ಉಡುಪಿ: ಕಂಪನಿಯ ಅಧಿಕಾರಿಗಳಂತೆ ಸೋಗು ಹಾಕುವ ನಕಲಿ ವಾಟ್ಸಪ್ ಗುಂಪುಗಳನ್ನು ಒಳಗೊಂಡ ವಂಚನೆ ಜಾಲದ ಕಾರ್ಯಾಚರಣೆ ವಿರುದ್ಧ ಗ್ರಾಹಕರು ಎಚ್ಚರ ವಹಿಸಬೇಕು ಎಂದು ಎಚ್‍ಡಿಎಫ್‍ಸಿ ಸೆಕ್ಯುರಿಟೀಸ್ ಲಿಮಿಟೆಡ್ ತನ್ನ ಗ್ರಾಹಕರನ್ನು ಕೋರಿದೆ.
ಎಲ್ಲ ಹೂಡಿಕೆದಾರರು ಇಂಥ ವಂಚನೆ ಜಾಲದ ವಿರುದ್ಧ ತೀವ್ರ ಎಚ್ಚರಿಕೆ ವಹಿಸಬೇಕು ಮತ್ತು ಕಾನೂನು ಬಾಹಿರವಾಗಿ, ಸ್ಟಾಕ್ ಮಾರುಕಟ್ಟೆಯ ಸೂಚಕ, ನಿರ್ದಿಷ್ಟ ಅಥವಾ ಖಾತರಿಪಡಿಸಿದ ಆದಾಯವನ್ನು ಒದಗಿಸುವುದಾಗಿ ನಂಬಿಸುವ ವ್ಯಕ್ತಿಗಳು ಅಥವಾ ಸಂಸ್ಥೆಗಳು ನೀಡುವ ಯಾವುದೇ ಯೋಜನೆ ಅಥವಾ ಉತ್ಪನ್ನಕ್ಕೆ ಚಂದಾದಾರರಾಗಬಾರದು ಎಂದು ಮನವಿ ಮಾಡಿಕೊಂಡಿದೆ.
ಈ ಗುಂಪುಗಳು ಹೆಚ್ಚಿನ ಆದಾಯದ ಭರವಸೆ ನೀಡಿ, ಗ್ರಾಹಕರನ್ನು ವಂಚಿಸುವ ಮೂಲಕ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಳ್ಳುವಂತೆ ಮತ್ತು ಹಣವನ್ನು ವರ್ಗಾಯಿಸುವಂತೆ ಸೂಚಿಸುತ್ತಾರೆ. ಬಳಕೆದಾರ ಐಡಿ ಮತ್ತು ಪಾಸ್‍ವರ್ಡ್‍ನಂತಹ ವ್ಯಾಪಾರದ ರುಜುವಾತುಗಳನ್ನು ತಾನು ಕೇಳುವುದಿಲ್ಲ ಎಂದು ಎಚ್‍ಡಿಎಫ್‍ಸಿ ಸೆಕ್ಯುರಿಟೀಸ್ ಸಿಡಿಓ ಮತ್ತು ಸಿಓಓ ಸಂದೀಪ್ ಭಾರದ್ವಾಜ್ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಎಚ್‍ಡಿಎಫ್‍ಸಿ ಸೆಕ್ಯುರಿಟೀಸ್ ವಾಟ್ಸಪ್ ಅಥವಾ ಯಾವುದೇ ಅನಧಿಕೃತ ಚಾನಲ್‍ಗಳ ಮೂಲಕ ಆಧಾರ್ ಅಥವಾ ಪಾನ್ ಕಾರ್ಡ್ ವಿವರಗಳನ್ನು ಒಳಗೊಂಡಂತೆ ವೈಯಕ್ತಿಕ ಮಾಹಿತಿಯನ್ನು ಕೋರುವುದಿಲ್ಲ. ಇದಲ್ಲದೆ, ಗ್ರಾಹಕರನ್ನು ಯಾವುದೇ ವಾಟ್ಸಪ್ ಗುಂಪುಗಳಿಗೆ ಸೇರಿಸುವುದಿಲ್ಲ ಅಥವಾ ಅಧಿಕೃತ ಪ್ಲಾಟ್‍ಫಾರ್ಮ್ ಹೊರತುಪಡಿಸಿ ಇತರೆಡೆಗೆ ಹಣವನ್ನು ವರ್ಗಾವಣೆ ಮಾಡಲು ವಿನಂತಿಸುವುದಿಲ್ಲ. ಅನುಮಾನಗಳು ಬಂದಲ್ಲಿ ವ್ಯಕ್ತಿಯ ದೃಢೀಕರಣಪತ್ರವನ್ನು ಕೇಳುವಂತೆ ಮತ್ತು ಅಧಿಕೃತ ವಾಹಿನಿಯ ಮೂಲಕವಷ್ಟೇ ವ್ಯವಹಾರ ನಡೆಸುತ್ತೇವೆ ಎಂದು ಖಾತರಿಪಡಿಸಿಕೊಳ್ಳಬೇಕು ಎಂದು ಸ್ಪಷ್ಟಪಡಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ