- ರೈತ ಸಮ್ಮಾನ ಹಣವನ್ನು ನಿಲ್ಲಿಯಾಯ್ತು.
- ಬಿತ್ತನೆ ಬೀಜದ ದರವನ್ನು ದುಪ್ಪಟ್ಟು ಮಾಡಲಾಗಿದೆ.
- ಹನಿ ನೀರಾವರಿ ರಿಯಾಯ್ತಿ ನಿಲ್ಲಿಸಿಯಾಯ್ತು.
ರೈತರ ಹೊಲದ ನೀರಿನ ಪಂಪ್‌ಸೆಟ್ ಉಚಿತ ವಿದ್ಯುತ್‌ನ್ನು ನಿಲ್ಲಿಸುವ ಯೋಜನೆ ಇದೆ ಅಂತ ಸುದ್ದಿ ಇದೆ.
ಹಾಲಿನ ದರ ಎರಡು ಬಾರಿ ಏರಿಸಿದರೂ ಹಾಲು ಉತ್ಪಾದಕ ರೈತರಿಗೆ ಸಿಕ್ಕಿದ್ದು ಶೂನ್ಯ. ಮತ್ತು ಹಾಲು ಉತ್ಪಾದಕರಿಗೆ ಕೊಡಬೇಕಾದ ಬಾಕಿ ಹಣ ಉಳಿಸಿಕೊಂಡು ಹೆಚ್ಚು ಕಮ್ಮಿ ವರ್ಷಗಳೇ ಆಗುತ್ತಿದೆ.
ಎಲೆ ಚುಕ್ಕಿ ರೋಗ ಸಂತ್ರಸ್ತ ಅಡಿಕೆ ಬೆಳೆಗಾರರಿಗೆ ಬಿಡುಗಡೆ ಮಾಡ ಬೇಕಿದ್ದ ಅನುದಾನ ₹.225 ಕೋಟಿಯಲ್ಲಿ 60% ಕೊಡಲು ಕೇಂದ್ರ ಸರಕಾರ ಒಪ್ಪಿದ್ದು, ರಾಜ್ಯದ ಪಾಲಿನ 40% ಒಪ್ಪಿಗೆಗೆ ರಾಜ್ಯ ಸರಕಾರ ಮೌನವಾಗಿದೆ. ಎಲೆ ಚುಕ್ಕಿ ಸಂಶೋಧನೆಗೆ ಬಿಡುಗಡೆಯಾಗಿದ್ದ 10 ಕೋಟಿಯನ್ನು ತಡೆ ಹಿಡಿದು, ಅದರಲ್ಲಿ 43ಲಕ್ಷ ಮಾತ್ರ ಬಿಡುಗಡೆ ಮಾಡಿ ಕೈ ತೊಳೆದುಕೊಳ್ಳಲಾಗಿದೆ. ಈ ಬಿಡಿಗಾಸಿನಲ್ಲಿ ಸಂಶೋಧನೆ ಎಲ್ಲಿಯವರೆಗೆ ಬಂದಿದೆಯೋ ಯಾವ ರೈತರಿಗೂ ಗೊತ್ತಿಲ್ಲ.
- ಕಾಡು ಪ್ರಾಣಿಗಳ ಹಾವಳಿ ವಿಚಾರದಲ್ಲಿ ರೈತರ ಸಮಸ್ಯೆಗಳಿಗೆ ರಾಜ್ಯ ಸರಕಾರ ದಿವ್ಯ ನಿರ್ಲಕ್ಷವಹಿಸಿದೆ.
- ಸಕ್ರಮ ಒತ್ತುವರಿ ಜಾಗಕ್ಕೆ ಹಕ್ಕುಪತ್ರ ಕೊಡಲು ಸರಕಾರ ಮೀನಾ ಮೇಷ ಎಣಿಸುತ್ತ ಸತಾಯಿಸುತ್ತಿದೆ.
- ಜೊತೆಗೆ ಒತ್ತುವರಿ ತೆರವಿಗೆ ಆದೇಶ ಹೊರಡಿಸಿ ರೈತರನ್ನು ಆತಂಕದಲ್ಲಿಡಲಾಗಿದೆ.
- ದಶಕಗಳಿಂದ ಬಾಕಿ ಇರುವ 94C ಅರ್ಜಿಗಳನ್ನು ಟೇಪ್ ಕಟ್ಟಿ ಬದಿಗಿಡಲಾಗಿದೆ.
- ಕೊಳೆ ರೋಗಕ್ಕೆ ಕೊಡುತ್ತಿದ್ದ ಮೈಲುತುತ್ತ ಸಬ್ಸಿಡಿಯನ್ನು ನಿಲ್ಲಿಸಲಾಗಿದೆ.
.... ಇನ್ನೂ ಇದೆ!!!
ಸರಕಾರದ ನಿರ್ಲಕ್ಷ್ಯದ ಪಟ್ಟಿ ದೊಡ್ಡದಿದೆ.
ರೈತರ ವಿಚಾರದಲ್ಲಿ ಕರ್ನಾಟಕ ಸರಕಾರದಿಂದ ಯಾವ ಅನುಕೂಲಕರ ಸ್ಪಂದನವೂ ಇಲ್ಲ. ಅತ್ಯಂತ ನಿರ್ಲಕ್ಷ್ಯದಿಂದ ರೈತರನ್ನು ಕಾಣಲಾಗುತ್ತಿದೆ.
ದೇವರ ದಯೆಯಿಂದ ಬರಗಾಲ ಕಳೆದು ಒಂದಿಷ್ಟು ಮಳೆಯಾಗಿ ನಿಟ್ಟುಸಿರು ಬಿಡುವಂತಾಗಿದ್ದರೂ, ರಾಜ್ಯ ಸರಕಾರದ ದಿವ್ಯ ನಿರ್ಲಕ್ಷ್ಯ, ದೋರಣೆಗಳು ರೈತರನ್ನು ಆಘಾತ ಮತ್ತು ಅಪಾಯಕಾರಿ ಪರಿಸ್ಥಿತಿಯಲ್ಲಿಟ್ಟಿದೆ.
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ