ನೀಟ್ 2024: ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

Upayuktha
0


ಪುತ್ತೂರು: ವ್ಯೆದ್ಯಕೀಯ ಶಿಕ್ಷಣಕ್ಕಾಗಿ ಕೇಂದ್ರ ಸರಕಾರವು ನಡೆಸಿದ ರಾಷ್ಟ್ರೀಯ ವ್ಯೆದ್ಯಕೀಯ ಪ್ರವೇಶ ಪರೀಕ್ಷೆ- 2024ರ ನೀಟ್‌ ಪ್ರವೇಶ ಪರೀಕ್ಷೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿನಿ ಯುಕ್ತಾ. ವಿ.ಜಿ. 720ಕ್ಕೆ 651 ಅಂಕಗಳೊಂದಿಗೆ ಅಖಿಲ ಭಾರತ ಮಟ್ಟದಲ್ಲಿ 28266ನೇ ರಾಂಕ್‌ ಹಾಗೂ ಕೆಟಗರಿ ವಿಭಾಗದಲ್ಲಿ 604ನೇ ರಾಂಕ್‌ ಗಳಿಸಿದ್ದಾರೆ. ಇವರು ರಾಮಕುಂಜದ ವಿಜಯ ವಿಕ್ರಮ ಜಿ. ಹಾಗೂ ಸುನಿತಾ. ಎಮ್‌.ಕೆ. ದಂಪತಿ ಪುತ್ರಿ. 


ಇಂದುಶ್ರೀ 720ಕ್ಕೆ 563 ಅಂಕಗಳನ್ನು ಗಳಿಸಿರುತ್ತಾರೆ. ಇವರು ಕೆದಿಲದ ಕೆ. ವೆಂಕಟಕೃ಼ಷ್ಣ ಹಾಗೂ ಸುಜಾತ ಇವರ ಪುತ್ರಿ. ವಿನಾಯಕ.ಜೆ 720ಕ್ಕೆ 559 (ಮೈಸೂರಿನ ಜಗದೀಶ .ಎಚ್.ಪಿ ಹಾಗೂ ಮಹೇಶ್ವರಿ ಇವರ ಪುತ್ರ), ಶ್ರೇಯಾ .ಕೆ. ಇವರು 720ಕ್ಕೆ 557 (ಮಂಚಿಯ ಪುಷ್ಪರಾಜ್‌.ಕೆ. ಹಾಗೂ ಶಾರದಾ ದಂಪತಿಗಳ ಪುತ್ರಿ), ರಿಯಾ ರಾಮ್‌  534 (ಪುತ್ತೂರಿನ ರಾಮ .ಕೆ. ಹಾಗೂ ಪ್ರಭಾವತಿ .ಕೆ.  ದಂಪತಿಗಳ ಪುತ್ರಿ) , ಅನುಷ್ಕಾ ರಾವ್‌ ದೇವ 522 (ಸುಳ್ಯ ತಾಲೂಕಿನ ರಾಜಶೇಖರ್‌.ಕೆ. ಹಾಗೂ ವೀಣಾ ರಾವ್‌ ದೇವ ದಂಪತಿಗಳ ಪುತ್ರಿ), ಶಮಂತ್‌ಕುಮಾರ್.ಕೆ. 516 (ಸುಳ್ಯ ತಾಲೂಕಿನ ಚಂದ್ರಶೇಖರ ಉಪಾಧ್ಯಾಯ ಹಾಗೂ ವೀಣಾ.ಕೆ. ಇವರ ಪುತ್ರ), ಹರ್ಷಾ.ಎಸ್. (ಅಡ್ಯನಡ್ಕದ ಶ್ರೀಕೃಷ್ಣ ಭಟ್‌ ಎಸ್‌ ಹಾಗೂ ಜಯಶ್ರೀ ಕೆ.ಆರ್‌ ದಂಪತಿ ಪುತ್ರಿ) 512 ಅಂಕಗಳನ್ನು ಗಳಿಸಿರುತ್ತಾರೆ. 


ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಅಭಿನಂದಿಸಿದ್ದಾರೆ.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top