ಎಸ್‌ಸಿಐ ಪುತ್ತೂರು ವತಿಯಿಂದ ನೋಟ್ಸ್ ಪುಸ್ತಕ ಹಾಗೂ ಲೇಖನಿ ವಿತರಣೆ

Upayuktha
0


ಪುತ್ತೂರು: ಸಂಟ್ಯಾರು ಉನ್ನತ ಹಿರಿಯ ಪ್ರಾಥಮಿಕ ಶಾಲೆ ಸಂಟ್ಯಾರು ಇಲ್ಲಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಪುತ್ತೂರು ಲೀಜನ್ ಹಾಗೂ ಸ್ಪಂದನ ಟ್ರಸ್ಟ್ ವತಿಯಿಂದ ಸುಮಾರು ₹10000/- ಮೌಲ್ಯದ ಪೆನ್ ಮತ್ತು ನೋಟ್ ಪುಸ್ತಕಗಳ ವಿತರಣೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.


ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಪುತ್ತೂರು ಅಧ್ಯಕ್ಷೆ ಮಲ್ಲಿಕಾ ಜೆ ಆರ್ ರೈ, ಕಾರ್ಯದರ್ಶಿ ರೋಹಿಣಿ ಆಚಾರ್ಯ, ಕೋಶಾಧಿಕಾರಿ ಸುಮಂಗಲ ಶಣೈ ಶಾರದಾ ಪ್ರಭು ಹಾಗೂ ಸದಸ್ಯರೆಲ್ಲರ ಒಗ್ಗೂಡುವಿಕೆಯಿಂದ ಹಾಗೂ ಸ್ಪಂದನ ಟ್ರಸ್ಟ್‌ ನ ಅಧ್ಯಕ್ಷೆ ಸುಮಿತ್ರ, ಕೋಶಾಧಿಕಾರಿ ಕಾವ್ಯ, ಸದಸ್ಯ ಅವಿನಾಶ್, ಎಸ್ ಡಿ ಎಂ ಸಿ ಅಧ್ಯಕ್ಷ ಬಾಬು ಮರಿಕೆ, ನಿಕಟಪೂರ್ವ ಅಧ್ಯಕ್ಷರು, ಶಾಲಾ ಶಿಕ್ಷಕರು, ಮಕ್ಕಳು ಉಪಸ್ಥಿತಿಯಲ್ಲಿ ನೋಟ್ಸ್ ಪುಸ್ತಕಗಳ ವಿತರಣೆ ನಡೆಯಿತು.ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಅಧ್ಯಕ್ಷೆ ಮಲ್ಲಿಕಾ ಜೆ ಆರ್ ರೈ ಅವರ ಪ್ರಾಯೋಜಕತ್ವದಲ್ಲಿ ಎಲ್ಲಾ ಮಕ್ಕಳಿಗೂ ಲೇಖನಿ ವಿತರಿಸಲಾಯಿತು.


Post a Comment

0 Comments
Post a Comment (0)
To Top