ನ್ಯಾಯಾಲಯದ ಕಾರ್ಯಕಲಾಪದಲ್ಲಿ ಭಗವಂತನ ಅನುಸಂಧಾನಬೇಕು: ಕೃಷ್ಣಮೂರ್ತಿ ಪಿ

Upayuktha
0

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ 6ನೇ ದಿನದ ಕಲಾಪಗಳು

ಪಣಜಿ:
ಭಗವಂತನು ನಮ್ಮೊಂದಿಗಿದ್ದಾನೆ. ಭಗವಂತನಲ್ಲಿ ಪ್ರಾರ್ಥನೆ ಮಾಡಿಯೇ ಮನೆಯಿಂದ ಹೊರಗೆ ಹೋಗಬೇಕು. ಸಾಧನೆಯನ್ನು ಮಾಡಿದರೆ ಭಗವಂತನು ನಿರಂತರವಾಗಿ ನಮ್ಮೊಂದಿಗೆ ಇದ್ದಾನೆ ಎನ್ನುವ ಅನುಭೂತಿ ನಮಗೆ ಬರುತ್ತದೆ. 'ಸಾಧಕ ನ್ಯಾಯವಾದಿ', 'ಹಿಂದೂ ನ್ಯಾಯವಾದಿ'  ಆಗಿ ನಮಗೆ ನ್ಯಾಯಾಲಯದ ಹೋರಾಟ ನಡೆಸಬೇಕಾಗಿದೆ ಎಂದು ವಿಶ್ವ ಹಿಂದೂ ಪರಿಷತ್ತಿನ ಕೊಡಗು ಜಿಲ್ಲಾಧ್ಯಕ್ಷರಾದ ನ್ಯಾಯವಾದಿ ಕೃಷ್ಣಮೂರ್ತಿ ಪಿ. ಇವರು ಹೇಳಿದರು.

ಅವರು 'ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದ ಆರನೇ ದಿನದಂದು 'ಹಿಂದೂ ರಾಷ್ಟ್ರದ ಕಾರ್ಯದಲ್ಲಿ ನ್ಯಾಯವಾದಿಗಳ ಕೊಡುಗೆ' ಈ ವಿಷಯದ ಮೇಲೆ ಮಾತನಾಡುತ್ತಿದ್ದರು. 

"ಒಂದು ಮೊಕದ್ದಮೆಯ ವಿಚಾರಣೆಯ ಬಳಿಕ ನಾನು ಮತ್ತು ನನ್ನ ಸಹೋದ್ಯೋಗಿ ಬೆಂಗಳೂರಿಗೆ ಬರುತ್ತಿರುವಾಗ ನಮ್ಮ ವಾಹನಕ್ಕೆ ಹಿಂದಿನಿಂದ ಟ್ರಕ್ ಬಂದು ಡಿಕ್ಕಿ ಹೊಡೆಯಿತು. ಅದರಲ್ಲಿ ನಮ್ಮ ವಾಹನದ ಎಡಗಡೆಯ ಭಾಗ ಬೇರ್ಪಟ್ಟಿತು. ಈ ಅಪಘಾತ ಎಷ್ಟು ದೊಡ್ಡದಾಗಿತ್ತೆಂದರೆ ವಾಹನವನ್ನು ನೋಡಿದಾಗ 'ಅದರೊಳಗಿದ್ದವರು ಬದುಕಿದ್ದಾರೆ' ಎಂದು ಅನಿಸುತ್ತಿರಲಿಲ್ಲ; ಆದರೆ ಭಗವಾನ್‌ ಶ್ರೀಕೃಷ್ಣನ ಕೃಪೆಯಿಂದ ನಾನು ಮತ್ತು ನನ್ನ ಸಹೋದ್ಯೋಗಿ ಸುರಕ್ಷಿತವಾಗಿದ್ದೆವು. ಈ ರೀತಿ ಗುರುದೇವರು ಪ್ರತಿಯೊಬ್ಬ ಸಾಧಕನ ಕಾಳಜಿ ವಹಿಸುತ್ತಾರೆ. ಆದುದರಿಂದ ನಾವು ನಿರಂತರವಾಗಿ ಭಗವಂತನ ಅನುಸಂಧಾನದಲ್ಲಿರಬೇಕು" ಎಂದರು.

ಈ ಗೋಷ್ಠಿಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು (ಡಾ.) ಚಾರುದತ್ತ ಪಿಂಗಳೆ, ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ವಿನೀತ್ ಜಿಂದಾಲ್ ಮತ್ತು ಸೋಹನ ಲಾಲ ಆರ್ಯ ಉಪಸ್ಥಿತರಿದ್ದರು.


ರಾಷ್ಟ್ರವನ್ನು ಧ್ವಂಸಗೊಳಿಸಲು ಯತ್ನಿಸುತ್ತಿರುವ ಶಕ್ತಿಗಳ ವಿರುದ್ಧ ಗಮನಹರಿಸಿ: ವಿನೋದ ಕುಮಾರ

'ಭಾರತವನ್ನು ನಾಶಮಾಡುವುದೇ ಕಾಂಗ್ರೆಸ್‌ನ ಕಾರ್ಯವಾಗಿದೆ. ವಿಶ್ವ ಮಟ್ಟದಲ್ಲಿ ಭಾರತವನ್ನು ಕುಗ್ಗಿಸುವುದು ಅವರ ಯೋಜನೆಯಾಗಿದೆ. ಅವರು ಸುಳ್ಳು ನರೇಟಿವ್ ಗಳನ್ನು ಸಿದ್ಧಪಡಿಸಿ, ಭಾರತವನ್ನು ವಿಭಜಿಸುವ ಬಗ್ಗೆ ಮಾತನಾತ್ತಿದ್ದಾರೆ. ಇದಕ್ಕಾಗಿ ಅವರು ಸಾಮಾಜಿಕ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದಾರೆ. ರಾಷ್ಟ್ರವನ್ನು ನಾಶಮಾಡಲು ಯತ್ನಿಸುತ್ತಿರುವ ಈ ಶಕ್ತಿಗಳ ವಿರುದ್ಧ ಗಮನಹರಿಸುವುದು ಅಗತ್ಯವಾಗಿದೆ' ಎಂದು ‘ಸ್ಟ್ರಿಂಗ್ ರಿವಿಲ್ಸ್’ನ ಸಂಪಾದಕ ವಿನೋದ್‌ ಕುಮಾರ್ ಅವರು ಹೇಳಿ‍ದರು. 

ಭಾರತ ಸರಕಾರವು ‘ಸಿಎಎ’, ‘ಎನ್ಆರ್‍‌ಸಿ’ ಮತ್ತು ‘ಅಗ್ನಿಪಥ’ ಯೋಜನೆಗಳನ್ನು ಜಾರಿಗೊಳಿಸಿದಾಗ, ಇವರು ದೇಶದಲ್ಲಿ ಅರಾಜಕತೆಯ ವಾತಾವರಣವನ್ನು ಸೃಷ್ಟಿಸಿದರು. ಭಾರತದಲ್ಲಿ ಅರಾಜಕತೆಯನ್ನು ಸೃಷ್ಟಿಸುವುದು ಅಂತಾರಾಷ್ಟ್ರೀಯ ಷಡ್ಯಂತ್ರದ ಒಂದು ಭಾಗವಾಗಿದೆ. ರಾಷ್ಟ್ರವಿರೋಧಿ ಶಕ್ತಿಗಳು ದೇಶದ ನೀತಿಯ ವಿರುದ್ಧ ರಸ್ತೆಗಳಲ್ಲಿ ಇಳಿದು ಅರಾಜಕತೆ ಮೂಡಿಸುತ್ತಿವೆ. ಈ ಶಕ್ತಿಗಳ ವಿರುದ್ಧ ಸಿಡಿದೇಳಲು ರಾಷ್ಟ್ರನಿಷ್ಠ ಜನರು ಕಡಿಮೆ ಬೀಳುತ್ತಿದ್ದಾರೆ. ಜಾರ್ಜ್ ಸೊರೋಸ್‌ ಮುಂತಾದವರು ಸುಳ್ಳು ಕಟ್ಟುಕಥೆಗಳನ್ನು ಸೃಷ್ಟಿಸಿ ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರಿದ್ದಾರೆ. ಹಿಂದೂಗಳು ತಮ್ಮ ಧ್ವನಿಯೆತ್ತಲು ಪ್ರಯತ್ನಿಸಬೇಕು. ಇದಕ್ಕಾಗಿ ಸಾಮಾಜಿಕ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಬೇಕು' ಎಂದು ಕರೆ ನೀಡಿದರು.

ಸಮಾಜ ಮತ್ತು ಧರ್ಮ ರಕ್ಷಣೆಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಬಳಕೆ: ಅಮೃತೇಶ್ ಎನ್.ಪಿ. 

ದಸರಾ, ದೀಪಾವಳಿ, ಗಣೇಶೋತ್ಸವ ಹೀಗೆ ಹಲವು ಉತ್ಸವಗಳಲ್ಲಿ ಅನೇಕ ದುರಾಚಾರಗಳು ನಡೆಯುತ್ತವೆ. ಈ ಕಾರ್ಯಕ್ರಮಗಳಲ್ಲಿ ‘ಡಿಜೆ ಸಿಸ್ಟಮ್’ (ದೊಡ್ಡ ಧ್ವನಿ ವ್ಯವಸ್ಥೆಗಳು) ಮತ್ತು ‘ಎಲ್‌ಇಡಿ ಲೈಟ್ಸ್’ (ಬೆಳಕಿನ ವ್ಯವಸ್ಥೆಗಳು) ಮಿತಿ ಇಲ್ಲದೇ ಉಪಯೋಗಿಸಲಾಗುತ್ತದೆ. ಕಳೆದ 10 ರಿಂದ 12 ವರ್ಷಗಳಲ್ಲಿ, ಡಿಜೆ ವ್ಯವಸ್ಥೆಗಳು ಮತ್ತು ಎಲ್ಇಡಿ ದೀಪಗಳು ಅಗಾಧವಾಗಿ ಬೆಳೆದಿವೆ. ಇದರ ದುಷ್ಪರಿಣಾಮವನ್ನು ವೃದ್ಧರು, ಗರ್ಭಿಣಿಯರು ಹಾಗೂ ರೋಗಿಗಳಿಗೆ ಅನುಭವಿಸಬೇಕಾಗುತ್ತದೆ. ಹಲವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಎಲ್‌ಇಡಿ ದೀಪಗಳಿಂದಾಗಿ ಅನೇಕರಿಗೆ ಕಣ್ಣಿನ ಸಮಸ್ಯೆ ನಿರ್ಮಾಣವಾಗಿದೆ. ಈ ಎಲ್ಲಾ ದುಷ್ಕೃತ್ಯಗಳ ವಿರುದ್ಧ ಮತ್ತು ಶಬ್ದ ಮಾಲಿನ್ಯದ ವಿರುದ್ಧ ನಾವು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಿದ್ದೇವೆ. ಇದನ್ನು ಗಮನಿಸಿದ ನ್ಯಾಯಾಲಯವು ಈ ದುರಾಚಾರವನ್ನು ನಿಲ್ಲಿಸುವಂತೆ ಆಡಳಿತಕ್ಕೆ ಆದೇಶಿಸಿತು ಎಂದು ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಉಪಾಧ್ಯಕ್ಷ ನ್ಯಾಯವಾದಿ ಅಮೃತೇಶ್ ಎನ್.ಪಿ. ಹೇಳಿದರು.

ಸಮಾಜ ಮತ್ತು ಧರ್ಮಕ್ಕೆ ಆಗುವ ಹಾನಿಯನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದೇವೆ. ‘ಆಪರೇಷನ್ ಡಿಜೆ’ ಶೀರ್ಷಿಕೆಯಡಿ ಈ ಅಭಿಯಾನ ನಡೆಸಿದ್ದೇವೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಮೂಲಕ ನಾವು ಸಮಾಜ ಮತ್ತು ಧರ್ಮವನ್ನು ರಕ್ಷಿಸಲು ಸಾಕಷ್ಟು ಕೆಲಸ ಮಾಡಬಹುದು. ಗುರುಗಳ ಆಶೀರ್ವಾದದಿಂದ ಈ ಕಾರ್ಯ ಯಶಸ್ವಿಯಾಗುತ್ತಿದೆ. ಸಮಾಜ ಮತ್ತು ರಾಷ್ಟ್ರದ ಹಿತಕ್ಕಾಗಿ ನಾವು ಈ ಕೆಲಸವನ್ನು ಧೈರ್ಯದಿಂದ ಮಾಡಬೇಕು. ಇದಕ್ಕಾಗಿ ಸ್ವಾತಂತ್ರ್ಯ ವೀರ ಸಾವರ್ಕರ್ ಅವರ ಆದರ್ಶವನ್ನು ನಮ್ಮ ಮುಂದೆ ಇಡಬೇಕು. ಸ್ವಾತಂತ್ರ್ಯವೀರ ಸಾವರ್ಕರ್ ಅವರು ವಕೀಲರ ಶಿರೋಮಣಿಯೂ ಹೌದು ಎಂದು ಅವರು ತಿಳಿಸಿದರು.


ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಆರನೇ ದಿನದಂದು ‘ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಮೂಲಕ ಸಮಾಜ ಮತ್ತು ರಾಷ್ಟ್ರವನ್ನು ಹೇಗೆ ರಕ್ಷಿಸುವುದು?’ ಎಂಬ ವಿಷಯದ ಕುರಿತು ಮಾತನಾಡುತ್ತಿದ್ದರು.

ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಮೂಲಕ ಬೆಂಗಳೂರು, ಮುಂಬಯಿನಂತಹ ದೊಡ್ಡ ನಗರಗಳಲ್ಲಿ ರಸ್ತೆ ಬದಿ ಹಾಕಿರುವ ಎಲ್‌ಇಡಿ ಹೋರ್ಡಿಂಗ್ ಗಳ ವಿರುದ್ಧವೂ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಮೂಲಕ ನ್ಯಾಯಾಲಯದ ಹೋರಾಟವನ್ನೂ ಆರಂಭಿಸಿದ್ದೇವೆ. ಗುರುಗಳ ಆಶೀರ್ವಾದದಿಂದ ಸಮಾಜ ಮತ್ತು ಧರ್ಮಕ್ಕಾಗಿ ಕಾರ್ಯ ಮಾಡಲು ಪ್ರೇರಣೆ ದೊರೆಯುತ್ತಿದೆ' ಎಂದು ಹೇಳಿದರು.

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top