ಧರ್ಮತ್ತಡ್ಕ: ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಮ್ ಶ್ರೀಸಂಸ್ಥಾನ ಗೋಕರ್ಣ ಶ್ರೀರಾಮಚಂದ್ರಾಪುರ ಮಠದ ಅಂಗಸಂಸ್ಥೆಯಾದ ಪೊಸಡಿಗುಂಪೆಯ ಶ್ರೀ ಶಂಕರ ಧ್ಯಾನ ಮಂದಿರದ ಪರಿಸರದಲ್ಲಿ ಶನಿವಾರ (ಜೂ.8) ವನಜೀವನ ಯಜ್ಞ ಕಾರ್ಯಕ್ರಮ ನಡೆಯಿತು.
ಗುರುವಂದನೆ, ಗೋಸ್ತುತಿಯೊಂದಿಗೆ ಆರಂಭವಾದ ಈ ಕಾರ್ಯಕ್ರಮದಲ್ಲಿ ಮುಳ್ಳೇರಿಯ ಹವ್ಯಕ ಮಂಡಲಾಂತರ್ಗತ ಗುಂಪೆ ವಲಯದ ಕಾರ್ಯದರ್ಶಿ ಕೇಶವಪ್ರಸಾದ ಎಡಕ್ಕಾನ ಪ್ರಾಸ್ತಾವಿಕ ನುಡಿಗಳ ಮೂಲಕ ಸ್ವಾಗತ ಕೋರಿದರು. ನಿರ್ಮಲಕುಮಾರಿ ಚೆಕ್ಕೆ ಗಿಡ ನೆಡುವ ಮೂಲಕ ವನಜೀವನ ಯಜ್ಞಕ್ಕೆ ಚಾಲನೆ ನೀಡಿದರು.
ಸಂಘಟನಾ ಕಾರ್ಯದರ್ಶಿ ವೆಂಕಟಕೃಷ್ಣ ಚೆಕ್ಕೆಮನೆ, ಚಂದ್ರಶೇಖರ ಭಟ್ ನೆರಿಯ, ರವಿಶಂಕರ ಬಾಯಾಡಿ, ಸಾರ್ಥಕ ಚೆಕ್ಕೆ, ಶ್ರೀರಾಮ ಶರ್ಮ ಎಡಕ್ಕಾನ, ಶ್ರೀಸುಧಾಮ ಶರ್ಮ ಎಡಕ್ಕಾನ ಸಹಿತ ವಲಯದ ಶಿಷ್ಯಬಂಧುಗಳು ಹಾಗೂ ಇತರ ಸಮಾಜದವರಾದ ತ್ಯಾಂಪ ಗೌಡ, ಪ್ರಶಾಂತ ಗೌಡ ಕಾಲ್ಚಂಡ್ರಿ ಭಾಗವಹಿಸಿ ಪೊಸಡಿಗುಂಪೆಯ ಶಂಕರಧ್ಯಾನ ಮಂದಿರದ ಪರಿಸರದಲ್ಲಿ ವಿವಿಧ ತಳಿಗಳ ಗಿಡಗಳನ್ನು ನೆಟ್ಟು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದರು.
ಹವ್ಯಕ ಮಹಾಮಂಡಲ ಶ್ರೀಶಂಕರ ಧ್ಯಾನ ಮಂದಿರ ಸಮಿತಿಯ ವತಿಯಿಂದ ಪೊಸಡಿಗುಂಪೆಯ ಶ್ರೀಶಂಕರ ಧ್ಯಾನ ಮಂದಿರದ ಪರಿಸರದಲ್ಲಿ ನೆಡಲು ವೈವಿಧ್ಯಮಯ ತಳಿಯ ಗಿಡಗಳನ್ನು ಉಪ್ಪಿನಂಗಡಿ ಮಂಡಲ ಉಜಿರೆ ವಲಯದ ಕಾರ್ಯದರ್ಶಿ ಹಾಗೂ ನಡ ಘಟಕದ ಗುರಿಕ್ಕಾರರಾದ ಬೈಪದವು ರಾಮಕೃಷ್ಣ ಭಟ್ ಕುಕ್ಕಿನಕಟ್ಟೆ ಇವರು ಸೇವಾರೂಪದಲ್ಲಿ ಒದಗಿಸಿದ್ದಾರೆ.
ಬೈಪದವು ರಾಮಕೃಷ್ಣ ಭಟ್ ಕುಕ್ಕಿನಕಟ್ಟೆ ಹಾಗೂ ಪುತ್ರಿ ಮಧುಪ್ರೀತಾ ಬೈಪದವು ದಿನಾಂಕ ಶುಕ್ರವಾರ ಶ್ರೀಶಂಕರ (ಜೂ.7) ಧ್ಯಾನ ಮಂದಿರ ಸಮಿತಿ ಜತೆ ಕಾರ್ಯದರ್ಶಿ ಶಂಕರ ರಾವ್ ಕಕ್ವೆ ಇವರ ನಿವಾಸಕ್ಕೆ ಗಿಡಗಳನ್ನು ತಂದೊಪ್ಪಿಸಿದರು.
ಗುಂಪೆ ವಲಯ ಯುವ ಪ್ರಧಾನ ಸಾತ್ವಿಕ್ ನೀರಮೂಲೆ ಮತ್ತು ಗಣೇಶ್ ನೀರಮೂಲೆ ಇವರ ನೇತೃತ್ವದಲ್ಲಿ ಗಿಡಗಳನ್ನು ಪೊಸಡಿಗುಂಪೆಗೆ ತಲುಪಿಸಲಾಗಿತ್ತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ