ನಾಟ್ಯ ಮೋಹನ ನವತ್ಯುತ್ಸವ ನೃತ್ಯ ಸರಣಿ ಮಾಲಿಕೆ 6
ಸೋಮೇಶ್ವರ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೃತ್ಯ ಕಲೆಯನ್ನು ಶ್ರೀಮಂತಗೊಳಿಸಿ ಇಂದು ಸಾಮಾನ್ಯರು ನೃತ್ಯ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಳ್ಳುವಂತೆ ಮಾಡಿ ಅಸಂಖ್ಯಾತ ಶಿಷ್ಯ ವರ್ಗವನ್ನು, ನೃತ್ಯ ಗುರುಗಳನ್ನು ನೃತ್ಯ ಕ್ಷೇತ್ರಕ್ಕೆ ನೀಡಿದ ಮಹಾ ಕಲಾ ತಪಸ್ವಿ ನಾಟ್ಯಾಚಾರ್ಯ ಮೋಹನ್ ಕುಮಾರ್ ರವರು ಎಂದು ನಾಟ್ಯಾಲಯ ಉರ್ವ ಇಲ್ಲಿನ ನಿರ್ದೇಶಕಿ ಕರ್ನಾಟಕ ಕಲಾಶ್ರೀ ಕಮಲ ಭಟ್ ನುಡಿದರು.
ಅವರು ನಾಟ್ಯ ನಿಕೇತನ (ರಿ)ಕೊಲ್ಯ ಸೋಮೇಶ್ವರದ ನಾಟ್ಯ ಸಭಾ ಗೃಹ ಇಲ್ಲಿ ಮೋಹನ ಕುಮಾರ್ ಇವರ 90 ತುಂಬಿದ ಸಂಭ್ರಮ ನಾಟ್ಯ ಮೋಹನ ನವತ್ಯುತ್ಸವ ನೃತ್ಯ ಸರಣಿ 6 ರ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು. ಮೋಹನ ಕುಮಾರ್ ರವರು ಪಂದನಲ್ಲೂರು ಶೈಲಿಯ ಭಾಣಿಯನ್ನು ಕೇರಳದ ಸುಪ್ರಸಿದ್ಧ ರಾಜಮನೆತನದ ಆಸ್ಥಾನ ವಿದ್ವಾಂಸರಾದ ಅಭಿನಯ ಶಿರೋಮಣಿ ದಿ. ರಾಜರತ್ನಂ ಪಿಳ್ಳೈ ಇವರಿಂದ ಶಾಸ್ತ್ರೋಕ್ತವಾಗಿ ಕಲಿತು ಅಷ್ಟೇ ಶ್ರದ್ದೆಯಿಂದ, ಬಡತನದಲ್ಲಿ ಇದ್ದರೂ ಗುರುಕುಲ ಮಾದರಿಯಲ್ಲಿ ಕಲೆಯನ್ನು ವಾಣಿಜ್ಯಕರಣಗೊಳಿಸದೆ ಅಸಂಖ್ಯಾತ ನೃತ್ಯ ಶಿಕ್ಷಕರನ್ನು, ಕಲಾವಿದರನ್ನು ಸಮಾಜಕ್ಕೆ ನೀಡಿರುವರು ಎಂದರು.
ಭರತಾಂಜಲಿಯ ನೃತ್ಯ ಗುರುಗಳಾದ ವಿದ್ವಾನ್ ಶ್ರೀಧರ ಹೊಳ್ಳ ವಿದುಷಿ ಪ್ರತಿಮಾ ಶ್ರೀಧರ್ ನೃತ್ಯ ಕಾರ್ಯಕ್ರಮ ನೀಡಿದರು. ಪ್ರತಿಮಾರವರು ತನ್ನ ಅಮೋಘ ಅಭಿನಯದಿಂದ ವಾಗ್ಗೇಯಕಾರರಾದ ಮೈಸೂರು ವಾಸುದೇವಾಚಾರ್ಯರ ಬ್ರೋಚೆವಾರೆವರುರಾ ಕೃತಿಯು ತುಂಬಿದ ಪ್ರೇಕ್ಷಕರ ಮನತಟ್ಟಿತು. ಉದ್ಘಾಟಿಸಿದ ಗುರುಗಳಾದ ಮೋಹನ್ ಕುಮಾರ್ ರವರು ಪ್ರತಿಮಾರ ನೃತ್ಯಾಭಿನಯವನ್ನು ಪ್ರಖ್ಯಾತ ನೃತ್ಯಗಾರ್ತಿ ಕಮಲಾ ಲಕ್ಷ್ಮಣ್ ರವರಿಗೆ ಹೋಲಿಸಿ ಶುಭ ಹಾರೈಸಿ ಸಂತೋಷದಿಂದ ಇಂದಿನ ಕಾರ್ಯಕ್ರಮವನ್ನು ತನ್ನ ಗುರುಗಳಿಗೆ ಅರ್ಪಣೆ ಎಂದರು.
ಕಾರ್ಯಕ್ರಮ ಸಂಘಟಕಿ ವಿದುಷಿ ರಾಜಶ್ರೀ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ವಾನ್ ಚಂದ್ರಶೇಖರ ನಾವಡ, ನಮೃತ್ ಉಚ್ಚಿಲ್ ಮೊದಲಾದವರು ಉಪಸ್ಥಿತರಿದ್ದರು. ಹಾಡುಗಾರಿಕೆಯಲ್ಲಿ ಮಾಹೆಯ ಸ್ವರಾಗ್ ಮೃದಂಗದಲ್ಲಿ ವಿದ್ವಾನ್ ಸುರೇಶ್ ಬಾಬು, ನಟುವಾಂಗದಲ್ಲಿ ಗುರು ಕಮಲ ಭಟ್ ಸಹಕರಿಸಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ