ಉಡುಪಿ: ರಾಗ ಧನ ಉಡುಪಿ (ರಿ) ಇದರ ವಾರ್ಷಿಕ ಮಹಾಸಭೆಯು ಬುಧವಾರ (ಜೂ.26) ಕಡಿಯಾಳಿಯ ವಿದುಷಿ ಶ್ರೀಮತಿ ಸರೋಜಾ ಆರ್. ಆಚಾರ್ಯ ಅವರ ನಿವಾಸದಲ್ಲಿ ನಡೆಯಿತು. ಕಾರ್ಯದರ್ಶಿ ಉಮಾಶಂಕರಿಯವರು ಕಳೆದ ವರ್ಷದ ಕಾರ್ಯ ಚಟುವಟಿಕೆಗಳ ವಿಸ್ತೃತ ವರದಿಯನ್ನು ಮಂಡಿಸಿದರು. ಕೋಶಾಧಿಕಾರಿ ಪ್ರೊ. ಸದಾಶಿವ ರಾವ್ ಕಳೆದ ವರ್ಷದ ಆಯವ್ಯಯದ ಲೆಕ್ಕಪತ್ರ ಮಂಡಿಸಿ ಸಭೆಯ ಅನುಮೋದನೆ ಪಡೆದರು.
ಅಧ್ಯಕ್ಷ ಡಾ. ಶ್ರೀಕಿರಣ ಹೆಬ್ಬಾರ್ ಮುಂದಿನ ವರ್ಷದ, ಸಂಸ್ಥೆಯ ಚಟುವಟಿಕೆಗಳ ರೂಪುರೇಷೆಗಳನ್ನು ಮಂಡಿಸಿದರು, ಆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಇತ್ತೀಚೆಗೆ ನಮ್ಮನ್ನಗಲಿದ ಸಂಗೀತ ಲೋಕದ ಧ್ರುವ ತಾರೆ, ಸರೋದ್ ಮಾಂತ್ರಿಕ ಪಂಡಿತ್ ರಾಜೀವ್ ತಾರಾನಾಥ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಮಹಾಸಭೆಯಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರು ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು. ಸರೋಜಾ ಆಚಾರ್ಯ ಅವರು ಪ್ರಾರ್ಥಿಸಿದರು. ಕಾರ್ಯದರ್ಶಿ ಉಮಾಶಂಕರಿ ಅವರು ಸ್ವಾಗತಿಸಿ, ವಂದನಾರ್ಪಣೆಗೈದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ