ಪಣಜಿ: ಶನಿವಾರ ಪಣಜಿಯ ಗೋವಾ ರಾಜ್ಯ ಪತ್ರಕರ್ತರ ಒಕ್ಕೂಟದ ಕಛೇರಿಯಲ್ಲಿ ನಡೆದ ಚುನಾವಣೆಯಲ್ಲಿ ಸತತ ಮೂರನೇಯ ಬಾರಿಗೆ ಗೋವಾ ರಾಜ್ಯ ಪತ್ರಕರ್ತರ ಒಕ್ಕೂಟದ ಅಧ್ಯಕ್ಷರಾಗಿ ರಾಜ್‍ತಿಲಕ್ ನಾಯ್ಕ ಆಯ್ಕೆಯಾಗಿದ್ದಾರೆ.
ಚುನಾವಾಧಿಕಾರಿಯಾಗಿ ವಾಮನ್ ಪ್ರಭು ಘೋಷಿಸಿದ ಫಲಿತಾಂಶದಲ್ಲಿ ರಾಜ್‍ತಿಲಕ್ ನಾಯ್ಕ 135 ಮತಗಳನ್ನು ಗಳಿಸಿ ಜಯಗಳಿಸಿದ್ದು,ಪ್ರತಿಸ್ಫರ್ಧಿ ಅಮಿತ್ ಬಾಗ್ಳೆ 53 ಮತಗಳನ್ನು ಪಡೆದುಕೊಂಡರು. ರಾಜ್ಯದ ಒಟ್ಟೂ 226 ಅರ್ಹ ಮತದಾರರಲ್ಲಿ 196 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು,. ಶೇ 86.72 ರಷ್ಟು ಮತದಾನವಾಗಿದ್ದು, 3 ಮತಗಳನ್ನು ಅಸಿಂಧು ಎಂದು ಘೋಷಿಸಲಾಯಿತು. ರಾಜ್‍ತಿಲಕ್ ನಾಯ್ಕ ರವರು ರಾಷ್ಟ್ರೀಯ ಪತ್ರಿಕೆಯ ಛಾಯಾಗ್ರಾಹಕ/ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್‍ತಿಲಕ್ ನಾಯ್ಕ ರವರ ಆಯ್ಕೆಗೆ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಅಭಿನಂದನೆ ಸಲ್ಲಿಸಿದ್ದಾರೆ.
ಕಾರ್ಯಕಾರಿ ಸಮಿತಿಯ ಸದಸ್ಯರಾಗಿ-ವಾಸುದೇವ್ ಪಾಗಿ (139 ಮತಗಳು), ಅಮರೇಶ್ ಪರಬ್ (125 ಮತಗಳು), ಸಂದೀಪ್ ದೇಸಾಯಿ (120 ಮತಗಳು), ಔದುಂಬರ್ ಶಿಂಧೆ (105 ಮತಗಳು), ಅಜಯ್ ಅನಂತ್ ಲಾಡ್ (118 ಮತಗಳು), ಉಪೇಂದ್ರ ನಾಯ್ಕ್ (100 ಮತಗಳು), ಅಮರ್ ಪಾಟೀಲ್ (97 ಮತಗಳು), ವಿಠ್ಠಲ್ ಗಾವಡೆ (ಪರ್ವಾಡ್ಕರ್) (91 ಮತಗಳು), ವಿಲಿಯಂ ರೋಡ್ರಿಗಸ್ (90 ಮತಗಳು), ಸ್ವಪ್ನಿಲ್ ತಾರಿ (87 ಮತಗಳು) ಮತಗಳನ್ನು ಪಡೆದು ಜಯಗಳಿಸಿದ್ದಾರೆ.
ಚುನಾವಣೆಯನ್ನು ಸಂಘಟಿತವಾಗಿ ಆಯೋಜಿಸಿದ್ದಕ್ಕಾಗಿ ಜಿಯುಜೆ ಕಾರ್ಯಕಾರಿ ಸಮಿತಿಯ ಕಿಶೋರ ನಾಯ್ಕ ಗಾಂವ್ಕರ್, ಅರವಿಂದ ಧುರಿ ಮತ್ತು ಸಗುಣ ಗಾವಡೆ ಸೇರಿದಂತೆ ಚುನಾವಣೆ ನಡೆಸಲು ಮತ್ತು ಮತ ಎಣಿಕೆ ಪ್ರಕ್ರಿಯೆಯಲ್ಲಿ ಸಹಕರಿಸಿದ ಜಿಯುಜೆ ಸದಸ್ಯರಿಗೆ ಚುನಾವಣಾಧಿಕಾರಿ ವಾಮನ್ ಪ್ರಭು ಧನ್ಯವಾದ ಸಲ್ಲಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ