ಹಿಂದೂ ರಾಷ್ಟ್ರ ಈ ಶಬ್ದವು ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲಿಯೂ ಈಗ ಯಾರಿಗೂ ಹೊಸದಾಗಿಲ್ಲ. ಸುಮಾರು 15 ವರ್ಷಗಳ ಹಿಂದೆ ಈ ಶಬ್ದವನ್ನು ಉಚ್ಚರಿಸುವುದು ಸಹ ಅಪರಾಧವಾಗಿತ್ತು. ಆದರೆ 2002 ರಲ್ಲಿ ಹಿಂದೂ ಜನಜಾಗೃತಿ ಸಮಿತಿಯು ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಸ್ಥಾಪನೆಯಾಯಿತು. ಈ ರೀತಿಯಲ್ಲಿ ಒಂದು ಕಾಲದಲ್ಲಿ ವರ್ಜಿತ ಶಬ್ದವು ಇಂದು ಸರ್ವಮಾನ್ಯವಾಗುವುದು ಹಿಂದುತ್ವನಿಷ್ಠ ಸಂಘಟನೆಗಳ ದೊಡ್ಡ ಯಶಸ್ಸು ಎನ್ನಬಹುದು.
ಬಾಂಧವರೇ, ಭಾರತ ಮತ್ತು ಹಿಂದೂಗಳ ಮೇಲಿನ ಸಂಕಟಗಳ ಮಾಲಿಕೆಯು ತಮಗೆಲ್ಲರಿಗೂ ತಿಳಿದಿದೆ; ಆದರೆ ಅದರಲ್ಲಿಯೂ ಗಂಭೀರ ಸಂಕಟ ಎಂದರೆ ‘ಗಜವಾ-ಎ-ಹಿಂದ್. ಈ ಶಬ್ದ ತಮಗೆಲ್ಲರಿಗೂ ಹೊಸತಿರಬಹುದು. ಆದರೆ ಸದ್ಯ ಬಿರುಗಾಳಿಯ ಮೊದಲಿನ ಶಾಂತತೆಯ ರೂಪದಲ್ಲಿರುವ ಈ ಸಂಕಟವು ನಮ್ಮ-ನಿಮ್ಮ ಎಲ್ಲರ ಸುತ್ತಲೂ ಸತತ ಸುತ್ತುತ್ತಿದೆ. ‘ಗಜವಾ-ಎ-ಹಿಂದ್ನ ಅರ್ಥವೇನೆಂದರೆ ‘ಭಾರತವನ್ನು ಇಸ್ಲಾಮೀಕರಣ ಮಾಡುವುದು. ಸದ್ಯ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವ ಲವ್ ಜಿಹಾದ್, ಲ್ಯಾಂಡ್ ಜಿಹಾದ್, ಹಲಾಲ್ ಜಿಹಾದ್ ಇವೆಲ್ಲ ಈ ‘ಗಜವಾ-ಎ-ಹಿಂದ್ನ ಚಿಕ್ಕ ರೂಪಗಳಾಗಿವೆ. ಈ ಸಂದರ್ಭದಲ್ಲಿ ಹಿಂದೂಗಳು ಎಚ್ಚರಗೊಳ್ಳುವುದಂತೂ ದೂರದ ಮಾತಾಯಿತು, ಅವರಿಗೆ ಇಂದಿಗೂ ಈ ಸಂಕಟದ ಕಲ್ಪನೆ ಕಿಂಚಿತ್ತೂ ಇಲ್ಲ ಹಾಗಾಗಿ ಹಿಂದೂಗಳಲ್ಲಿ ಜಾಗೃತಿ ಮೂಡಿಸಿ ಅವರಲ್ಲಿ ಜಾಗರೂಕತೆಯನ್ನು ಮೂಡಿಸುವುದು ಅನಿವಾರ್ಯವಾಗಿದೆ. ಅದಕ್ಕಾಗಿ ‘ಗಜವಾ-ಎ-ಹಿಂದ್ಗೆ ‘ಹಿಂದೂ ರಾಷ್ಟ್ರ ಇದೊಂದೇ ಉತ್ತರವಾಗಿದೆ. ಇದನ್ನು ಹಿಂದೂಗಳ ಮನಸ್ಸಿನಲ್ಲಿ ಬಿಂಬಿಸಬೇಕಾಗಿದೆ.
1. ‘ಸೆಕ್ಯುಲರನ್ನು ಮುದ್ದಿಸುವುದನ್ನು ನಿಲ್ಲಿಸಿ ! :
1976 ರಲ್ಲಿ ದೇಶದಲ್ಲಿ ತುರ್ತುಪರಿಸ್ಥಿತಿ ಇರುವಾಗ ಮತ್ತು ಸಂಪೂರ್ಣ ವಿರೋಧಪಕ್ಷವು ಸೆರೆಮನೆಯಲ್ಲಿರುವಾಗ ಕಾಂಗ್ರೆಸ್‌ನ ಅಂದಿನ ಪ್ರಧಾನಮಂತ್ರಿ ಇಂದಿರಾ ಗಾಂಧಿ ಇವರು ಸಂವಿಧಾನದಲ್ಲಿ 42ನೆ ತಿದ್ದುಪಡಿ ಮಾಡಿ ಸಂವಿಧಾನದ ಮೂಲ ಪ್ರಸ್ತಾವನೆಯಲ್ಲಿಯೇ ಇಲ್ಲದ ‘ಸೆಕ್ಯುಲರ್ ಮತ್ತು ಸೋಶಲಿಸ್ಟ್ ಎಂಬ ಶಬ್ದಗಳನ್ನು ತುರುಕಿಸಿದರು. ಅಂದಿನಿಂದ ಹಿಂದೂಗಳ ಮೇಲಿನ ದಬ್ಬಾಳಿಕೆ ಹಾಗೂ ಅಲ್ಪಸಂಖ್ಯಾತರ ಅದರಲ್ಲಿಯೂ ವಿಶೇಷವಾಗಿ ಮುಸಲ್ಮಾನರ ಓಲೈಕೆ ದೊಡ್ಡ ಪ್ರಮಾಣದಲ್ಲಿ ಪ್ರಾರಂಭವಾಯಿತು. ಸಂವಿಧಾನದಲ್ಲಿ ಈ ರೀತಿಯ ಬದಲಾವಣೆ ಮಾಡುವುದು ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರರ ಅವಮಾನವೇ ಆಗಿತ್ತು; ಆದರೆ ಇಂದಿನ ತನಕ ಒಬ್ಬನೇ ಒಬ್ಬ ಪ್ರಗತಿಪರರು ಇದರ ಬಗ್ಗೆ ಚಕಾರವೆತ್ತಿಲ್ಲ. ಇದೇ ‘ಸೆಕ್ಯುಲರ್‌ವಾದದ ಹೆಸರಿನಲ್ಲಿ ಪ್ರಗತಿಪರರು ಹಿಂದೂ ರಾಷ್ಟ್ರವನ್ನು ವಿರೋಧಿಸುತ್ತಾರೆ; ಆದರೆ ಇದೇ ಪ್ರಗತಿಪರರು ‘ಗಜವಾ-ಎ-ಹಿಂದ್ ವಿಷಯದಲ್ಲಿ ಮಾತ್ರ ಚಕಾರವೆತ್ತಲ್ಲ. ಇದು ವಿಶೇಷವಾಗಿದೆ ! ಹಾಗಾಗಿ ಸಂವಿಧಾನದಲ್ಲಿ ತುರುಕಿಸಲಾಗಿರುವ ಈ ಶಬ್ದಗಳನ್ನು ತೆಗೆದು ಆ ಜಾಗದಲ್ಲಿ ಸಂವಿಧಾನಾತ್ಮಕವಾಗಿ ಹಿಂದೂ ರಾಷ್ಟ್ರ ಮತ್ತು ‘ಆಧ್ಯಾತ್ಮಿಕ ಈ ಶಬ್ದಗಳನ್ನು ಸಂವಿಧಾನದಲ್ಲಿ ಸೇರಿಸಬಹುದು. ಇದಕ್ಕಾಗಿ ಹಿಂದುತ್ವನಿಷ್ಠರಿಂದ ನ್ಯಾಯಾಂಗ ಹೋರಾಟ ನಡೆಯುತ್ತಿದೆ.
2. ಹಿಂದೂ ರಾಷ್ಟ್ರದ ಸ್ಥಾಪನೆಯ ಮಾರ್ಗ ರಾಜಕೀಯವಲ್ಲ ! : ‘ಯಾವುದಾದರೊಂದು ಪಕ್ಷವು ಅಧಿಕಾರಕ್ಕೆ ಬಂದರೆ ಹಿಂದೂ ರಾಷ್ಟ್ರ ಬರುವುದು’ ಎಂಬ ಭೂಮಿಕೆ ಯಾವತ್ತೂ ನಮ್ಮದಿರಲಿಲ್ಲ ಅಥವಾ ‘ರಾಜಕೀಯ ಮಾರ್ಗದಿಂದ ಆಡಳಿತವನ್ನು ಸ್ಥಾಪಿಸಿ ಹಿಂದೂ ರಾಷ್ಟ್ರ ಬರಲಿದೆ’ ಎಂದು ನಾವು ಯಾವತ್ತೂ ಹೇಳಿಲ್ಲ. ಹಿಂದೂ ರಾಷ್ಟ್ರವು ಹಿಂದೂ ರಾಷ್ಟ್ರಕ್ಕಾಗಿ ತನು, ಮನ ಮತ್ತು ಧನ ಅರ್ಪಿಸಿ ನಿರಪೇಕ್ಷವಾಗಿ ಕಾರ್ಯ ಮಾಡುವವರ ಸಂಘಟನೆಯಿಂದ ಸಾಕಾರವಾಗಲಿದೆ. ಇಂದು ಭಾರತದಲ್ಲಿ ೧೦೦ ಕೋಟಿ ಹಿಂದೂಗಳು ಹಿಂದೂ ರಾಷ್ಟ್ರದ ಬೇಡಿಕೆಯನ್ನಿಟ್ಟರೆ ಅದನ್ನು ಯಾರೂ ತಡೆಯಲಾರರು. ಹಿಂದೂಗಳಿಗೆ ತಾವು ಬಹುಸಂಖ್ಯಾತರಾಗಿರುವುದರ ರಾಜಕೀಯ ಅರಿವು ಮೂಡಿದರೆ ಮತ್ತು ರಾಜಕಾರಣಿಗಳು ಜಾತಿ-ಜಾತಿಗಳಲ್ಲಿ ಉಂಟುಮಾಡಿರುವ ಬಿರುಕು ದೂರವಾದಲ್ಲಿ ಹಿಂದೂ ರಾಷ್ಟ್ರ ಬರಲು ತಡವಿಲ್ಲ
3. ಹಿಂದೂ ರಾಷ್ಟ್ರ ಸ್ಥಾಪನೆಯ ವಿಷಯದಲ್ಲಿ ಜಾಗೃತಿ ಮತ್ತು ಸಂಘಟನೆಗಾಗಿ ಹಿಂದೂ ರಾಷ್ಟ್ರ ಅಧಿವೇಶನ !
೨೦೪೭ ರೊಳಗೆ ಭಾರತವನ್ನು ಇಸ್ಲಾಮೀ ರಾಷ್ಟ್ರವನ್ನಾಗಿಸಲು ದೊಡ್ಡ ಷಡ್ಯಂತ್ರವನ್ನು ‘ಐ.ಎಸ್.ಐ. ಮತ್ತು ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವು ರಚಿಸಿದೆ ಎಂದು ರಾಷ್ಟ್ರೀಯ ತನಿಖಾ ದಳವು ಬಹಿರಂಗಪಡಿಸಿದೆ. ಇಂತಹ ಸಮಯದಲ್ಲಿ ಸ್ವಯಂಭೂ ಹಿಂದೂ ಭೂಮಿಯಾಗಿರುವ ಭಾರತಕ್ಕೆ ತನ್ನ ಸ್ವಂತದ ಗುರುತನ್ನು ಮತ್ತೊಮ್ಮೆ ದೊರಕಿಸಿ ಕೊಡುವುದು ಅಂದರೆ ಹಿಂದೂ ರಾಷ್ಟ್ರವನ್ನು ಸ್ಥಾಪಿಸುವುದು ಅನಿವಾರ್ಯವಾಗಿದೆ. ಇದಕ್ಕಾಗಿ ಹಿಂದೂ ಜನಜಾಗೃತಿ ಸಮಿತಿಯು ಆಯೋಜಿಸಿರುವ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದ ಮೂಲಕ ದೇಶದಾದ್ಯಂತದ ಹಿಂದುತ್ವನಿಷ್ಠ ಸಂಘಟನೆಗಳು ಸಂಘಟಿತವಾಗಿ ಹಿಂದೂಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಜಾಗೃತಿ ಮೂಡಿಸುತ್ತಿವೆ. ಹಿಂದೂ ರಾಷ್ಟ್ರವು ಧರ್ಮಾಧಿಷ್ಠಿತವಾಗಿರಲಿದೆ. ಅಂದರೆ ಅದಕ್ಕೆ ಧರ್ಮದ ಅಧಿಷ್ಠಾನ ಇರಲಿದೆ.
ಈ ಸಲ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದ ಅಂದರೆ ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದ 12 ನೇ ವರ್ಷವಾಗಿದೆ. ಈ ಅಧಿವೇಶನವು 24 ರಿಂದ 30 ಜೂನ್ 2024 ಈ ಕಾಲಾವಧಿಯಲ್ಲಿ ಫೊಂಡಾ, ಗೋವಾದಲ್ಲಿರುವ ಶ್ರೀ ರಾಮನಾಥ ದೇವಸ್ಥಾನದ ಶ್ರೀ ವಿದ್ಯಾಧಿರಾಜ ಸಭಾಗೃಹದಲ್ಲಿ ಜರುಗಲಿದೆ. ಈ ಅಧಿವೇಶನದಲ್ಲಿ ದೇಶ-ವಿದೇಶಗಳ ೩೫೦ ಹಿಂದುತ್ವನಿಷ್ಠ ಸಂಘಟನೆಗಳ ಒಂದು ಸಾವಿರಕ್ಕಿಂತಲೂ ಹೆಚ್ಚಿನ ಪ್ರತಿನಿಧಿಗಳು, ಸಂತರು, ಧರ್ಮಾಚಾರ್ಯರು, ಹಿಂದುತ್ವನಿಷ್ಠ ನೇತಾರರು, ವಿಚಾರವಂತರು, ಲೇಖಕರು, ಮಾಜಿ ನ್ಯಾಯಮೂರ್ತಿಗಳು, ಹಿರಿಯ ವಕೀಲರು, ಮಾಜಿ ಆಡಳಿತ ಅಧಿಕಾರಿಗಳು, ಪತ್ರಕರ್ತರು ಉಪಸ್ಥಿತರಿರುವರು. ಈ ಅಧಿವೇಶನದಲ್ಲಿ ಹಿಂದೂಗಳ ರಕ್ಷಣೋಪಾಯ, ಹಿಂದೂ ರಾಷ್ಟ್ರಕ್ಕಾಗಿ ಸಾಂವಿಧಾನಿಕ ಪ್ರಯತ್ನ, ಮಂದಿರ ಸಂಸ್ಕೃತಿಯ ರಕ್ಷಣೆಯ ಉಪಾಯ, ಜಾಗತಿಕ ಸ್ತರದಲ್ಲಿ ಹಿಂದುತ್ವದ ರಕ್ಷಣೆ, ದೇಶದ ರಕ್ಷಣೆಗೆ ಸವಾಲನ್ನೊಡ್ಡುವ ಹಲಾಲ್ ಅರ್ಥವ್ಯವಸ್ಥೆಯ ಮೇಲಿನ ಉಪಾಯ, ಮುಂತಾದ ವಿಷಯಗಳ ಬಗ್ಗೆ ಸವಿಸ್ತಾರವಾಗಿ ಚರ್ಚಿಸಿ ಸರ್ವಾನುಮತದಿಂದ ಕೃತಿಯ ದಿಶೆಯನ್ನು ನಿಶ್ಚಯಿಸಲಾಗುವುದು ಮತ್ತು ವರ್ಷವಿಡೀ ಹಿಂದುತ್ವನಿಷ್ಠ ಸಂಘಟನೆಗಳ ಕಾರ್ಯಕರ್ತರು ಆ ದಿಶೆಯಲ್ಲಿ ಪ್ರಯತ್ನಿಸುವರು. ಈ ಅಧಿವೇಶನವನ್ನು ಹಿಂದೂ ಜನಜಾಗೃತಿ ಸಮಿತಿಯ ಯು-ಟ್ಯೂಬ್, ಫೇಸ್‌ಬುಕ್ ಮತ್ತು ಎಕ್ಸ್ ಅಕೌಂಟನಲ್ಲಿ ಹಾಗೂ www.HinduJagruti.org ಈ ಜಾಲತಾಣದಲ್ಲಿ ನೇರ (ಲೈವ್) ಪ್ರಸಾರ ಮಾಡಲಾಗುವುದು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


