ಸುಬ್ರಹ್ಮಣ್ಯ: ಹತ್ತಿರದಿಂದ ನಡೆದು ಹೋದ ಯುವಕನೊಬ್ಬನನ್ನು ಕಂಡು ಇದ್ದಕ್ಕಿದ್ದಂತೆ ಕಿರಿಕಿರಿಗೆ ಒಳಗಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆನೆ ಸೊಂಡಿಲಿನಿಂದ ಎಳೆದು ಬೀಳಿಸಿದ ಘಟನೆ ನಡೆದಿದೆ.
ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನು ಸ್ವಾಗತಿಸಲೆಂದು ಸುಬ್ರಹ್ಮಣ್ಯದ ಸವಾರಿ ಮಂಟಪದ ಬಳಿ ದೇವಸ್ಥಾನದ ಆನೆಯನ್ನು ನಿಲ್ಲಿಸಲಾಗಿತ್ತು. ಈ ವೇಳೆ ಒಂದಿಬ್ಬರು ಪೊಲೀಸರು ಆನೆಯ ಜತೆಗೆ ನಿಂತು ಫೋಟೋ ತೆಗೆಸಿಕೊಂಡಿದ್ದರು. ಅದೇ ಹೊತ್ತಿಗೆ ಯುವಕನೊಬ್ಬ ಅಲ್ಲೇ ಸಮೀಪದಲ್ಲಿ ನಡೆದು ಬಂದಿದ್ದಾನೆ. ಈತ ದೇವಸ್ಥಾನದ ರೂಂ ಬಾಯ್.
ಅತ ಹತ್ತಿರ ಬರುತ್ತಿದ್ದಂತೆ ಆನೆ ಆತನನ್ನು ಸೊಂಡಿಲಿನಿಂದ ಎಳೆದು ಸ್ವಲ್ಪ ದೂರಕ್ಕೆ ತಳ್ಳಿ ಹಾಕಿದೆ. ಈತ ಮದ್ಯಪಾನ ಮಾಡಿಕೊಂಡು ಬಂದಿದ್ದ ಎನ್ನಲಾಗುತ್ತಿದೆ. ಸುಬ್ರಹ್ಮಣ್ಯದ ಈ ಆನೆ ಮದ್ಯಪಾನಿಗಳನ್ನು ಕಂಡರೆ ಕೆರಳುತ್ತದೆ. ಈ ಹಿಂದೆಯೂ ಮದ್ಯಪಾನ ಮಾಡಿಕೊಂಡು ಹತ್ತಿರ ಬಂದವರನ್ನು ಓಡಿಸಿದ ಘಟನೆಗಳು ನಡೆದಿವೆ.
ಅದೃಷ್ಟವಶಾತ್ ಯುವಕನಿಗೆ ತರಚು ಗಾಯ ಬಿಟ್ಟರೆ ಬೇರೇನೂ ಹಾನಿ ಆಗಿಲ್ಲ ಎಂದು ಮೂಲಗಳು ತಿಳಿಸಿವೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

