ಮಂಗಳೂರಿನಲ್ಲಿ ಪ್ರಥಮ ಬಾರಿಗೆ ವೇದಿಕೆಯ ಮೇಲೆ ನೈಜ ಗಾತ್ರದ ಆನೆ: ಕಲಾಭಿ ರಂಗೋತ್ಸವ

Upayuktha
0


ಮಂಗಳೂರು: ‘ಕಲಾಭಿ’ ವತಿಯಿಂದ ಮಂಗಳೂರಿನಲ್ಲಿ ಪ್ರಥಮ ಬಾರಿಗೆ ವೇದಿಕೆಯ ಮೇಲೆ ನೈಜ ಗಾತ್ರದ ಆನೆಯನ್ನು ಬರಮಾಡಿಕೊಳ್ಳಲು ತಂಡ ತಯಾರಾಗಿದೆ.


ದಶಕಗಳ ಹಿಂದೆ ಕಂಪನಿ ನಾಟಕಗಳಲ್ಲಿ ಜೀವಂತ ಆನೆ- ಒಂಟೆಗಳು ರಂಗದ ಮೇಲೆ ಬಂದು ರಂಜಿಸುವಷ್ಟು ಕನ್ನಡ ರಂಗಭೂಮಿ ಶ್ರೀಮಂತವಾಗಿತ್ತು, ಈ ಕಾಲಘಟ್ಟದಲ್ಲಿ ಸರಳ ರಂಗತಂತ್ರಗಳ ಮೂಲಕ ಹೆಣೆದ ನಾಟಕಗಳನ್ನು ಕಟ್ಟಲಾಗುತ್ತದೆ. ಆದರೆ ಈಗ ಮಂಗಳೂರಿನ‌ ಕಲಾಭಿ ಸಂಸ್ಥೆ ಗತಕಾಲದ ಕನ್ನಡ ರಂಗಭೂಮಿಯ ವೈಭವವನ್ನು ನೆನಪಿಸುವ ಅಮೋಘ ಪ್ರಯೋಗವನ್ನು ಮಂಗಳೂರಿಗರಿಗೆ ಉಣಬಡಿಸಲಿದೆ.


ಕಲಾಭಿಯ "ಎ ಫ್ರೆಂಡ್ ಬಿಯಾಂಡ್ ದಿ ಫೆನ್ಸ್" ಎಂಬ ಅಭೂತಪೂರ್ವ ನಾಟಕ ಕನ್ನಡ ರಂಗಭೂಮಿಯಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿದೆ. ಜೀವಂತ ಆನೆಯಷ್ಟೇ ಗಾತ್ರದ, ಜೀವಂತ ಆನೆಯಷ್ಟೇ ಜೀವಂತಿಕೆ ಹೊಂದಿರುವ ಆನೆ ಮಂಗಳೂರಿನ ಪುರಭವನದ ವೇದಿಕೆಯಲ್ಲಿ ರಾರಾಜಿಸಲಿದೆ. ಜಪಾನಿನ ಜಾನಪದ ಗೊಂಬೆಯಾಟ ಪ್ರಕಾರವಾದ ಬುನಾರಾಕು ಶೈಲಿಯನ್ನು ಕಲಿತು, ನುರಿತ ಕಲಾವಿದರನ್ನು ಒಳಗೊಂಡು ಕಟ್ಟಿರುವ ಈ ನಾಟಕ ತನ್ನ ಅಮೋಘ ರಂಗತಂತ್ರಗಳು, ಅದ್ಭುತ ಸಂಗೀತ, ಅನೇಕ ವಿಶೇಷ ಬೊಂಬೆಯಾಟದ ತಂತ್ರಗಳು, ವಿಶೇಷ ಬೆಳಕಿನ ವಿನ್ಯಾಸದಿಂದ ಮೊದಲೆರಡು ಪ್ರದರ್ಶನದಲ್ಲಿ ಅಪಾರ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ.


ಅನೇಕ ರಂಗಭೂಮಿ ದಿಗ್ಗಜರನ್ನು ಹುಬ್ಬೇರಿಸುವಂತೆ ಮಾಡಿರುವ ಈ ಅದ್ಧೂರಿ ನಾಟಕ‌ ಮತ್ತೊಮ್ಮೆ ಮಂಗಳೂರಿಗರಿಗೆ ರಸದೌತಣ ನೀಡಲು ಸಜ್ಜಾಗಿದೆ. ಇದೇ ಬರುವ ಜೂನ್ 9ರ ಭಾನುವಾರ ಮಂಗಳೂರಿನ ಪುರಭವನದಲ್ಲಿ ಸಂಜೆ 7 ಗಂಟೆಗೆ ಸರಿಯಾಗಿ ನಾಟಕ ಪ್ರದರ್ಶನ ನಡೆಯಲಿದೆ. ಈ ಅಭೂತಪೂರ್ವ ಪ್ರಯತ್ನಕ್ಕೆ ಕಲಾಭಿಮಾನಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬರುವಂತೆ ತಂಡದ ಮುಖ್ಯಸ್ಥರಾದ ಉಜ್ವಲ್ ಯು.ವಿ ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top