ಮಂಗಳೂರು: ಇ-ಮೇಲ್ ಮೂಲಕ ಗ್ರಾಹಕ ಕಾಳಜಿ ಕಾರ್ಯನಿರ್ವಾಹಕರಿಂದ (ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್) ಯಾವುದೇ ನೆರವನ್ನು ಪಡೆಯದೇ ತನ್ನ ಗ್ರಾಹಕರು ತಕ್ಷಣದಲ್ಲೇ ವಿವಿಧ ಬ್ಯಾಂಕ್ ಸೇವೆಗಳನ್ನು ಲಾಕ್/ಅನ್‍ಲಾಕ್ ಮಾಡಲು ನೆರವಾಗುವ 'ಸ್ಮಾರ್ಟ್‍ಲಾಕ್' ಎಂಬ ವಿಶಿಷ್ಟ ಸುರಕ್ಷತಾ ಕ್ರಮವನ್ನು ಐಸಿಐಸಿಐ ಬ್ಯಾಂಕ್ ಇಂದು ಆರಂಭಿಸಿದೆ.
ಐ-ಮೊಬೈಲ್ ಪೇನಲ್ಲಿ ಲಭ್ಯವಿರುವ ಈ ಸ್ಮಾರ್ಟ್‍ಲಾಕ್ ಗ್ರಾಹಕರಿಗೆ ಇಂಟರ್‍ನೆಟ್ ಬ್ಯಾಂಕಿಂಗ್, ಯುಪಿಐ ವ್ಯವಹಾರ, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‍ಗಳ ಲಭ್ಯತೆಯನ್ನು ಲಾಕ್/ಅನ್‍ಲಾಕ್ ಮಾಡಲು ಅನುವು ಮಾಡಿಕೊಡುತ್ತದೆ. ಈ ಮೂಲಕ ತಮ್ಮ ಖಾತೆಯ ಸುರಕ್ಷತೆಯ ಜವಾಬ್ದಾರಿಯನ್ನು ಗ್ರಾಹಕರು ಸ್ವತಃ ತೆಗೆದುಕೊಳ್ಳಬಹುದಾಗಿದೆ.
ಭಾರತೀಯ ಬ್ಯಾಂಕಿಂಗ್ ವಲಯದಲ್ಲೇ ಪ್ರಪ್ರಥಮವಾದ 'ಸ್ಮಾರ್ಟ್‍ಲಾಕ್', ಸಂಪೂರ್ಣ ಐಮೊಬೈಲ್ ಪೇಯನ್ನು ಲಾಕ್/ಅನ್‍ಲಾಕ್ ಮಾಡಲು ಗ್ರಾಹಕರಿಗೆ ಅವಕಾಶ ಕಲ್ಪಿಸುತ್ತದೆ ಎಂದು ಐಸಿಐಸಿಐ ಬ್ಯಾಂಕ್‍ನ ಡಿಜಿಟಲ್ ಚಾನಲ್ಸ್ ಮತ್ತು ಪಾಲುದಾರಿಕೆಗಳ ವಿಭಾಗದ ಮುಖ್ಯಸ್ಥ ಸಿದ್ದಾರ್ಥ ಮಿಶ್ರಾ ಪ್ರಕಟಣೆಯಲ್ಲಿ ಹೇಳಿದ್ದಾರೆ.ತಮ್ಮ ಖಾತೆಗಳು ಅಥವಾ ಕಾರ್ಡ್‍ಗಳಲ್ಲಿ ಸಂಭಾವ್ಯ ವಂಚನೆಯ ವ್ಯವಹಾರಗಳ ಸಂದರ್ಭಗಳಲ್ಲಿ ಗ್ರಾಹಕರು ಈ ಫೀಚರ್ ಅನ್ನು ಬಳಸಬಹುದಾಗಿದೆ.
ಒಂದು ನಿಗದಿತ ಸಮಯದಲ್ಲಿ ನಿರ್ದಿಷ್ಟ ಬ್ಯಾಂಕಿಂಗ್ ಸೇವೆಯ ಬಳಕೆ ಬೇಡವೆಂದಾದಲ್ಲಿ ಆಗಲೂ ಗ್ರಾಹಕರು ಸಕ್ರಿಯವಾಗಿ ಅದನ್ನು ಪೂರ್ವಭಾವಿಯಾಗಿ ತಡೆಹಿಡಿಯ ಬಹುದಾಗಿದೆ. ಗ್ರಾಹಕರು ಐಮೊಬೈಲ್ ಪೇಗೆ ಲಾಗಿನ್ ಆಗಿ, ಹೋಮ್ ಸ್ಕ್ರೀನ್ ಕೆಳಗಡೆಯ ಬಲ ಮೂಲೆಯಲ್ಲಿರುವ 'ಸ್ಮಾರ್ಟ್‍ಲಾಕ್' ಫೀಚರ್ ಮೇಲೆ ಕ್ಲಿಕ್ ಮಾಡಬೇಕು. ನೀವು ಲಾಕ್/ಅನ್‍ಲಾಕ್ ಮಾಡಲು ಬಯಸುವ ಪ್ರಮುಖ ಬ್ಯಾಂಕಿಂಗ್ ಸೇವೆಗಳ ಮೇಲೆ ಕ್ಲಿಕ್ ಮಾಡಿ ಬಳಿಕ ದೃಢಪಡಿಸಿಕೊಳ್ಳಲು ಸ್ವೈಪ್ ಮಾಡಬಹುದಾಗಿದೆ ಎಂದು ಪ್ರಕಟಣೆ ಹೇಳಿದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


