ಉಡುಪಿ: ದೇಶ ಕಂಡ ಅಪ್ಪಟ ಚಿನ್ನದಂತಹ ಪ್ರಾಮಾಣಿಕ ಮತ್ತು ಸರಳ ರಾಜಕಾರಣಿ, ಸಿಂಪಲ್ ಶ್ರೀನಿವಾಸ ಎಂದೇ ಪ್ರಸಿದ್ಧರಾದ ನೂತನ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರ ವಿರುದ್ಧ ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಭ್ರಷ್ಟಾಚಾರದ ಗಂಭೀರ ಆರೋಪ ಮಾಡಿರುವುದನ್ನು ಸಾಮಾಜಿಕ ಕಾರ್ಯಕರ್ತ ವಾಸುದೇವ ಭಟ್ ಪೆರಂಪಳ್ಳಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೂಜಾರಿಯವರು ಸಮಾಜ ಕಲ್ಯಾಣ ಇಲಾಖೆ ಮಂತ್ರಿಯಾಗಿದ್ದಾಗ ಬೋವಿ ಅಭಿವೃದ್ಧಿ ನಿಗಮದಲ್ಲಿ ಸಚಿವರ ಮೂಗಿನ ನೇರಕ್ಕೇ ಕೋಟ್ಯಂತರ ರೂ ಅವ್ಯವಹಾರ ನಡೆದಿರುವುದಾಗಿಯೂ ಇದರಲ್ಲಿ ಪೂಜಾರಿಯವರಿಗೂ ಪರ್ಸಂಟೇಜ್ ಲೆಕ್ಕದಲ್ಲಿ ಕೋಟ್ಯಂತರ ರೂ ಸಂದಾಯವಾಗಿರುವುದಾಗಿ ಗೂಳಿ ಹಟ್ಟಿ ಶೇಖರ್ ಆರೋಪಿಸಿದ್ದಾರೆ. ಇಂತಹ ಆರೋಪಗಳನ್ನು ಸಹಿಸಲಸಾಧ್ಯ.
ಒಂದು ರೂಪಾಯಿ ಕೂಡಾ ಖರ್ಚು ಮಾಡದೇ ಚುನಾವಣೆ ಗೆಲ್ಲಬಲ್ಲ ರಾಜ್ಯದ ಏಕೈಕ ರಾಜಕಾರಣಿ ಎಂದೇ ಪಕ್ಷಾತೀತವಾಗಿ ಪೂಜಾರಿಯವರು ಪ್ರಶಂಸಿಸಲ್ಪಟ್ಟವರು. ಸಂಚಾರದ ಮಧ್ಯೆ ಚಹಾವನ್ನೂ ರಸ್ತೆಬದಿಯ ತೀರಾ ಸಾಮಾನ್ಯ ಗಾಡಿ ಕ್ಯಾಂಟೀನ್ ನಲ್ಲೇ ಕುಡಿಯುವಷ್ಟು ಸರಳ ವ್ಯಕ್ತಿತ್ವ ಪೂಜಾರಿಯವರದ್ದು. ಈ ಹಿಂದೆ ಪೂಜಾರಿಯವರು ಸಾಲಸೂಲ ಮಾಡಿ ಒಂದು ಸಾಮಾನ್ಯ ಮನೆ ಕಟ್ಟಲು ಹೊರಟಾಗಲೂ ಇದೇ ರೀತಿಯ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಲಾಗಿತ್ತು.
ಉಡುಪಿ ಜಿಲ್ಲೆ ಕಂಡ ಅತ್ಯಂತ ಅದೃಷ್ಟದ ರಾಜಕೀಯ ನೇತಾರ ಶ್ರೀನಿವಾಸ ಪೂಜಾರಿಯವರ ಏಳಿಗೆಯನ್ನು ಸಹಿಸದ ಮಂದಿ ಇಂತಹ ಗಂಭೀರ ಆರೋಪ ಮಾಡಿರೋದು ಸರಿಯಲ್ಲ. ಜಿಲ್ಲಾ ಬಿಜೆಪಿ ಮತ್ತು ಸಮಸ್ತ ಬಿಲ್ಲವ ಸಮಾಜ ಹಾಗೂ ನಾಗರಿಕರು ಪೂಜಾರಿಯವರ ಮೇಲೆ ಆರೋಪ ಮಾಡಿರುವವರ ವಿರುದ್ಧ ಧ್ವನಿ ಎತ್ತಬೇಕು. ಒಂದೋ ಗೂಳಿಹಟ್ಟಿಯವರು ತಮ್ಮ ಆರೋಪಕ್ಕೆ ಸೂಕ್ತ ಸಾಕ್ಷಿ ನೀಡಬೇಕು ಇಲ್ಲವಾದಲ್ಲಿ ಉಡುಪಿಗೆ ಬಂದು ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು ವಾಸುದೇವ ಭಟ್ ಪೆರಂಪಳ್ಳಿ ಆಗ್ರಹಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ