ಬೆಂಗಳೂರು : ನಾಟ್ಯ ಭಾರತಿ ನೃತ್ಯ ಶಾಲೆಯ ವತಿಯಿಂದ ಜೂನ್ 26, ಬುಧವಾರ ಸಂಜೆ 6-00 ಗಂಟೆಗೆ ಮಲ್ಲೇಶ್ವರಂದ 14ನೇ ಅಡ್ಡರಸ್ತೆ (ಸಂಪಿಗೆ ರಸ್ತೆ)ಯಲ್ಲಿರುವ ಸೇವಾ ಸದನ ಸಭಾಂಗಣದಲ್ಲಿ ನೃತ್ಯ ಶಾಲೆಯ ಗುರುಗಳಾದ ವಿದ್ವಾನ್ ಶ್ರೀ ನಾಗೇಶ್ ಜಿ.ಎಸ್. ಮತ್ತು ಡಾ|| ಶ್ರೀಮತಿ ಶ್ರೀ ರಂಜಿತಾ ನಾಗೇಶ್ ರವರ ಸುಪುತ್ರಿಯೂ, ಶಿಷ್ಯರೂ ಆದ ಶ್ರೀಮತಿ ನೃತ್ಯಶ್ರೀ ಜಿ.ಎನ್. ಭಾವ ಪುಷ್ಯರಾಗ ಪಂಚಮಿ ವಿಷಯಾಧಾರಿತ ನೃತ್ಯ ಪ್ರದರ್ಶನ ನೀಡಲಿದ್ದಾರೆ.
ಈ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಡಾ|| ಎಸ್. ಹೇಮಲತಾ (ನಿವೃತ್ತ ಪ್ರಾಧ್ಯಾಪಕರು, ಭೌತಶಾಸ್ತ್ರ), ಡಾ|| ಎಸ್.ಎನ್. ಸುಶೀಲ (ನಿವೃತ್ತ ಪ್ರಾಧ್ಯಾಪಕರು, ಪಫಾ೯ರ್ಮಿಂಗ್ ಆರ್ಟ್ಸ್ ವಿಭಾಗ, ಬೆಂಗಳೂರು ಯೂನಿವರ್ಸಿಟಿ), ವಿ|| ಶ್ರೀಮತಿ ಮಿನಲ್ ಪ್ರಭು (ನಿರ್ದೇಶಕರು, ಮುದ್ರಿಕ ಫೌಂಡೇಶನ್, ಬೆಂಗಳೂರು), ಡಾ|| ಕೃಪಾ ಫಡ್ಕೆ (ನೃತ್ಯಗಿರಿ, ಮೈಸೂರು) ಮತ್ತು ಡಾ|| ಆರ್.ವಿ. ರಾಘವೇಂದ್ರ, ಅನನ್ಯ, ಬೆಂಗಳೂರು) ಇವರುಗಳು ಆಗಮಿಸಲಿದ್ದಾರೆ.
ಹಿಮ್ಮೇಳ ಕಲಾವಿದರು :
ನೃತ್ಯ ಸಂಯೋಜನೆ ಮತ್ತು ನಟ್ಟುವಾಂಗ : ವಿದ್ವಾನ್ ಶ್ರೀ ನಾಗೇಶ್ ಜಿ.ಎಸ್. ಮತ್ತು ಡಾ|| ಶ್ರೀಮತಿ ಶ್ರೀರಂಜಿತಾ ನಾಗೇಶ್, ಗಾಯನ : 'ಗಾನಭಾರತಿ' ಡಾ|| ಉಮಾ ಕುಮಾರ್, ಮೃದಂಗ : ವಿದ್ವಾನ್ ಶ್ರೀ ನಾಗರಾಜ್ ಜಿ. ಎನ್., ಕೊಳಲು : ವಿದ್ವಾನ್ ಶ್ರೀ ಮಹೇಶ್ ಸ್ವಾಮಿ, ಪಿಟೀಲು : ವಿದ್ವಾನ್ ಶ್ರೀ ಹೇಮಂತ್ ಕುಮಾರ್.
ಈ ವಿಶೇಷ ಕಾರ್ಯಕ್ರಮಕ್ಕೆ ನೃತ್ಯಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯುವ ಕಲಾವಿದೆಯನ್ನು ಪ್ರೋತ್ಸಾಹಿಸಬೇಕೆಂದು ಶ್ರೀಮತಿ ಮತ್ತು ಶ್ರೀ ನಾಗೇಶ್ ದಂಪತಿಗಳು ವಿನಂತಿಸಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


