ಪತ್ರಕರ್ತ, ಸಾಹಿತಿ ಹರೀಶ್ ಬೋಳಾರ್ ನಿಧನಕ್ಕೆ ತುಳುಕೂಟ ಕುಡ್ಲ ಕಂಬನಿ

Upayuktha
0




ಮಂಗಳೂರು: ನವಭಾರತ ಪತ್ರಿಕೆಯಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ ಹರೀಶ್ ಬೋಳೂರ್ ರವರು ನಂತರ ಮಣಿಪಾಲದಲ್ಲಿ ಉದಯವಾಣಿ ಪತ್ರಿಕೆಯಲ್ಲಿ ಪತ್ರಕರ್ತ, ಸಾಹಿತಿಯಾಗಿ ಬೆಳೆದರು. ವೃತ್ತಿ ಜೀವನದ ಮಧ್ಯೆಯೇ ಉಡುಪಿಯ ತುಳುಕೂಟದಲ್ಲೂ ತುಳುಭಾಷೆಗಾಗಿ ಶ್ರಮಿಸಿದವರು, ಅಂತೆಯೇ ಕುಡ್ಲದ ತುಳುಕೂಟದಲ್ಲೂ ಸೇವೆಸಲ್ಲಿಸಿ ತುಳುಕೂಟವನ್ನು ಬೆಳೆಸುವಲ್ಲಿ ಯೋಗದಾನ ನೀಡಿದ್ದಾರೆ. ಅವರ ನಿಧನಕ್ಕೆ ತುಳೂಕೂಟ ಕುಡ್ಲ ಕಂಬನಿ ಮಿಡಿಯುತ್ತಿದೆ. ಅವರ ಕುಟುಂಬ ಈ ದುಃಖವನ್ನು ಭರಿಸುವಂತಾಗಲಿ ಹಾಗೂ ಆತ್ಮಕ್ಕೆ ಸದ್ಗತಿ ದೊರಕಲಿ ಎಂದು ಕುಡ್ಲ ತುಳುಕೂಟದ ಅಧ್ಯಕ್ಷ ಮರೋಳಿ ಬಿ. ದಾಮೋದರ ನಿಸರ್ಗ ತುಳುಕೂಟದ ಕಛೇರಿಯಲ್ಲಿ ಜರಗಿದ ಹರೀಶ್ ಬೋಳೂರ್ ರವರ ಶ್ರದ್ಧಾಂಜಲಿ ಸಭೆಯಲ್ಲಿ ನುಡಿದರು.


ಪ್ರಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯ, ಪಿ.ಗೋಪಾಲಕೃಷ್ಣ, ಹೇಮಾ ಡಿ. ನಿಸರ್ಗ, ರಮೇಶ್ ಕುಲಾಲ್ ಬಾಯಾರ್, ಭಾಸ್ಕರ ಕುಲಾಲ್ ಬರ್ಕೆ, ವಿಶ್ವನಾಥ ಪೂಜಾರಿ ಸೋಣಳಿಕೆ ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು.


ತುಳುಕೂಟದ ಉಪಾಧ್ಯಕ್ಷ ಕೋಟ್ಯಾನ್ ಮೇಲಿನ ಹಲ್ಲೆಗೆ ಖಂಡನೆ

ನಗರದ ಉದ್ಯಮಿ, ತುಳುಕೂಟದ ಉಪಾಧ್ಯಕ್ಷ ಪೆಲತ್ತಡಿ ಪದ್ಮನಾಭ ಕೋಟ್ಯಾನ್ ಹಾಗೂ ಅವರ ಮನೆಯವರ ಮೇಲೆ ಅಪರಿಚಿತ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದು ಮಾತ್ರವಲ್ಲ ನಗ ನಗದುಗಳನ್ನು ದೋಚಿರುವುದು ಖಂಡನೀಯ. ಓರ್ವ ಉದ್ಯಮಿಯಾಗಿದ್ದರೂ ನಮ್ಮ ಸಂಸ್ಥೆಯ ಪದಾಧಿಕಾರಿಯೂ ಆಗಿರುವ ಕೋಟ್ಯಾನ್ ರ ಕುಟುಂಬಕ್ಕೆ ಆಗಿರುವ ಮಾನಸಿಕ ಆಘಾತಕ್ಕೆ ಪ್ರತಿಯಾಗಿ ಶೀಘ್ರವಾಗಿ ಆ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ಪೊಲೀಸ್ ಕಮಿಷರ್ ರನ್ನು ತುಳುಕೂಟ ಈ ಮೂಲಕ ಒತ್ತಾಯಿಸುತ್ತದೆ ಎಂದು ತುಳುಕೂಟದ ಅಧ್ಯಕ್ಷ ದಾಮೋದರ ನಿಸರ್ಗ ಬಿ. ಹಾಗೂ ಪ್ರಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top