ಬೈಕಂಪಾಡಿ: ಬೈಕಂಪಾಡಿ ಮೀನಕಳಿಯ ಪ್ರದೇಶದಲ್ಲಿ ಕಡಲ ಕೊರೆತ ಉಂಟಾಗುವ ಲಕ್ಷಣ ತಲೆತೋರಿದ್ದು ಈ ನೆಲೆಯಲ್ಲಿ ಶಾಸಕರಾದ ಡಾ. ಭರತ್ ಶೆಟ್ಟಿ ವೈ ಅವರು ಎಂ.ಆರ್‌ಪಿಎಲ್ ಸಂಸ್ಥೆಗೆ ಕರೆ ಮಾಡಿ ಬೃಹತ್ ಗೋಣಿಚೀಲ ಒದಗಿಸುವಂತೆ ಸೂಚಿಸಿದರಲ್ಲದೆ, ಈ ಮೂಲಕ ಮರಳನ್ನು ತುಂಬಿಸಿ ತಾತ್ಕಾಲಿಕವಾಗಿ ತಡೆಗೋಡೆಯಂತೆ ಮೀನಕಳಿಯ ಪ್ರದೇಶದಲ್ಲಿ ಇಡಲಾಯಿತು.
ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಶಾಸಕರು ಕಾಮಗಾರಿ ಪರಿಶೀಲನೆ ನಡೆಸಿದರು. ಮಂಗಳೂರು ಮಹಾನಗರ ಪಾಲಿಕೆಯ ಉಪಮೇಯರ್ ಸುನಿತಾ, ಪಾಲಿಕೆ ಸದಸ್ಯರಾದ ಸುಮಿತ್ರಾ ಕರಿಯ ಬಿಜೆಪಿ ಪ್ರಮುಖರಾದ ಅರವಿಂದ್ ಬೆಂಗ್ರೆ, ರಾಜೇಶ್ ಬೈಕಂಪಾಡಿ, ಅಶ್ವತ್ ಕಾಂಚನ್ ಮೊದಲಾದವರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


