2023 ರ ಚುನಾವಣಾ ಸಂದರ್ಭದಲ್ಲಿ ಹುಟ್ಟಿಕೊಂಡ ಕಾಂಗ್ರೆಸ್‌ನ ಐದು ಗ್ಯಾರಂಟಿಗಳು ಇನ್ನಷ್ಟು ಕಾಲ ಮುಂದುವರಿಸಲು ಸಾಧ್ಯ ಅನ್ನುವುದು ಪ್ರತಿಯೊಬ್ಬರನ್ನು ಕಾಡುವ ಪ್ರಶ್ನೆ. ಹಾಗಂತ ಇದ್ದಗಿದ್ದ ಹಾಗೆ ಗ್ಯಾರಂಟಿಯನ್ನು ನಿಲ್ಲಿಸುವುದು ಕೂಡಾ ಆಡಳಿತ ಪಕ್ಷಕ್ಕೆ ಮುಜುಗುರದ ಪ್ರಶ್ನೆ. ಅದೇ ರೀತಿಯಲ್ಲಿ ಮುಂದುವರಿಸುವುದು ಕೂಡಾ ಕಷ್ಟ ಸಾಧ್ಯದ ಪರಿಸ್ಥಿತಿ.
ಬಹುಮುಖ್ಯವಾಗಿ ಈ ಗ್ಯಾರಂಟಿ ಅನ್ನುವ ಪದ ಹುಟ್ಟಿ ಕೊಳ್ಳಲು ಮುಖ್ಯ ಕಾರಣವೆಂದರೆ, ರಾಜ್ಯದ ಮತದಾರರ ಹೃದಯದಲ್ಲಿ ಗಟ್ಟಿಯಾಗಿ ಬೇರೂರಿರುವ ಭಾವನಾತ್ಮಕ ವಿಚಾರಗಳನ್ನು ಹೇಗೆ ಸದ್ಯಕ್ಕೆ ಪಲ್ಲಟಗೊಳಿಸಬಹುದೆಂಬ ಕಾರಣವು ಹೌದು. ಆದರೆ ಗ್ಯಾರಂಟಿ ಅನ್ನುವ ಪ್ರಣಾಳಿಕೆಯ ಘೇೂಷಣೆ ರಾಜ್ಯ ರಾಷ್ಟ್ರ ರಾಜಕೀಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿರುವುದಂತೂ ಸತ್ಯ. ಆದರೆ ಇದೇ ಗ್ಯಾರಂಟಿ ಲೇೂಕ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿರೀಕ್ಷೆ ಮಾಡಿದಷ್ಟು ಫಲ ನೀಡಿಲ್ಲ ಅನ್ನುವುದು ನಿಜ. ಅದಕ್ಕೆ ಬೇರೆ ಬೇರೆ ಕಾರಣಗಳಿರಬಹುದು.
ಸದ್ಯದ ಪರಿಸ್ಥಿತಿಯಲ್ಲಿ ಈ ಗ್ಯಾರಂಟಿಗಳಿಗೆ ಅನುದಾನ ಪೂರೈಸುವುದು ಸುಲಭವಾದ ಮಾತಲ್ಲ. ಅನ್ನುವುದು ಇತ್ತೀಚೆಗೆ ಸರ್ಕಾರ ತೆಗೆದುಕೊಂಡ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯೇ ಸಾಬೀತುಪಡಿಸುತ್ತದೆ. ಮಾತ್ರವಲ್ಲ ಕಾಂಗ್ರೆಸ್ ಪಕ್ಷದ ಶಾಸಕರುಗಳ ಬಾಯಿಯಿಂದಲೇ ಈ ಗ್ಯಾರಂಟಿಯ ಬಗ್ಗೆಯೂ ಅಪಸ್ವರ ಕೇಳಿ ಬಂದಿದೆ. ಅಂದರೆ ಅವರವರ ಕ್ಷೇತ್ರಗಳ ಅಭಿವೃದ್ಧಿ ಕೆಲಸಕ್ಕೆ ಅನುದಾನ ಬರುತ್ತಿಲ್ಲ ಅನ್ನುವ ಕೊರಗು ಅವರಲ್ಲಿ ಇದೆ. ಅಭಿವೃದ್ಧಿ ಕೆಲಸಗಳಾದರೆ ಮಾತ್ರ ಶಾಸಕರುಗಳ ಅಭಿವೃದ್ಧಿಗೂ ಒಂದು ದಾರಿ ಅಲ್ವಾ? ಹಾಗಾಗಿ ಸ್ವಾಮಿ ಕಾರ್ಯವೇ ಸ್ವ ಕಾರ್ಯ ಅನ್ನುವುದು. ಮುಂದಿನ ಸ್ಥಳೀಯ ಚುನಾವಣಾ ಸಂದರ್ಭದಲ್ಲಿ ಅಭಿವೃದ್ಧಿ ಕಾರ್ಯ ತೇೂರಿಸಲೇ ಬೇಕಾದ ಅನಿವಾರ್ಯತೆ ಕಾಂಗ್ರೆಸ್ ಪಕ್ಷಕ್ಕೆ ಇದೆ. ಹಾಗಂತ ಈ ಗ್ಯಾರಂಟಿ ಪ್ರಯೇೂಗ ಸ್ಥಳೀಯ ಚುನಾವಣೆಯಲ್ಲಿ ಯಾವ ರೀತಿಯಲ್ಲಿ ತಮಗೆ ಫಲ ನೀಡ ಬಹುದೆಂಬ ನಿರೀಕ್ಷೆಯಲ್ಲಿ ಕಾಂಗ್ರೆಸ್ ಪಕ್ಷ ಕಾದು ಕುಳಿತಿರಲು ಬಹುದು?
ಒಂದು ವೇಳೆ ಸ್ಥಳೀಯ ಚುನಾವಣೆಯಲ್ಲಿ ಗ್ಯಾರಂಟಿ ಬಹು ನಿರೀಕ್ಷಿತ ಫಲ ನೀಡದೇ ಹೇೂದರೆ ಈ ಗ್ಯಾರಂಟಿಯನ್ನು ಯಾವ ರೀತಿಯಲ್ಲಿ ಮುಗಿಸ ಬಹುದೆಂಬ ಗಾಢವಾದ ಚಿಂತನೆಯಲ್ಲಿ ಕಾಂಗ್ರೆಸ್ ಪಕ್ಷ ನಿಂತಿರಬಹುದು.
ಹಾಗಾದರೆ ಈ ಗ್ಯಾರಂಟಿ ಪಯಾ೯ಯವಾಗಿ ಆಡಳಿತ ರೂಢ ಕಾಂಗ್ರೆಸ್ ತರಬಹುದಾದ ಬಹು ಉಪಯೇೂಗಿ ಜನಮಾನಸದಲ್ಲಿ ಶಾಶ್ವತವಾಗಿ ನಿಲ್ಲ ಬಲ್ಲ ಮತ್ತು ಎಲ್ಲಾ ವರ್ಗದ ಕ್ರಾಂತಿಕಾರಿ ಹೆಜ್ಜೆಗಳು ಅಂದರೆ ಒಂದು ರಾಜ್ಯ ಎಲ್ಲಾ ಬಡ ಮಧ್ಯಮ ವರ್ಗದ ಜನರ ಕಾಯಿಲೆಗಳಿಗೆ ಸರಕಾರಿ ಆಸ್ಪತ್ರೆಯಿಂದ ಹಿಡಿದು ಖಾಸಗಿ ಆಸ್ಪತ್ರೆಯಲ್ಲಿ ಖರ್ಚುವೆಚ್ಚಗಳನ್ನು ಸರಕಾರವೇ ಭರಿಸಲು ಮುಂದಾಗುವ ಗ್ಯಾರಂಟಿ ಯೇೂಜನೆ ರೂಪಿಸುವುದು. ಇನ್ನೊಂದು ಬಹುಮುಖ್ಯವಾಗಿ ಕಾರ್ಯಗತಗೊಳಿಸಬೇಕಾದ ಗ್ಯಾರಂಟಿ ಯೇೂಜನೆ ಅಂದರೆ ಬಡ ಮಧ್ಯಮ ವಗ೯ದ ಜನರ ಶಿಕ್ಷಣಕ್ಕೆ ಬೇಕಾಗುವ ವೆಚ್ಚಗಳನ್ನು ಸರ್ಕಾರವೇ ಭರಿಸುವುದು. ಅದು ಮೆಡಿಕಲ್ ಇರಬಹುದು, ಇಂಜಿನಿಯರಿಂಗ್ ಇರಬಹುದು. ಇದರ ಸಂಪೂರ್ಣವಾದ ವೆಚ್ಚಗಳನ್ನು ಸರಕಾರವೇ ಭರಿಸುವುದು. ಇದು ನಿಜವಾದ ಅರ್ಥದಲ್ಲಿ ಆರೋಗ್ಯ ಮತ್ತು ಶಿಕ್ಷಣದ ಸವಿಯನ್ನು ಉಂಡ ಫಲಾನುಭವಿಗಳು ಸರ್ಕಾರವನ್ನು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ.
ಯಾಕೆಂದರೆ ತಮ್ಮ ಕಷ್ಟ ಕಾಲದಲ್ಲಿ ಸರ್ಕಾರ ನಮಗೆ ಬದುಕಿಗೆ ಬೇಕಾದ ಶಾಶ್ವತ ಭದ್ರ ಬುನಾದಿ ಹಾಕಿಕೊಟ್ಟಿದೆ ಅನ್ನುವ ಹೃದಯದ ಭಾವನೆ ಮೂಡಿ ಬರಲು ಸಾಧ್ಯ. ಅದೇ ಇಂದಿನ ಗ್ಯಾರಂಟಿ ಯೇೂಜನೆ ಹಾಗಲ್ಲ ಇದರ ಫಲಾನುಭವಿಗಳೇ ಸರ್ಕಾರವನ್ನು ಟೀಕಿಸುವ ಪರಿಸ್ಥಿತಿಯಲ್ಲಿ ಬಂದು ನಿಂತಿದ್ದಾರೆ. ಇಂದಿನ ಪರಿಸ್ಥಿತಿ ಹೇಗಿದೆ ಅಂದರೆ ತಿಂಗಳಿಗೆ 2 ಸಾವಿರ; ಉಚಿತ ಬಸ್ ಪಯಾಣ; ಉಚಿತ ವಿದ್ಯುತ್ ಇದನ್ನು ನಿಭಾಯಿಸುವುದು ಅಷ್ಟೇನೂ ಕಷ್ಟ ಅಲ್ಲ ಅನ್ನುವ ಭಾವನೆ ಸಾಮಾನ್ಯ ಜನರ ಮನಸ್ಸಿನಲ್ಲಿಯೂ ಇದೆ. ಆದರೆ ಅವರ ಬದುಕಿನಲ್ಲಿ ಅತೀ ಹೆಚ್ಚು ಭಾರವಾಗಿರುವುದು ಆಸ್ಪತ್ರೆಯಲ್ಲಿನ ಖರ್ಚು ವೆಚ್ಚಗಳು ಮತ್ತು ತಮ್ಮ ಮಕ್ಕಳಿಗೆ ಅಗತ್ಯವಾಗಿ ಕೊಡಬೇಕಾದ ಶಿಕ್ಷಣ. ಇದು ಇಂದಿನ ಪರಿಸ್ಥಿತಿಯಲ್ಲಿ ಅತೀ ದುಬಾರಿ. ಇದನ್ನು ನಿಜವಾದ ಕಡು ಬಡವರಿಗೆ, ಕೆಳ ಮಧ್ಯಮ ವರ್ಗದವರಿಗೆ ನೀಡುವ ಗ್ಯಾರಂಟಿ ಯೇೂಜನೆಯಾಗಿ ಕಾರ್ಯಗತಗೊಳಿಸಿದರೆ ತಮ್ಮ ಸರ್ಕಾರವನ್ನು ಸರ್ವ ಜಾತಿ ವರ್ಗದವರು ಒಂದಾಗಿ ತಮ್ಮ ಹೃದಯಶೀಲ ಸರ್ಕಾರವನ್ನು ದಿನ ನಿತ್ಯವೂ ನೆನಪಿಸುತ್ತಾರೆ ಅನ್ನುವುದು ಗ್ಯಾರಂಟಿ. ಕಾದು ನೇೂಡೇೂಣ ಸರ್ಕಾರ ಮುಂದೆ ಯಾವ ರೀತಿಯಲ್ಲಿ ಹೆಜ್ಜೆ ಇಡಬಹುದು ಅನ್ನುವುದನ್ನು.
- ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ