ಶಿಕ್ಷಣ ಕ್ಷೇತ್ರದ ಜ್ವಲಂತ ಸಮಸ್ಯೆಯಾದ ಮಕ್ಕಳು ಶಾಲೆ ಬಿಡುವುದರ ಬಗ್ಗೆ “ಬಾ ಮರಳಿ... ಶಾಲೆಗೆ” ಎಂಬ ಕಥಾವಸ್ತುವನ್ನು ತೊಗಲುಗೊಂಬೆ ಪ್ರದರ್ಶನದ ಮೂಲಕ ಮಾಡಿದ್ದು ಮಕ್ಕಳ ಮನ ಮುಟ್ಟಿದೆ ಎಂಬ ಸಂದೇಶವನ್ನು ನೀಡಿ ಮತ್ತು ಎಲ್ಲಾರಿಗೂ ಶುಭ ಕೋರಿದರು.
ಶ್ರೀಮತಿ ಕಲ್ಪನ ರೆಡ್ಡಿ, ಮಹಾನಗರ ಪಾಲಿಕೆ ಸದಸ್ಯರು ಇವರು ಸಹ ಹಾಜರಿದ್ದರು, ಮನೋಹರ್.ಜಿ ರವರು ಸಮನ್ವಯಾಧಿಕಾರಿಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಕುರುಗೋಡು, ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಈ ಸಂಧರ್ಭದಲ್ಲಿ ಬಾ ಮರಳಿ...ಶಾಲೆ ಎಂಬ ತೊಗಲುಗೊಂಬೆ ಪ್ರದರ್ಶವನ್ನು ಇಡಿ ಬಳ್ಳಾರಿ ಜಿಲ್ಲಾದ್ಯಂತ ಶಾಲೆಗಳಿಗೆ ಜಾಗೃತಿ ಮೂಡಿಸಲು ಕೋರಿದರು.
ಹೊನ್ನೂರಸ್ವಾಮಿ, ಅಧ್ಯಕ್ಷರು ಹಾಗೂ ಸಂಚಾಲಕರು ತೊಗಲುಗೊಂಬೆ ಕಲಾವಿದರು ಪ್ರಸ್ಥಾವಿಕ ನುಡಿ ಮಾತನಾಡಿದರು, ಈ ಕಾರ್ಯಕ್ರದಲ್ಲಿ ನಿಂಗಪ್ಪ.ಸಿ ಮುಖ್ಯ ಗುರುಗಳು, ಹಾಗೂ ಜಿಲ್ಲಾಧ್ಯಕ್ಷರು, ಕ.ರಾ.ಪ್ರಾ.ರಾ.ಶಿ. ಬಳ್ಳಾರಿ, ನೇತಿ ರಘುರಾಮ್, ಉಪಧ್ಯಾಕ್ಷರು, ಎಸ್.ಡಿ.ಎಂ.ಸಿ. ಹಾವಂಬಾವಿ, ಬಳ್ಳಾರಿ, ತುಕರಾಮ್ ಗೊರವ, ಅಧ್ಯಕ್ಷರು, ಕ.ರಾ.ಪ್ರಾ.ಶಾ.ಶಿ.ಸಂಘ, ಕುರುಗೋಡು, ಸಣ್ಣ ಮಾರೆಪ್ಪ, ಗೌರವಾಧ್ಯಕ್ಷರು, ಕ.ರಾ.ಪ್ರಾ.ಶಾ.ಶಿ. ಸಂಘ, ಕುರುಗೋಡು,ಜಿ. ಶಿವಶಂಕರ, ಪ್ರಧಾನ ಕಾರ್ಯದರ್ಶಿ, ಕ.ರಾ.ಪ್ರಾ.ಶಾ.ಶಿ. ಸಂಘ, ಕುರುಗೋಡು, ಮತ್ತು ನಿರೂಪಣೆ: ಶ್ರೀಮತಿ ಬಿ.ಶೀಲಾ, ಶಿಕ್ಷಕಿ, ಬಳ್ಳಾರಿ, ಶ್ರೀಮತಿ ಗಂಗಮ್ಮ, ಶಿಕ್ಷಕರು, ಬಳ್ಳಾರಿ ಇವರು ಪ್ರಾರ್ಥನೆ ಮಾಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ